ಕನ್ನಡ ನಾಡು | Kannada Naadu

ಸ್ಪೀಕರ್ ಭೇಟಿ ಮಾಡಿದ ಶ್ರೀಲಂಕಾ, ನೇಪಾಳ ಪತ್ರಕರ್ತರ ನಿಯೋಗ

29 Apr, 2025

 

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂೃಜೆ)ಆಹ್ವಾನದ ಮೇರೆಗೆ ಬಂದಿದ್ದ ಶ್ರೀಲಂಕಾ ಮತ್ತು ನೇಪಾಳ ಪತ್ರಕರ್ತರ ನಿಯೋಗ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚೆ ನಡೆಸಿತು.

ರಾಜ್ಯದಲ್ಲಿ ವಿಧಾನಸಭೆ ಕಲಾಪಗಳು ಹೇಗೆ ನಡೆಯುತ್ತವೆ ಎನ್ನುವ ಮಾಹಿತಿಯನ್ನು ತಿಳಿದುಕೊಂಡರು ಮತ್ತು ಅಲ್ಲಿರುವ ವ್ಯವಸ್ಥೆಯ ಬಗ್ಗೆಯೂ ಅವರು ಮಾಹಿತಿ ನೀಡಿದರು.
ಎಶಿಯನ್ ಮೀಡಿಯಾ ಕಲ್ಚರಲ್ ಅಸೋಶಿಯೇಶನ್‌ನ ಅಧ್ಯಕ್ಷ ಪುಪಲ್ ಜನಕ ಜಯಸಿಂಗೆ, ಸುಭಾಷಿನಿ ಡಿಸಿಲ್ವಾ, ಶುಭ ರತ್ನಾಯಕೆ, ಬರ್ನಾಡ್, ನೇಪಾಳದ ಹಿರಿಯ ಪತ್ರಕರ್ತರಾದ ಸಂಜೋತಾ ಗೋಡಲ್, ಸರೋಜ ದಹಲ್, ಕೆಯುಡಬ್ಲೂೃಕೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ವಿಧಾನಸಭೆ ಸ್ಪೀಕರ್ ಕಚೇರಿಯ ಸಂಯೋಜಕ ಜ್ಞಾನಶೇಖರ್ ಹಾಜರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by