ಬೆಂಗಳೂರು : ಬಂಜಾರ ಸಂಸ್ಕøತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ ಮಾರ್ಚ್ 27 ರಂದು ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ಮಟ್ಟದ ಬಂಜಾರ ಸಾಹಿತ್ಯ ಹಾಗೂ ಸಾಂಸ್ಕøತಿಕ ಉತ್ಸವ ಹಾಗೂ 2024ನೇ ಸಾಲಿನ ಪ್ರಥಮ ಶ್ರೀ ಸಂತ ಸೇವಾಲಾಲ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಂಜಾರ ಸಂಸ್ಕøತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷ ಡಾ.ಎ.ಆರ್. ಗೋವಿಂದಸ್ವಾಮಿ ತಿಳಿಸಿದರು.
ಇಂದು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದ ಬಗ್ಗೆ ವಿವರಣೆ ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರು, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡುವರು ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕ್ನನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅವರು ಪ್ರಶಸ್ತಿ ವಿಜೇತರ ಕಿರು ಹೊತ್ತಿಗೆ ಬಿಡುಗಡೆ ಮಾಡುವರು. ಉಪಸಭಾಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ ಅವರು ಘನ ಉಪಸ್ಥಿತಿ ವಹಿಸುವರು. ಚಿಕ್ಕಪೇಟೆ ವಿಧಾನಸಭಾ ಶಾಸಕರಾದ ಡಾ.ಉದಯ್ ಬಿ. ಗರುಡಾಚಾರ್ ಅವರು ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಪ್ರಥಮ ಬಾರಿಗೆ 2024ನೇ ಸಾಲಿನ ಶ್ರೀ ಸಂತ ಸೇವಾಲಾಲ್ ಪ್ರಶಸ್ತಿಯನ್ನು ಡಾ.ಬಿ.ಟಿ.ಲಲಿತನಾಯಕ್ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿ ಮೊತ್ತ 1 ಲಕ್ಷ ರೂ.ಗಳನ್ನು ನೀಡಿ ಗೌರವಿಸಲಾಗುವುದು.
2023ನೇ ವರ್ಷದ ಗೌರವ ಪ್ರಶಸ್ತಿ ಪುರಸ್ಕøತರಾದ ಡಾ.ಕೃಷ್ಣಪ್ಪಾ ಭಿಕ್ಕಪ್ಪಾ ಪವಾರ, ಶಂಕರ್ ಎಚ್ ಲಮಾಣಿ, ಬಾಬು ಲಚ್ಚು ರಾಠೋಡ, ರಾಮಚಂದ್ರ ಭಗವಾನ್ ದಾಸ್, ಡಾ. ಸಣ್ಣರಾಮ, 2024ನೇ ಸಾಲಿನಲ್ಲಿ ಶ್ರೀಮತಿ ಪುಟ್ಟಬಾಯಿ ಲಕ್ಷ್ಮಣ ನಾಯಕ್, ಮಹಾದೇವ ಧರಮು ಚವ್ಹಾಣ್, ಪಿ.ಲಕ್ಷ್ಮಣ ನಾಯಕ್, ಶ್ರೀಮತಿ ಸೀತವ್ವ ಲಮಾಣಿ, ರಾಘವೇಂದ್ರ ನಾಯಕ್ ಇವರುಗಳಿಗೆ ತಲಾ 50 ಲಕ್ಷ ರೂ.ಗಳನ್ನು ನೀಡಿ ಗೌರವಿಸಲಾಗುವುದು.
2023ನೇ ವರ್ಷದ ವಾರ್ಷಿಕ ಪ್ರಶಸ್ತಿ ಪುರಸ್ಕøತರಾದ ಗೋವಿಂದ, ಶ್ರೀಮತಿ ಸೋಮ್ಲವ್ವಾ ಪುಟ್ಟಪ್ಪಾ ಲಮಾಣಿ, ವೆಂಕಟೇಶ್ ನಾಯ್ಕ, ಕುಬೇರ ನಾಯ್ಕ್.ಎಲ್, ಶ್ರೀಮತಿ ಸುಮಂಗಲವ್ವ ಪೊ.ಲಂಬಾಣಿ, ರಾಜು ನಾಯಕ್, ಡಾ.ಬಿ.ಎಸ್.ಪುಷ್ಪ, ಸುನೀಲಕುಮಾರ್ ಚವ್ಹಾಣ, ಹನುಮಂತ ನಾಯಕ್ ಶ್ರೀಮತಿ ಆಶಾ ರಾಠೋಡ ಹಾಗೂ 2024ನೇ ಸಾಲಿನ ಡಾ.ಎಲ್.ಪಿ.ನಾಯಕ ಕಠಾರಿ, ಶ್ರೀಮತಿ ಭಾಗ್ಯಬಾಯಿ ಕೆ.ಛತ್ರಪ್ಪ ತಂಬೂರಿ, ಕಾಂತ ನಾಯಕ್, ಎಸ್.ಮೀಠ್ಯಾನಾಯ್ಕ್, ಸಿ.ಹೆಚ್.ಉಮೇಶ್, ಅಶೋಕ ಸೋಮಲು ವಾಲಿಕಾರ, ಎಲ್.ಎಂ.ನಾಗರಾಜು ಇವರುಗಳಿಗೆ ಹಾಗೂ 2022, 2023 ಹಾಗೂ 2024ನೇ ವರ್ಷದ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಪಡೆದವರಿಗೆ ತಲಾ 25 ಸಾವಿರ ರೂ.ಗಳನ್ನು ನೀಡಿ ಗೌರವಿಸಲಾಗುವುದು ಎಂದರು.
ಪ್ರಶಸ್ತಿ ಪ್ರದಾನ ಸಮಾರಂಭದ ದಿನ ಮದ್ಯಾಹ್ನ 2.30 ಗಂಟೆಗೆ ಹಡ್ಸನ್ ವೃತ್ತದಿಂದ ರವೀಂದ್ರ ಕಲಾಕ್ಷೇತ್ರದವರೆಗೆ ವಿವಿಧ ಬಂಜಾರ ಕಲಾತಂಡಗಳ ಮೆರವಣಿಗೆ, ಸಂಜೆ 4.30 ರಿಂದ 6 ಗಂಟೆಯವರೆಗೆ ವೇದಿಕೆ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಂಜಾರ ಸಂಸ್ಕøತಿ ಮತ್ತು ಭಾಷಾ ಅಕಾಡೆಮಿಯ ರಿಜಿಸ್ಟಾರ್ ಡಿ.ಎಂ.ರವಿಕುಮಾರ್ ಉಪಸ್ಥಿತರಿದ್ದರು.
Publisher: ಕನ್ನಡ ನಾಡು | Kannada Naadu