ಬೆಂಗಳೂರು : ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸೌರ ಶಕ್ತಿ ಮತ್ತು ಪವನ ಶಕ್ತಿ ಉತ್ಪಾದನಾ ಘಟಕಗಳನ್ನು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಬಸವನಗೌಡ ಬಾದರ್ಲಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪವನ ಸೋಲಾರ್ ಒಳಗೊಂಡಂತೆ ಇನ್ನಿತರ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದಿಸುವುದನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರವು “ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿ 2022-27” ನ್ನು ಜಾರಿಗೆ ತಂದಿರುತ್ತದೆ. ಈ ನೀತಿಯಲ್ಲಿ ಸ್ಪರ್ಧಾತ್ಮಕ ಬಿಡ್ ಮುಖೇನ ಸ್ವಯಂ ಬಳಕೆ, ಸಮೂಹ ಸ್ವಯಂ ಬಳಕೆ, ಮೂರನೇ ವ್ಯಕ್ತಿ ಮಾರಾಟ ಮತ್ತು ಖಾಸಗಿ ಪಾರ್ಕ್ ವರ್ಗಗಳಡಿ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಹಂಚಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪವನ ಮತ್ತು ಸೌರ ವಿದ್ಯುತ್ ಯೋಜನೆಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ ಜಿಲ್ಲಾ / ತಾಲ್ಲೂಕುವಾರು ಸಂಭವನೀಯ ಸಾಮರ್ಥ್ಯವನ್ನು ಪವನ ವಿದ್ಯುತ್ ಮತ್ತು ಸೌರ ವಿದ್ಯುತ್ ಸಂಸ್ಥೆಗಳಿಂದ ಪಡೆಯಲು ಕ್ರೆಡಲ್ ವೆಬ್ ಸೈಟ್ನಲ್ಲಿ ಪ್ರಕಟಿಸಲಾಗಿದೆ. ಅದರಂತೆ ರಾಯಚೂರಿನಲ್ಲಿ 6055 ಸಾಮಮರ್ಥ್ಯದ ಪವನ ವಿದ್ಯುತ್ 50275 ಸಾಮರ್ಥ್ಯದ ಸೌರ ವಿದ್ಯುತ್ ಮತ್ತು ಕಲಬುರಗಿಯಲ್ಲಿ 2154.89 ಪವನ ವಿದ್ಯುತ್ ಹಾಗೂ 41883 ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಸ್ಥಾಪಿಸಲು ಕ್ರಮ ಕೈಗೊಂಡಿದೆ. ಕ್ರೆಡಲ್ ವತಿಯಿಂದ ಕಲಬುರಗಿ ತಾಲ್ಲೂಕಿನ ನದಿಸಿನ್ನೂರ ಫಿರೋಜಾಬಾದ್ ಹಾಗೂ ಕಿರಣಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಪವರ್ ಕಂಪನಿ ಆಫ್ ಕರ್ನಾಟಕ ಲಿಮಿಟೆಡ್ನ ಒಡೆತನದಲ್ಲಿರುವ 551 ಎಕರೆ ಜಮೀನಿನಲ್ಲಿ ಟ್ಯಾರಿಪ್ ಬೇಸ್ಡ್ ಕಾಂಪಿಟೇಟಿವ್ ಬಿಡ್ಡಿಂಗ್ ವರ್ಗದಡಿ 100 ಮೆಗಾ ವ್ಯಾಟ್ ಸಾಮರ್ಥ್ಯದ ಸೋಲಾರ್ ಘಟಕದ ಜೊತೆಗೆ ಗಂಟೆಗೆ 100 ಮೆಗಾ ವ್ಯಾಟ್ ವ್ಯವಸ್ಥೆಯನ್ನು ಹೊಂದಿದ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕೆ.ಈ.ಆರ್.ಸಿ ಅವರಿಂದ ಟ್ಯಾರೀಪ್ ಅಡಾಪ್ಟ್ ಆದ ತಕ್ಷಣ ಯಶಸ್ವಿ ಬಿಡ್ಡುದಾರರಿಗೆ ಲೆಟರ್ ಆಫ್ ಅವಾರ್ಡ್ ನೀಡಲಾಗುವುದು ಎಂದು ತಿಳಿಸಿದರು.
Publisher: ಕನ್ನಡ ನಾಡು | Kannada Naadu