ಕಾರವಾರ : ರಾಜಧಾನಿ ಬೆಂಗಳೂರಿನಿಂದ ಮೈಸೂರು- ಮಂಗಳೂರು ಮಾರ್ಗವಾಗಿ ಮುರುಡೇಶ್ವರಕ್ಕೆ ಸಂಚರಿಸುತ್ತಿದ್ದ ರೈಲು ಕಾರವಾರಕ್ಕೆ ವಿಸ್ತರಣೆಯಾಗುತ್ತಿದೆ. ಸೆಪ್ಟೆಂಬರ್ 2023 ರಲ್ಲಿ ಅಂದಿನ ಸಂಸದ ಪ್ರತಾಪ್ ಸಿಂಹ ಅವರ ಮೂಲಕ ಬೆಂಗಳೂರು, ರೈಲು ಉತ್ತರಕನ್ನಡ ಜಿಲ್ಲೆಯ ಕರಾವಳಿಯ ಎಲ್ಲಾ ತಾಲೂಕುಗಳ ಮೂಲಕ ಕಾರವಾರಕ್ಕೆ ವಿಸ್ತರಣೆಯಾಗಬೇಕು ಎಂಬ ಬೇಡಿಕೆ ಇಡಲಾಗಿತ್ತು. ಹೀಗಾಗಿ ಸತತವಾಗಿ ಪ್ರಯತ್ನ ಪಟ್ಟ ಕುಮಟಾ ಶಾಸಕ ದಿನಕರ್ ಶೆಟ್ಟಿ ಮತ್ತು ಉತ್ತರ ಕನ್ನಡ ರೈಲ್ ಸೇವಾ ಸಮಿತಿಯ ಅಧ್ಯಕ್ಷ ರಾಜೀವ್ ಗಾಂವ್ಕರ್ ನೇತೃತ್ವದ ಪ್ರಯತ್ನಕ್ಕೆ ಸಂಸದ ಕಾಗೇರಿಯವರ ಜತೆಗೂಡುವಿಕೆಯ ಮೂಲಕ ಯಶಸ್ಸು ಸಿಗುವ ಸಾದ್ಯತೆಗಳು ಗೋಚರಿಸಿದೆ.
ಇತ್ತೀಚೆಗೆ ಎರಡನೇ ಬಾರೀ ರೈಲ್ವೇ ಸಚಿವರನ್ನು ಭೇಟಿಯಾಗಿದ್ದ ಸಂಸದ ಕಾಗೇರಿಯವರಿಗೆ ಶೀಘ್ರದಲ್ಲೇ ರೈಲು ಕಾರವಾರಕ್ಕೆ ವಿಸ್ತರಣೆಯಾಗುವ ಕುರಿತು ಸಚಿವರು ತಿಳಿಸಿದ್ದಾರೆ. ಈ ಕುರಿತು ಸಂಬಂದಿತ ಪೂರ್ವ ಸಿದ್ಧತೆಗಳು ಬಹುತೇಕ ಮುಗಿದಿದ್ದು, ಯುಗಾದಿ ಹಬ್ಬದ ಸುಮಾರಿಗೆ ರೈಲು ಕಾರವಾರಕ್ಕೆ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ.
ಈ ಮೂಲಕ ಬೆಂಗಳೂರಿಗೆ ಮೈಸೂರು ಮಾರ್ಗದಲ್ಲಿ ಕಾರವಾರದಿಂದ ಮತ್ತೊಂದು ರೈಲು ಸೇವೆ ಲಭ್ಯವಾಗಲಿದೆ. ಕಳೆದ ಒಂದೂವರೆ ವರ್ಷದಿಂದ ಕುಮಟಾ ಶಾಸಕ ದಿನಕರ್ ಶೆಟ್ಟಿ ಅವರು ರೈಲ್ವೇ ಹೊರಾಟಗಾರ ರಾಜೀವ್ ಗಾಂವ್ಕರ್ ಜತೆ ಸೇರಿಕೊಂಡು ಬಹುತೇಕ ಪ್ರತೀವಾರ ಈ ಬೇಡಿಕೆಯನ್ನು ಪಾಲೋ ಅಪ್ ಮಾಡುತ್ತಲೇ ಬಂದಿದ್ದು, ಈ ಸಂಬಂಧ ಹುಬ್ಬಳ್ಳಿ, ಬೆಂಗಳೂರು ಹಲವು ಅದಿಕಾರಿಗಳನ್ನೂ ಭೇಟಿಯಾಗಿದ್ದರು . ದೆಹಲಿಯ ರೈಲ್ ಭವನದ ಜತೆಗೂ ನಿರಂತರ ಸಂಪರ್ಕ ನಡೆಸಿದ್ದ ಉತ್ತರಕನ್ನಡ ರೈಲ್ವೇ ಸೇವಾ ಸಮಿತಿಯು ಸಂಸದ ಕಾಗೇರಿಯವರ ಮೂಲಕ ಮತ್ತೊಮ್ಮೆ ಸಚಿವರಿಗೆ ಮನವಿ ಮಾಡಿತ್ತು .
ಸಂಸದ ಕಾಗೇರಿಯವರ ಸಹಕಾರದಿಂದ ಈಗಾಗಲೇ ಜಿಲ್ಲೆಗೆ ಹಲವು ರೈಲು ಸೇವೆಗಳು ಲಭ್ಯವಾಗಿದ್ದು, ತಿರುಪತಿ ರೈಲು ಕುಂದಾಪುರದಿಂದ ಮುರುಡೇಶ್ವರಕ್ಕೆ ವಿಸ್ತರಣೆಯಾಗುವುದರ ಜತೆಗೆ , ಹಿಸ್ಸಾರ್ ರೈಲಿಗೆ ಕುಮಟಾದಲ್ಲಿ ನಿಲುಗಡೆ ಘೊಷಣೆಯಾಗಿತ್ತು . ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗವು ಸಂಸದ ಕಾಗೇರಿಯವರ ಆಗಮನದ ಬಳಿಕ ವೇಗ ಪಡೆದುಕೊಂಡಿದ್ದು, ಉತ್ತರ ಕನ್ನಡ ರೈಲ್ ಸೇವಾ ಸಮಿತಿಯ ಜತೆ ಸಂಸದರ ಸಕ್ರೀಯ ಪಾಲ್ಗೊಳ್ಳುವಿಕೆ ಹಲವು ರೈಲು ಸೇವೆಗಳ ಸಕ್ರೀಯ ಆರಂಭಕ್ಕೆ ಕಾರಣವಾಗುತ್ತಿದೆ.
<
Publisher: ಕನ್ನಡ ನಾಡು | Kannada Naadu