ಉಡುಪಿ ಶ್ರೀಕೃಷ್ಣ ಮಠ ಮಹತ್ವದ ನಿರ್ಧಾರ ಕೈಗೊಂಡಿದೆ. ಸ್ವಾಮೀಜಿಗಳ ಓಡಾಟಕ್ಕೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಮತ್ತು ಮುಂಜಾನೆ ಮುಜುಗರದ ಸನ್ನಿವೇಶ ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗಿದೆ.
ಇನ್ಮುಂದೆ ಶ್ರೀಕೃಷ್ಣಮಠದ ರಥ ಬೀದಿಯಲ್ಲಿ ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ದಿಂಗ್ ಫೋಟೋ ಶೂಟ್ ನಿಷೇಧಿಸಲಾಗಿದೆ.
ಈ ಬಗ್ಗೆ ಪರ್ಯಾಯ ಪುತ್ತಿಗೆ ಮಠ ಮಾಹಿತಿ ನೀಡಿದ್ದು, ಶ್ರೀಕೃಷ್ಣ ಮಠದ ರಥ ಬೀದಿಯಲ್ಲಿ ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ದಿಂಗ್ ಫೋಟೋ ಶೂಟ್ ಗಳಿಗೆ ನಿಷೇಧ ವಿಧಿಸಿದೆ.
ಫೋಟೋ ಶೂಟ್ ನಿಂದಾಗಿ ಸ್ವಾಮೀಜಿಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಮುಂಜಾನೆ ಮುಜುಗರದ ಸನ್ನಿವೇಶ ಸೃಷ್ಟಿಯಾಗುತ್ತದೆ. ಇದನ್ನು ತಪ್ಪಿಸಲು ಮಠ ಈ ನಿರ್ಧಾರ ಕೈಗೊಂಡಿದೆ.
ಪವಿತ್ರ ಸ್ಥಳವಾದ ಶ್ರೀಕೃಷ್ಣಮಠ ದ ರಥ ಬೀದಿಯಲ್ಲಿ ಪ್ರಿ ವೆಡ್ದಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಹೆಸರಿನಲ್ಲಿ ಬೆಳ್ಳಂಬೆಳಿಗ್ಗೆ ಮಠದ ಆವರಣದಲ್ಲಿ ಅಸಭ್ಯ ವರ್ತನೆ ಕಂಡುಬರುತ್ತಿದೆ. ಫೋಟೋಗ್ರಾಫರ್ಸ್ ಹಾವಳಿಯೂ ಹೆಚ್ಚಾಗಿದೆ, ಹೀಗಾಗಿ ಮಠದ ರಥಬೀದಿಯಲ್ಲಿ ಫೋಟೋಶೂಟ್ ನಿಷೇಧಿಸಲಾಗಿದೆ ಎಂದು ತಿಳಿಸಿದೆ.
Publisher: ಕನ್ನಡ ನಾಡು | Kannada Naadu