ಕನ್ನಡ ನಾಡು | Kannada Naadu

ಮಾರ್ಚ್ 25 ರಂದು ಕನದಾಸರ ಕಾವ್ಯಗಳಲ್ಲಿ ಸಾಮೂಹಿಕ ಒಳಗೊಳ್ಳುವಿಕೆಯ ನಿಲುವುಗಳು ಕುರಿತ ವಿಚಾರ ಸಂಕಿರಣ

24 Mar, 2025


           ಬೆಂಗಳೂರು : ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಅವರ ಕಾವ್ಯಕೃತಿಗಳನ್ನು ಕೇಂದ್ರೀಕರಿಸಿ ಸಾಮೂಹಿಕ ಒಳಗೊಳ್ಳುವಿಕೆಯ ನಿಲುವುಗಳು ಎಂಬ ಶೀರ್ಷಿಕೆಯಡಿ ಒಂದು ದಿನದ ವಿಚಾರ ಸಂಕಿರಣವನ್ನು 2025 ರ ಮಾರ್ಚ್ 25 ರಂದು ಬೆಂಗಳೂರಿನ ಸೆಂಟ್ ಆನ್ಸ್ ಮಹಿಳಾ ಪದವಿ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಕನಕದಾಸರ ನಾಲ್ಕು ಕಾವ್ಯಕೃತಿಗಳಲ್ಲಿ ಅಂತರ ತಾರತಮ್ಯವಿಲ್ಲದೆ ಎಲ್ಲರನ್ನು ಒಳಗೊಳ್ಳುವ, ಎಲ್ಲವನ್ನು ಒಳಗೊಳ್ಳುವ ಆಶಯವನ್ನು ಅವರ ಕಾವ್ಯಕೃತಿಗಳು ಪ್ರತಿಪಾದಿಸಿದೆ. ಈ ಆಶಯ ಭಾರತವು ಅಂಗೀಕರಿಸಿ ಅನುಸರಿಸುತ್ತಿರುವ ಸಂವಿಧಾನದ ಆಶಯವೂ ಸಹ ಆಗಿದೆ.

"ಮೋಹನ ತರಂಗಿಣಿ ಕಾವ್ಯದಲ್ಲಿ ಸಾಮೂಹಿಕ ಒಳಗೊಳ್ಳುವಿಕೆಯ ನಿಲುವುಗಳು" ಎಂಬ ವಿಷಯ ಕುರಿತು ಚಂದ್ರಶೇಖರ ತಾಳ್ಯ, ಚಿತ್ರದುರ್ಗ ಅವರು, "ನಳಚರಿತ್ರೆ ಹರಿಭಕ್ತಿಸಾರದಲ್ಲಿ ಸಾಮೂಹಿಕ ಒಳಗೊಳ್ಳುವಿಕೆಯ ನಿಲುವುಗಳು' ಕುರಿತು ಪೆÇ್ರ. ಶಿವಣ್ಣ, ಬೆಂಗಳೂರು ಅವರು, "ರಾಮಧಾನ್ಯ ಚರಿತೆಯಲ್ಲಿ ಸಾಮೂಹಿಕ ಒಳಗೊಳ್ಳುವಿಕೆಯ ನಿಲುವುಗಳು' ಕುರಿತು ಡಾ. ಶೋಭಾರಾಣಿ, ಬೆಂಗಳೂರು ಅವರು, "ನಡೆ ಮತ್ತು ನುಡಿ ಕೀರ್ತನೆಗಳಲ್ಲಿ ಸಾಮೂಹಿಕ ಒಳಗೊಳ್ಳುವಿಕೆಯ ನಿಲುವುಗಳು" ಕುರಿತು ಡಾ. ನಾಗಣ್ಣ ಕಿಲಾರೆ, ಹೊಸಪೇಟೆ ಅವರು  ಭಾಷಣ ಮಂಡಿಸಲಿದ್ದಾರೆ.

ವಿಷಯ ಮಂಡನೆಯ ನಂತರ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಬೆಂಗಳೂರು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸದಸ್ಯ ಕಾರ್ಯದರ್ಶಿಗಳಾದ ಕರಿಯಪ್ಪ ಎನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Publisher: ಕನ್ನಡ ನಾಡು | Kannada Naadu

Login to Give your comment
Powered by