ಬೆಂಗಳೂರು : ಕೆ.ಎಸ್.ಎಂ.ಸಿ & ಎ ಸಂಸ್ಥೆಯಲ್ಲಿ ಕೆಟಿಪಿಪಿ ಕಾಯ್ದೆ 1999 ರನ್ವಯ ಇ-ಪೆÇ್ರಕ್ಯೂರ್ ಮೆಂಟ್ ವೆಬ್ ಸೈಟ್ ನಲ್ಲಿ ಟೆಂಡರ್ ನ್ನು ಆಹ್ವಾನಿಸಿ ವ್ಯವಹಾರ ಸಹವರ್ತಿ ನೇಮಕಾತಿ ಪ್ರಕ್ರಿಯೆಯನ್ನು ಮಾಡಲಾಗಿದೆ. ವ್ಯವಹಾರ ಸಹವರ್ತಿಗಳ ಮೂಲಕ ಕಾರ್ಯಗಳನ್ನು ಅನುμÁ್ಠನಗೊಳಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಎಂ.ಬಿ. ಪಾಟೀಲ್ ತಿಳಿಸಿದರು.
ಇಂದು ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯ ಎಸ್.ಎಲ್. ಭೋಜೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರ ವಿವಿಧ ಇಲಾಖೆ ನಿಗಮ ಮಂಡಳಿಗಳ ಕಾರ್ಯಕ್ರಮಗಳನ್ನು ಆಯೋಜಿಸಲು ಸಂಸ್ಥೆಗಳಲ್ಲಿ ನೋಂದಾಯಿತ ವ್ಯವಹಾರ ಸಹವರ್ತಿಗಳ ಮೂಲಕ ಸ್ಪರ್ಧಾತ್ಮಕ ದರಗಳನ್ನು ಪಡೆದು, ಕನಿಷ್ಟ ದರವನ್ನು ಸಲ್ಲಿಸಿರುವ ವ್ಯವಹಾರ ಸಹವರ್ತಿಗಳ ದರಗಳ ಅನ್ವಯ ಇಲಾಖೆಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು.
ಇಲಾಖೆಗಳು ಸಂಸ್ಥೆಯಿಂದ ಸಲ್ಲಿಸಿರುವ ಪ್ರಸ್ತಾವನೆಗಳನ್ನು ಅನುಮೋದಿಸಿ ಕಾರ್ಯಾದೇಶವನ್ನು ನೀಡಿರುತ್ತಾರೆ. ಅದರಂತೆ ಕನಿಷ್ಠ ದರವನ್ನು ಸಲ್ಲಿಸಿರುವ ವ್ಯವಹಾರ ಸಹವರ್ತಿಗಳಿಗೆ ಸಂಸ್ಥೆಯಿಂದ ಸದರಿ ಕಾರ್ಯವನ್ನು ನಿರ್ವಹಿಸಲು ಕಾರ್ಯಾದೇಶವನ್ನು ನೀಡಲಾಗುವುದು. ಕಾರ್ಯ ಚಟುವಟಿಕೆಯು ಪೂರ್ಣಗೊಂಡ ನಂತರ ವ್ಯವಹಾರ ಸಹವರ್ತಿಗಳು ಬಿಲ್ಲನ್ನು ಸಂಸ್ಥೆಗೆ ಸಲ್ಲಿಸುತ್ತಾರೆ. ಅದರಂತೆ ಸಂಸ್ಥೆಯಿಂದ ಬಿಲ್ಲನ್ನು ಹಣ ಪಾವತಿಗಾಗಿ ಇಲಾಖೆ / ನಿಗಮ / ಮಂಡಳಿಗಳಿಗೆ ಸಲ್ಲಿಸಲಾಗುವುದು.
ಇಲಾಖೆಗಳಿಂದ ಬಿಲ್ಲನ್ನು ಮೊತ್ತವನ್ನು ಬಿಡುಗಡೆ ಮಾಡಿದ ನಂತರ ಸಂಸ್ಥೆಯಿಂದ ವ್ಯವಹಾರ ಸಹವರ್ತಿಗೆ ಹಣವನ್ನು ಬಿಡುಗಡೆ ಮಾಡಲಾಗಿರುತ್ತದೆ ಎಂದು ಸಚಿವರು ತಿಳಿಸಿದರು.
Publisher: ಕನ್ನಡ ನಾಡು | Kannada Naadu