ಕನ್ನಡ ನಾಡು | Kannada Naadu

ಎಲ್ಲಾ ಪ್ರವಾಸಿ ಭಾಗೀದಾರರ ಆಸಕ್ತಿಯನ್ನು ಸಂಗ್ರಹಿಸಲು ಆನ್‍ಲೈನ್ ವೋಟಿಂಗ್

07 Apr, 2025

 

ಬೆಂಗಳೂರು : ಕರ್ನಾಟಕ ಪ್ರವಾಸೋದ್ಯಮವನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡಿಸುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಪ್ರವಾಸಿ ತಾಣಗಳನ್ನು ಹಾಗೂ ನಾಡಿನ ಕಲೆ, ಸಂಸ್ಕøತಿ, ಸಾಂಸ್ಕøತಿಕ ಪರಂಪರೆ ಸೇರಿದಂತೆ ವಾಸ್ತುಶಿಲ್ಪವನ್ನು ಇತರೆ ರಾಷ್ಟ್ರಗಳಿಗೆ ಪರಿಚಯಿಸುವ ಸಲುವಾಗಿ ಎಲ್ಲಾ ಪ್ರವಾಸಿ ಭಾಗೀದಾರರ ಆಸಕ್ತಿಯನ್ನು ಸಂಗ್ರಹಿಸಲು ಆನ್‍ಲೈನ್ ವೋಟಿಂಗ್ ಆರಂಭಿಸಲಾಗಿದೆ.

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ವಿವಿಧ ದೇಶಗಳಲ್ಲಿ ನಡೆಯಲಿರುವ ಪ್ರಮುಖ ಅಂತರಾಷ್ಟ್ರೀಯ ಮೇಳಗಳಲ್ಲಿ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಆಯೋಜಿಸಲ್ಪಡುವ ವಿವಿಧ ರಾಷ್ಟ್ರೀಯ ಮೇಳಗಳಲ್ಲಿ ಇಲಾಖೆಯು ಪ್ರತ್ಯೇಕವಾಗಿ ಮಳಿಗೆ ಜಾಗವನ್ನು ಪಡೆದು ನಾಡಿನ ಕಲೆ, ಸಂಸ್ಕøತಿ, ಪರಂಪರೆ, ಶ್ರೀಮಂತ ಇತಿಹಾಸ, ವನ್ಯಜೀವಿ ಮತ್ತು ಪ್ರವಾಸಿ ತಾಣಗಳ ಅತ್ಯಾಕರ್ಷಕ ವಿನ್ಯಾಸಗಳಲ್ಲಿ ಮಳಿಗೆಯನ್ನು ತೆರೆದು, ರಾಜ್ಯದ ಪ್ರವಾಸಿ ಭಾಗಿದಾರರೊಂದಿಗೆ ಈ ಮೇಳಗಳ ಸಂದರ್ಭದಲ್ಲಿ ಇಲಾಖಾ ವತಿಯಿಂದ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ನಗರಗಳಲ್ಲಿ ಇಲಾಖಾ ವತಿಯಿಂದ ಬಿ2ಬಿ ರೋಡ್ ಷೋಗಳ ಕಾರ್ಯಕ್ರಮಗಳನ್ನು ಸಹ ಯಶಸ್ವಿಯಾಗಿ ಆಯೋಜಿಸಲಾಗಿರುತ್ತದೆ.

2025-26ನೇ ಸಾಲಿನಲ್ಲಿಯೂ ದೇಶದ ವಿವಿಧ ಭಾಗಗಳಲ್ಲಿ ನಡೆಯುವ ರಾಷ್ಟ್ರೀಯ ಮೇಳಗಳಲ್ಲಿ ಹಾಗೂ ವಿವಿಧ ದೇಶಗಳಲ್ಲಿ ನಡೆಯುವ ಅಂತರಾಷ್ಟ್ರೀಯ ಮೇಳಗಳಲ್ಲಿ ಇಲಾಖೆಯು ಭಾಗವಹಿಸುವ ಸಂಬಂಧ ಎಲ್ಲಾ ಮೇಳಗಳನ್ನು ಹಾಗೂ ಇಲಾಖಾ ವತಿಯಿಂದ ಆಯೋಜಿಸಲು ಉದ್ದೇಶಿಸಲಾದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ರೋಡ್ ಷೋಗಳ ಸಂಭಾವ್ಯ ಪಟ್ಟಿಯನ್ನು ಒಳಗೊಂಡಂತೆ ರಾಜ್ಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿರುವ ಎಲ್ಲಾ ಪ್ರವಾಸಿ ಭಾಗಿದಾರರ ಆಸಕ್ತಿಯನ್ನು ಸಂಗ್ರಹಿಸಲು ಇಲಾಖೆಯ ಅಧಿಕೃತ ಜಾಲತಾಣ www.karnatakatourism.org  ನಲ್ಲಿ ವೋಟಿಂಗ್ ಪೋಲ್‍ಅನ್ನು ಸೃಜಿಸಲಾಗಿರುತ್ತದೆ.

ರಾಜ್ಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿರುವ ಎಲ್ಲಾ ಪ್ರವಾಸಿ ಭಾಗಿದಾರರ ಆಸಕ್ತಿಯನ್ನು ಸಂಗ್ರಹಿಸಲು ಇಲಾಖೆಯ ಅಧಿಕೃತ ಜಾಲತಾಣ www.karnatakatourism.org  ನಲ್ಲಿ ಸೃಜಿಸಲಾದ ವೋಟಿಂಗ್ ಪೋಲ್ ನಲ್ಲಿ ಗರಿಷ್ಟ ಮಟ್ಟದಲ್ಲಿ ವೋಟಿಂಗ್ ಸಂಗ್ರಹಿಸಲಾಗುತ್ತದೆ.

ರಾಜ್ಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿರುವ ಎಲ್ಲಾ ಪ್ರವಾಸಿ ಭಾಗೀದಾರರು ಆನ್‍ಲೈನ್ ವೋಟಿಂಗ್ ಮಾಡುವಂತೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by