ಕನ್ನಡ ನಾಡು | Kannada Naadu

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿ ಎಸ್.ರಘುನಾಥ್ ರವರ ಪದಗ್ರಹಣ ಸಮಾರಂಭ

16 Apr, 2025

 

  • ಹಿರಿಯ ಉಪಾಧ್ಯಕ್ಷರಾಗಿ ಆರ್.ಲಕ್ಷ್ಮಿಕಾಂತ್ , ಖಜಾಂಚಿಯಾಗಿ ಸುಬ್ಬನರಸಿಂಹ(ಸುಬ್ಬಣ್ಣ)ನೇಮಕ
  • ಮಕ್ಕಳ ಶಿಕ್ಷಣಕ್ಕೆ 100ಕೋಟಿ ರೂಪಾಯಿ ದತ್ತಿನಿಧಿ ಯೋಜನೆಗೆ ಚಾಲನೆ, ಪ್ರಥಮದಿನದಲ್ಲಿ 35ಲಕ್ಷಕ್ಕೂ ಹೆಚ್ಚು ದೇಣಿಗೆ ಸಂಗ್ರಹ

 

ಬೆಂಗಳೂರು: ಗಾಯಿತ್ರಿ ಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ರಘುನಾಥ್ ರವರ ಪದಗ್ರಹಣ ಸಮಾರಂಭ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿ ಎಸ್.ರಘುನಾಥ್ ರವರು ವಿಶೇಷಪೂಜೆ ಸಲ್ಲಿಸಿ, ಪದಗ್ರಹಣ ಮಾಡಿದರು, ಹಿರಿಯ ಉಪಾಧ್ಯಕ್ಷರಾಗಿ ಆರ್.ಲಕ್ಷ್ಮಿಕಾಂತ್  ರವರು, ಖಜಾಂಚಿಯಾಗಿ ಸುಬ್ಬನರಸಿಂಹ(ಸುಬ್ಬಣ್ಣ)ರವರನ್ನು ಈಸಂದರ್ಭದಲ್ಲಿ ನೇಮಕ ಮಾಡಲಾಯಿತು.

ಎಸ್.ರಘುನಾಥ್ ರವರು ಮಾತನಾಡಿ ವಿಪ್ರರು ಬುದ್ದಿವಂತರು, ವಿದ್ಯಾವಂತರು ಇಡಿ ವಿಶ್ವಕ್ಕೆ ಗೊತ್ತು, ಅದರು ನಮ್ಮಲ್ಲಿ ಆರ್ಥಿಕವಾಗಿ ಹಿಂದುಳಿದವರು ಇದ್ದಾರೆ ಮತ್ತು ವಿಪ್ರ ಸಮುದಾಯದ ಮಕ್ಕಳು ವಿದ್ಯಾಭ್ಯಾಸ ಪೂರೈಸಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

ಬ್ರಾಹ್ಮಣ ಸಮುದಾಯದ ಮಕ್ಕಳಿಗೆ ಶಿಕ್ಷಣಕ್ಕೆ,  ಪ್ರಥಮ ಹಂತವಾಗಿ ಶಿಕ್ಷಣಕ್ಕೆ ಆದ್ಯತೆ ನೀಡಿ ಪೈಮರಿ ಶಾಲೆಯಿಂದ ಕಾಲೇಜಿನವರಗೆ ವಿದ್ಯಾಭ್ಯಾಸ ಮಾಡಲು ಕಟ್ಟಡ ಸ್ಥಾಪನೆ. ವಿಪ್ರರಿಗೆ  ಆರ್ಥಿಕವಾಗಿ ಚೈತನ್ಯ ಶಕ್ತಿ ತುಂಬಬೇಕು ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳು ರೂಪಿಸಲಾಗಿದೆ.

 ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಗಳು ಈಡೇರಿಸಲು ಕಟಿಬದ್ದವಾಗಿ ಶ್ರಮಿಸುತ್ತೇನೆ, ನುಡಿದಂತೆ ನಡೆ, ನಡೆದಂತೆ ನುಡಿಯುತ್ತೇನೆ .ರಾಜ್ಯದಲ್ಲಿರುವ ಎಲ್ಲ ವಿಪ್ರ ಭಾಂದವರು ಸಹಕಾರ, ಬೆಂಬಲ ನೀಡಬೇಕು.

100ಕೋಟಿ ರೂಪಾಯಿ ದೇಣಿಗೆ ದತ್ತಿ ನಿಧಿ ಯೋಜನೆಗೆ ಚಾಲನೆ ನೀಡಲಾಗಿದೆ 35ಲಕ್ಷಕ್ಕೂ ಹೆಚ್ಚು ಹಣ ದೇಣಿಗೆ ರೂಪದಲ್ಲಿ ಒಂದೇ ದಿನದಲ್ಲಿ ಬಂದಿದೆ, ಬ್ಯಾಂಕ್ ಡಿಪಾಸಿಟ್ ಮಾಡಲಾಗುವುದು ಎಂದು ಹೇಳಿದರು.

ಆರ್.ಲಕ್ಷ್ಮಿಕಾಂತ್ ರವರು ಮಾತನಾಡಿ ಬ್ರಾಹ್ಮಣ ಎಂದರೆ ಎಲ್ಲರು ಒಂದೇ ನಮ್ಮಲ್ಲಿ ತಂಡಗಳು ಇಲ್ಲ, ಎಲ್ಲರು ಒಟ್ಟಾಗಿ ಒಂದು ತಂಡವಾಗಿ ವಿಪ್ರ ಶ್ರೇಯೋಭಿವೃದ್ದಿಗೆ ಶ್ರಮಿಸಲಾಗುವುದು.

100ಕೋಟಿ ದೇಣಿಗೆ ಸಂಗ್ರಹ ಮಾಡುವ ಕಾರ್ಯ ಆರಂಭವಾಗಿದೆ, ದಾನಿಗಳಿಂದ ಹಣ ವಿಪ್ರರ ಮಕ್ಕಳ ಶಿಕ್ಷಣ ಕ್ಷೇತ್ರಕ್ಕೆ ಸದಪಯೋಗವಾಗಲಿದೆ ಎಂದು ಹೇಳಿದರು.

ಶಾಸಕರುಗಳಾದ  ರವಿಸುಬ್ರಮಣ್ಯ, ಸಿ.ಕೆ.ರಾಮಮೂರ್ತಿ,ಮಾಜಿ ಅಧ್ಯಕ್ಷರಾದ ಎಂ.ಆರ್.ವಿ.ಪ್ರಸಾದ್, ಪಾವಗಡ ಪ್ರಕಾಶ್ ರಾವ್ ಮತ್ತು ಜಿಲ್ಲಾ ಪ್ರತಿನಿಧಿಗಳಾದ ರಾಮಚಂದ್ರ, ಪಿ.ಎಸ್.ಪ್ರಕಾಶ್, ಜಿ.ಎಸ್.ನಾಗೇಶ್, ದಿಲೀಪ್, ಸತೀಶ್ ಉರಾಳ್, ರಾಜಶೇಖರ್ ಜಿ.ರಾವ್, ಕೆ.ಎನ್.ರವಿಕುಮಾರ್, ಅಂಬಿಕಾ ರಾಮಚಂದ್ರ, ಎಸ್.ಎಸ್.ಪ್ರಸಾದ್, ಶ್ರೀನಿವಾಸ್ ಹಾಗೂ ವಿಪ್ರಮುಖಂಡರುಗಳು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by