ಬೆಂಗಳೂರು : ರಾಜ್ಯದಲ್ಲಿರುವ ಘಾಟ್ ರಸ್ತೆಗಳ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಲು ಪ್ರಯತ್ನ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿರುವ ಒಟ್ಟು 273.64 ಉದ್ದದ 14 ಘಾಟ್ ರಸ್ತೆಗಳಿದ್ದು ಇವುಗಳಲ್ಲಿ ಪ್ರತಿನಿತ್ಯ ವಾಹನಗಳು ಸಂಚರಿಸುತ್ತವೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಹಾಸನದಿಂದ ಮಾರನಹಳ್ಳಿ ರಸ್ತೆಯಲ್ಲಿ ಬರುವ ಶಿರಾಡಿ ಘಾಟ್ನ 10 ಕಿ.ಮೀ. ಉದ್ದ ಒಳಪಡಲಿದ್ದು ಸದರಿ ಭಾಗದಲ್ಲಿ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ. ಸದರಿ ರಸ್ತೆ ಭಾಗದಲ್ಲಿ ಉಂಟಾಗುತ್ತಿರುವ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ, ದಕ್ಷಿಣ ವಲಯ ವ್ಯಾಪ್ತಿಯಲ್ಲಿ 6 ಘಾಟ್ಗಳು ಬರುತ್ತಿದ್ದು ಒಟ್ಟಾರೆ 145 ಕಿ.ಮೀ ಉದ್ದವಿರುತ್ತದೆ. ರಾಷ್ಟ್ರೀಯ ಹೆದ್ದಾರಿ, ಉತ್ತರ ವಲಯ ವ್ಯಾಪ್ತಿಯಲ್ಲಿ 2 ಘಾಟ್ಗಳು ಬರುತ್ತಿದ್ದು ಒಟ್ಟಾರೆ 34 ಕಿ.ಮೀ ಉದ್ದವಿರುತ್ತದೆ. ಸದರಿ ಭಾಗದ ಹೆದ್ದಾರಿಗಳ ನಿರ್ವಹಣೆ/ಅಭಿವೃದ್ಧಿ/ನಿರ್ಮಾಣ ಕಾರ್ಯಗಳನ್ನು ಒಟ್ಟಾರೆ ರೂ.58.62 ಕೋಟಿ ಮೊತ್ತಕ್ಕೆ ಕೇಂದ್ರ ಭೂ ಸಾರಿಗೆ ಮಂತ್ರಾಲಯದ ಅನುದಾನದಲ್ಲಿ ಕೈಗೊಳ್ಳಲಾಗುತ್ತಿದ್ದು, ಘಾಟ್ ಭಾಗದ ಹೆದ್ದಾರಿಗಳು ವಾಹನ ಸಂಚಾರಕ್ಕೆ ಯೋಗ್ಯವಾಗಿರುತ್ತದೆ.
ಲೋಕೋಪಯೋಗಿ ಇಲಾಖೆ ಸಂಪರ್ಕ ಮತ್ತು ಕಟ್ಟಡಗಳು ದಕ್ಷಿಣ, ಉತ್ತರ ಹಾಗೂ ಕೇಂದ್ರ ವಲಯ ವ್ಯಾಪ್ತಿಗಳಲ್ಲಿ 6 ಘಾಟ್ಗಳು ಬರುತ್ತಿದ್ದು ಒಟ್ಟಾರೆ 87.64 ಉದ್ದವಿರುತ್ತದೆ. 2024-25 ನೇ ಸಾಲಿನಲ್ಲಿ ರೂ. 70.60 ಲಕ್ಷಗಳು ಮೊತ್ತದಲ್ಲಿ ವಾರ್ಷಿಕ ರಸ್ತೆ ನಿರ್ವಹಣೆ ಕಾಮಗಾರಿಗಳಡಿ ನಿರ್ವಹಣಾ ಕಾರ್ಯ ಕೈಗೊಳ್ಳಲಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. .
ಘಾಟ್ ರಸ್ತೆಗಳಲ್ಲಿ ಒಟ್ಟಾರೆ 115 ಅಪಾಯಕಾರಿ ಸ್ಥಳಗಳನ್ನು ಗುರುತಿಸಲಾಗಿರುತ್ತದೆ. ರೂ.54.09 ಕೋಟಿ ಅಂದಾಜು ಮೊತ್ತದಲ್ಲಿ ತಡೆಗೋಡೆ ನಿರ್ಮಾಣ, ರಸ್ತೆ ಕುಸಿತದ ಮನರ್ ನಿರ್ಮಾಣ ಹಾಗೂ ಇನ್ನಿತರೆ Rectification ಕಾಮಗಾರಿಗಳನ್ನು ಕೈಗೊಂಡು ಪೂರ್ಣಗೊಳಿಸಲಾಗಿದೆ. ರೂ.102.86 ಕೋಟಿ ಅಂದಾಜು ಮೊತ್ತಕ್ಕೆ 35 ಅಪಾಯಕಾರಿ ಸ್ಥಳಗಳಲ್ಲಿ ಈಗಾಗಲೇ Rectification ಕಾಮಗಾರಿ ಕೈಗೊಳ್ಳಲು ಅನುಮೋದನೆಗೊಂಡಿದ್ದು, ಕಾಮಗಾರಿ ಕೈಗೊಳ್ಳಲು ಕ್ರಮವಹಿಸಲಾಗಿದೆ. ಉಳಿದ 50 ಅಪಾಯಕಾರಿ ಸ್ಥಳಗಳಲ್ಲಿ Rectification ಕಾಮಗಾರಿ ಕೈಗೊಳ್ಳಲು ರೂ.37.95 ಕೋಟಿ ಅನುದಾನದ ಅವಶ್ಯವಿರುತ್ತದೆ.
ಪ್ರಗತಿಯಲ್ಲಿರುವ ರಸ್ತೆ ಭಾಗದಲ್ಲಿ ವಾಹನ ಸವಾರರ ಸುರಕ್ಷತೆಗಾಗಿ ಐ.ಆರ್.ಸಿ. ಎಸ್.ಪಿ-55ರ (Guidelines on Traffic Management in Work Zones) Warning signs, Informatory signs, Regulatory signs 2 ಕೈಗೊಳ್ಳುವ ಭಾಗಗಳಲ್ಲಿ ಅಳವಡಿಸಿ ವಾಹನ ಸವಾರರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಶಿರಾಡಿಘಾಟ್ ಭಾಗದ ರಸ್ತೆಯು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಲಿದ್ದು, ಸದರಿ ರಸ್ತೆ ಅಭಿವೃದ್ಧಿಪಡಿಸುವಾಗ ಸದರಿ ರಸ್ತೆಯಲ್ಲಿ ಚಲಿಸುವ ವಾಹನ ಸಂಚಾರವನ್ನು ಬದಲಿ ಮಾರ್ಗವಾದ ಸಕಲೇಶಪುರದಿಂದ ದೋಣಿಗಲ್ ಮುಖಾಂತರ ಕಪ್ಪಳ್ಳಿ ಸೇರುವ ಸುಮಾರು 3.00 ಕಿ.ಮೀ ಉದ್ದದ ಗ್ರಾಮೀಣ ರಸ್ತೆಯಲ್ಲಿ ಸುಮಾರು 30 ದಿನಗಳವರೆಗೆ ಸಂಚರಿಸಲು ಅವಕಾಶ ಕಲ್ಪಿಸಲು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದ ಅನುಮೋದನೆಯೊಂದಿಗೆ ಕ್ರಮ ವಹಿಸಲಾಗುವುದು.
ರಾಷ್ಟ್ರೀಯ ಹೆದ್ದಾರಿ-75ರ ಅಭಿವೃದ್ಧಿ ಕಾಮಗಾರಿಯನ್ನು ಮೆ: ರಾಜ್ ಕಮಲ್ ಬಿಲ್ಡರ್ಸ್ ಇವರಿಗೆ 573.92. ಕೋಟಿ ಗುತ್ತಿಗೆ ವಹಿಸಿರುತ್ತಾರೆ. ಹೆದ್ದಾರಿಯು 45.00 ಕಿ.ಮೀ. ಉದ್ದವಿದ್ದು, ಸದರಿ ರಸ್ತೆ ಕಾಮಗಾರಿಯು 2019, ಮಾರ್ಚ್ 07ರಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ, ಘಾಟ್ ಭಾಗದಲ್ಲಿ ಬರುವ 10 ಕಿ.ಮೀ. ಉದ್ದದಲ್ಲಿ 30 RoW ಮಾತ್ರವಿದ್ದು ಕಾಮಗಾರಿಯನ್ನು ಕೈಗೊಳ್ಳುವುದು ಬಹು ದೊಡ್ಡ ಸವಾಲಾಗಿದ್ದು ಫಾಟ್ ಭಾಗದ ರಸ್ತೆಯನ್ನು 4 ಪಥದ ಹೆದ್ದಾರಿಯನ್ನಾಗಿ ಅಗಲೀಕರಿಸಬೇಕಾಗಿರುವುದರಿಂದ ಸಕಲೇಶಪುರದಿಂದ ಮಾರನಹಳ್ಳಿಯವರೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ರಸ್ತೆಯನ್ನು ಮುಚ್ಚಲು ಜಿಲ್ಲಾಧಿಕಾರಿಗಳಿಗೆ ಹಲವು ಭಾರಿ ಅನುಮತಿಗಾಗಿ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಜಿಲ್ಲಾಧಿಕಾರಿಗಳು ಅನುಮತಿಯನ್ನು ನೀಡಲು ನಿರಾಕರಿಸಿದ ಕಾರಣ ಕಾಮಗಾರಿಯು ವಿಳಂಭವಾಗಿದ್ದು, ಕಾಮಗಾರಿಯನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಲು ಸಾಧ್ಯವಾಗಿರುವುದಿಲ್ಲ.
ಪ್ರಸ್ತುತ ಘಾಟ್ ಭಾಗದಲ್ಲಿ ಕಾಮಗಾರಿಯನ್ನು ಗುತ್ತಿಗೆದಾರರು ಫೆಬ್ರವರಿ 2024ರಂದು ಪ್ರಾರಂಭಿಸಿರುತ್ತಾರೆ. ರಸ್ತೆಯ ಒಂದು ಭಾಗದಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಿ ಇನ್ನೊಂದು ಭಾಗದಲ್ಲಿ ಅಗಲೀಕರಣ ಕಾಮಗಾರಿ ಕೈಗೊಳ್ಳಲು ಕ್ರಮ ವಹಿಸಲಾಗುತ್ತಿದೆಯೆಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ವರದಿ ಸಲ್ಲಿಸಿರುತ್ತಾರೆ. .
ಸಂಪರ್ಕ ಮತ್ತು ಕಟ್ಟಡಗಳು, ಕೇಂದ್ರ ವಲಯ ವ್ಯಾಪ್ತಿಯಲ್ಲಿ 2024-25 ನೇ ಸಾಲಿನಲ್ಲಿ 5054-ರಾಜ್ಯ ಹೆದ್ದಾರಿ ಸುದಾರಣೆ ಅಡಿ ರೂ.435.00 ಲಕ್ಷಗಳಿಗೆ ಸರಪಳಿ ಬಾಳೇಬರ್ ಘಾಟ್ನ 41.70 ರಿಂದ 42.20ಕಿ.ಮೀ ವರೆಗೆ ಎಡಭಾಗದಲ್ಲಿ ತಡೆಗೋಡೆ ನಿರ್ಮಾಣ (ಚಂಡಿಕಾಂಬ ದೇವಸ್ಥಾನದ ಹತ್ತಿರದ ಹೇರ್ ಪಿಂಗ್ ತಿರುವಿನಲ್ಲಿ) ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪ್ರಸ್ತುತ ಅನುಮೋದನೆಯಾಗಿದ್ದು, ತಾಂತ್ರಿಕ ಬಿಡ್ ಪರಿಶೀಲನೆ ಹಂತದಲ್ಲಿರುತ್ತದೆ. ರಾಷ್ಟ್ರೀಯ ಹೆದ್ದಾರಿ, ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಘಾಟ್ ಭಾಗದಲ್ಲಿ ಒಟ್ಟು 04 ಕಾಮಗಾರಿಗಳನ್ನು ರೂ.977.68 ಕೋಟಿ ಅಂದಾಜು ಮೊತ್ತದಲ್ಲಿ ಅಭಿವೃದ್ಧಿ ಹಾಗೂ ನವೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು 03 ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಲಾಗಿದೆ. 01 ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ. ಉತ್ತರ ವಲಯ ವ್ಯಾಪ್ತಿಯಲ್ಲಿ ಘಾಟ್ ಭಾಗದಲ್ಲಿ 02 ಕಾಮಗಾರಿಗಳನ್ನು ಅಭಿವೃದ್ಧಿ / ನವೀಕರಣ ಕಾಮಗಾರಿಗಳನ್ನು ರೂ.37.90 ಕೋಟಿ ಅಂದಾಜು ಮೊತ್ತದಲ್ಲಿ ಕೈಗೊಂಡಿದ್ದು, 01 ಕಾಮಗಾರಿಯು ಪ್ರಗತಿಯಲ್ಲಿದ್ದು, ಕರಾರಿನಂತೆ ವಿಳಂಭವಾಗಿರುವುದಿಲ್ಲ. 01 ಕಾಮಗಾರಿಯು ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ತಿಳಿಸಿದರು.
Publisher: ಕನ್ನಡ ನಾಡು | Kannada Naadu