ಕನ್ನಡ ನಾಡು | Kannada Naadu

ಮಾದಕವಸ್ತು ಕಾರ್ಯಪ್ರವೃತ್ತಿಗೆ ವಿಧಾನಸಭೆಯಲ್ಲಿ ಶ್ಲಾಘನೆ-ಗೃಹಮಂತ್ರಿ ಡಾ:ಪರಮೇಶ್ವರ್

17 Mar, 2025

 

ಬೆಂಗಳೂರು : ಸುಮಾರು 75 ಕೋಟಿ ಮೊತ್ತದ ಡ್ರಗ್ಸ್ ಮಾಫಿಯಾವನ್ನು ಮಂಗಳೂರಿನ ಪೆÇಲೀಸರು ಕಾರ್ಯಾಚರಣೆ ನಡೆಸಿ ಡ್ರಗ್ಸ್ ಪ್ರಕರಣವನ್ನು ಮಂಗಳೂರಿನ ಪೆÇಲೀಸರು ಬಯಲಿಗೆಳೆದಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲಿಯೇ ಬಯಲಾದ ದೊಡ್ಡ ಡ್ರಗ್ಸ್ ಜಾಲ. ರಾಜ್ಯ ಮತ್ತು ಇತರ ಸ್ಥಳಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ದಕ್ಷಿಣ ಆಫ್ರಿಕಾದ ಪ್ರಜೆಗಳನ್ನು ಬೆಂಗಳೂರಿನಲ್ಲಿ ಬಂಧಿಸಿ ಅವರಿಂದ ಸುಮಾರು 75 ಕೋಟಿ ರೂ ಮೌಲ್ಯದ ಎಂಡಿಎಂಎ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಾ: ಪರಮೇಶ್ವರ್ ತಿಳಿಸಿ ಮಂಗಳೂರಿನ ಪೆÇಲೀಸರಿಗೆ ಅಭಿನಂದನೆ ಸಲ್ಲಿಸಿದರು.

ಸಭಾಪತಿ ಯು.ಟಿ ಖಾದರ್ ಇದೇ ಸಂದರ್ಭದಲ್ಲಿ ಡ್ರಗ್ಸ್ ಮಾಫಿಯಾ ಬೇಧಿಸಿದ ಎಲ್ಲಾ ಅಧಿಕಾರಿಗಳಿಗೂ ಅಭಿನಂದನೆ ಸಲ್ಲಿಸಿ ಇದರ ಮೂಲಕ ಕಂಡು ಹಿಡಿದು ಈ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕ್ರಮ ವಹಿಸುವುದು ಸೂಕ್ತ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವಿಧಾನ ಸಭೆಯ ಸದಸ್ಯರಾದ ವಿಜಯೇಂದ್ರ ಅವರು ಮಂಗಳೂರಿನ ಪೆÇಲೀಸರು ಜೀವದ ಹಂಗು ತೊರೆದು ಡ್ರಗ್ಸ್ ಮಾಫಿಯಾ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿ ಯುವಜನಾಂಗ ಡ್ರಗ್ಸ್ ಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ರಾಜ್ಯದಲ್ಲಿ ಮಾತ್ರವಲ್ಲದೇ ತಾಲ್ಲೂಕು ಮಟ್ಟಕ್ಕೆ ಸಹ ಈ ಮಾಫಿಯಾ ಹರಡಿದೆ. ಸೀಜ್ ಆಗಿರುವ ಡ್ರಗ್ಸ್ ವಿಲೇವಾರಿ ಬಗ್ಗೆ ಸಹ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ವಿಧಾನ ಸಭೆಯ ಹಲವು ಸದಸ್ಯರು ಡ್ರಗ್ಸ್ ಜಾಲ ಭೇಧಿಸಿದ ಪೆÇಲೀಸರಿಗೆ ಅಭಿನಂದನೆಗಳನ್ನು ತಿಳಿಸಿದರು
ವಿಧಾನಸಭೆಯ ಸದಸ್ಯರ ಸಲಹೆಗಳನ್ನು ಸ್ವೀಕರಿಸಿ ಮುಂದಿನ ದಿನಗಳಲ್ಲಿ ಡ್ರಗ್ಸ್ ಮಾಫಿಯಾವನ್ನು ಸಂಪೂರ್ಣವಾಗಿ ತಡೆಗಟ್ಟಲು ಕ್ರಮ ವಹಿಸಲಾಗುವುದು ಎಂದು ಡಾ: ಪರಮೇಶ್ವರ್ ತಿಳಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by