ಭಾರತದ ಹೆಮ್ಮೆಯ ಧರ್ಮ ಗ್ರಂಥ ಭಗವದ್ಗೀತೆ ಮತ್ತು ಭರತ ಮುನಿಯಿಂದ ಆರಂಭಿಸಲ್ಪಟ್ಟ ಭರತ ನಾಟ್ಯಶಾಸ್ತ್ರವನ್ನು ʻಯುನೆಸ್ಕೋ ಸಂಸ್ಥೆಯʼ ‘ಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್’ ಎಂಬ ವಿಶ್ವಪ್ರಸಿದ್ಧ ಪಟ್ಟಿಗೆ ಸೇರಿಸಲಾಗಿದೆ.
ಈ ವಿಷಯವನ್ನು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಅಧಿಕೃತವಾಗಿ ಘೋಷಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಸೇರ್ಪಡೆ ಭಾರತೀಯರ ಕಾಲಾತೀತ ಜ್ಞಾನ, ಸಂಸ್ಕೃತಿ, ಮತ್ತು ಪಾರಂಪರ್ಯದ ಜಾಗತಿಕ ಮಾನ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.
ನಾಟ್ಯಶಾಸ್ತ್ರವು ಭಾರತೀಯ ನೃತ್ಯ-ನಾಟಕ ಕಲೆಯ ಮೂಲಗ್ರಂಥವಾಗಿದ್ದು, ಭಗವದ್ಗೀತೆ ಮಾನವತೆಯ ಆತ್ಮಶೋಧನೆಗೆ ಮಾರ್ಗದರ್ಶಕ ಗ್ರಂಥವಾಗಿದೆ. ಇವುಗಳ ಸೇರ್ಪಡೆ ಭಾರತದ ತಾತ್ವಿಕ, ಸಾಂಸ್ಕೃತಿಕ ಬೆಳವಣಿಗೆಗೆ ಅಂತಾರಾಷ್ಟ್ರೀಯ ಮನ್ನಣೆಯಾಗಿದೆ.
Publisher: ಕನ್ನಡ ನಾಡು | Kannada Naadu