ಬೀದರ್ -ಕರ್ನಾಟಕ ಲೇಖಕಿಯರ ಸಂಘ , ಬೀದರ್ ಜಿಲ್ಲಾ ಶಾಖೆ ಮಾತು ಕಿತ್ತೂರು ಚೆನ್ನಮ್ಮ ಮಹಿಳಾ ಮಂಡಲದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬೀದರ್ನ ಕಾಯಕ ಯೋಗಿನಿ, ನಿತ್ಯ ದಾಸೋಹಿ ಡಾ.ಗುರಮ್ಮ ಸಿದ್ಧಾರೆಡ್ಡಿ ಅವರಿಗೆ ಅಕ್ಕ ಅನ್ನಪೂರ್ಣೇಶ್ವರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರದ ಕೃಷ್ಣ ದರ್ಶಿನಿ ಸಭಾಮಂಟಪದಲ್ಲಿ ಆಯೋಜಿಸಲಾದ ಮಹಿಳಾ ದಿನಾಚರಣೆಯನ್ನು ಬೀದರ್ ವಿಶ್ವವಿದ್ಯಾಲಯದ ಕುಲಸಚಿವರಾದ ಸುರೇಖಾ ಅವರು ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ ಮಾತನಾಡುತ್ತಾ , ಬೀದರ್ ನಲ್ಲಿ ಮಹಿಳೆಯರು ಪ್ರತಿಯೊಂದು ರಂಗದಲ್ಲಿ ಮುಂಚೂಣಿಯಲ್ಲಿದ್ದು , ತಮ್ಮ ನಡುವೆ ಸಹ ಸೌಹಾರ್ದಯುತ ಸಂಬಂಧವನ್ನು ಹೊಂದಿದ್ದಾರೆ. ವಿವೇಶವಾಗಿ ಈ ವರ್ಷ ಬಹಳಷ್ಟು ಸಂಘ ಸಂಸ್ಥೆಗಳು , ಸರಕಾರಿ ಕಚೇರಿಗಳಲ್ಲಿ ಮಹಿಳಾ ದಿನಚರಿಯನ್ನು ಆಚರಿಸಿ ಮಹಿಳೆಯರಿಗೆ ತಮ್ಮ ಸುಪ್ತ ಕಲೆಯನ್ನು ಹೊರಹಾಕಲು ವೇದಿಕೆ ಕಲ್ಪಿಸಿ ಕೊಡಲಾಗಿದೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವುದು ಖುಷಿಯ ವಿಚಾರವಾಗಿದೆ.
80ರ ವಯಸ್ಸಿನಲ್ಲಿಯೂ ಗುರಮ್ಮ ಸಿದ್ದಾರೆಡ್ಡಿ ಅವರು ಎಲ್ಲಾ ಕಡೆ ಉತ್ಸಾಹದಿಂದ ಸಂಚರಿಸುತ್ತಾರೆ. ಮಹಿಳೆಯರು ಏನು ಬೇಕಾದರು ಸಾಧಿಸಬಹುದು ಎಂಬುವುದಕ್ಕೆ ಅವರು ಸ್ಫೂರ್ತಿಯಾಗಿದ್ದಾರೆ ಎಂದರು.
ಶೋಷಣೆ ಮುಕ್ತ ಸಮಾಜ ಇನ್ನೂ ನಿರ್ಮಾಣವಾಗಿಲ್ಲ. ಆದ್ದರಿಂದ ಮಹಿಳೆಯರು ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಕರೆ ನೀಡಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಪಾರ್ವತಿ ಸೋನಾರೆ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಹೆಚ್.ಎಸ್.ಸಿಂಧು ರಘು, ಪುಣ್ಯವತಿ ವಿಸಾಜಿ, ಜಯದೇವಿ ಯದಲಾಪುರೆ, ವಿದ್ಯಾವತಿ ಬಲ್ಲೂರ, ಪ್ರತಿಭಾ ಚಾಮರ್, ಸ್ವರೂಪರಾಣಿ ನಾಗೂರೆ, ರೂಪಾ ಪಾಟೀಲ, ಡಾ.ಶ್ರೇಯಾ ಮಹಿಂದ್ರಕರ್, ರೇಖಾ ಸೌದಿ ಸೇರಿದಂತೆ ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
Publisher: ಕನ್ನಡ ನಾಡು | Kannada Naadu