ಬೆಂಗಳೂರು : ಭಾರತದ ಕಾನೂನು ಜಾರಿ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ತಂತ್ರಜ್ಞಾನ ಮತ್ತು ತರಬೇತಿಯ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.
ಇಂದು ಬೆಂಗಳೂರಿನ ಹೋಟೆಲ್ ಜೆಡಬ್ಲ್ಯೂ ಮ್ಯಾರಿಯಟ್ನಲ್ಲಿ ಆಯೋಜಿಸಿದ್ದ ಅಪರಾಧ ತನಿಖಾ ಇಲಾಖೆ (ಸಿಐಡಿ) ಕರ್ನಾಟಕ, ಇನ್ಫೋಸಿಸ್ ಫೌಂಡೇಶನ್ ಮತ್ತು ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾ (ಡಿಎಸ್ಸಿಐ) ರವರ ಜಂಟಿ ಸಹಯೋಗದಿಂದ ಸ್ಥಾಪಿತವಾದ ಸೈಬರ್ ಅಪರಾಧಗಳ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ವತಿಯಿಂದ ಒಂದು ದಿನದ ಸೈಬರ್ ಅಪರಾಧ ತನಿಖಾ ಶೃಂಗಸಭೆಯಾದ "ಸಿಐಡಿ ಡಿಕೋಡ್-2025 ನ್ನು ಉದ್ಘಾಟಿಸಿ ಮಾತನಾಡಿದರು.
ಸೈಬರ್ ಅಪರಾಧಗಳು ವಿಕಸನಗೊಳ್ಳುತ್ತಿದ್ದಂತೆ, ನಮ್ಮ ದೃಢತೆ ಮತ್ತು ಸಾಮಥ್ರ್ಯಗಳು ಕೂಡ ವಿಕಸನಗೊಳ್ಳಬೇಕು. ಈ ಹೋರಾಟದಲ್ಲಿ ಸಿಐಡಿ ಡಿಕೋಡ್-2025 ಕರ್ನಾಟಕದ ಮುಂದಾಳತ್ವಕ್ಕೆ ಸಾಕ್ಷಿಯಾಗಿದೆ. ಸೈಬರ್ ಅಪರಾಧ ತನಿಖಾ ಮ್ಯಾನುಯಲ್ 4ನೇ ಆವೃತ್ತಿ ಬಿಡುಗಡೆ, ಹ್ಯಾಕಥಾನ್ ಮತ್ತು ಸೈಬರ್ ಲಾ, ಐಡಿಯಾಥಾನ್ನಂತಹ ಉಪಕ್ರಮಗಳು ಸುರಕ್ಷಿತ, ಡಿಜಿಟಲ್ ಕರ್ನಾಟಕ ಹಾಗೂ ಸುರಕ್ಷಿತ ಭಾರತವನ್ನು ನಿರ್ಮಿಸುವ ನಮ್ಮ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.
ದಿನವಿಡೀ ಜರುಗುವ ಈ ಶೃಂಗಸಭೆಯು ಹಿರಿಯ ಪೆÇಲೀಸ್ ಅಧಿಕಾರಿಗಳು ಮತ್ತು ಸೈಬರ್ ಭದ್ರತಾ ತಜ್ಞರೊಂದಿಗೆ ಸಂವಾದ ಗೋಷ್ಠಿಗಳು, ಸೈಬರ್ ಕಾನೂನುಗಳ ಕುರಿತು ಒಂದು ಮಾಸ್ಟರ್ ಕ್ಲಾಸ್ ಮತ್ತು ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವೃತ್ತಿಪರರಿಂದ ತಾಂತ್ರಿಕ ಪ್ರಸ್ತುತಿ ಒಳಗೊಂಡಿವೆ. ವಿಶೇಷವಾಗಿ ಪೆÇಲೀಸ್ ಅಧಿಕಾರಿಗಳಿಗೆ ನೈಜ ಸನ್ನಿವೇಶಗಳಲ್ಲಿ ತಂತ್ರಾಂಶದ ಮೂಲಕ ಬೇಡಿಕೆ ಹಣ (ransomware) ಕುರಿತಾದ ದಾಳಿಗಳನ್ನು ನಿರ್ವಹಿಸುವ ಹಾಗೂ ಪ್ರತಿಕ್ರಿಯಿಸುವ ಕಾರ್ಯತಂತ್ರವನ್ನೊಳಗೊಂಡ ವಿನೂತನ ರೀತಿಯ ಟೇಬಲ್ ಟಾಪ್ ಅಭ್ಯಾಸಗಳನ್ನು ಒಳಗೊಂಡಿದೆ.
ಇನ್ಫೋಸಿಸ್ ಫೌಂಡೇಶನ್ ಮತ್ತು ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾ ರವರ ಪಾಲುದಾರಿಕೆಯ ಸಹಯೋಗದೊಂದಿಗೆ 2019 ರಲ್ಲಿ ಸೃಜಿಸಿದ ಸಿಸಿಐಟಿಆರ್ ಕೇಂದ್ರವು ಸೈಬರ್ ಅಪರಾಧ ತನಿಖೆಯಲ್ಲಿ ಸಾಮಥ್ರ್ಯ ವರ್ಧನೆಯ ಪ್ರಯತ್ನಗಳನ್ನು ಮುಂದುವರೆಸಿದೆ. ಇದುವರೆಗೆ ಸಿಸಿಐಟಿಆರ್ ನಿಂದ ಪೆÇಲೀಸ್, ನ್ಯಾಯಾಂಗ, ಅಭಿಯೋಜನೆ ಸೇರಿದಂತೆ ಇತರೆ ವಲಯಗಳ 46.000 ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ತರಬೇತಿ ನೀಡಲಾಗಿದೆ.
ಮುಂಚೂಣಿಯಲ್ಲಿರುವ 12 ಕ್ಕೂ ಅಧಿಕ ಕಂಪನಿಗಳು ಅಭಿವೃದ್ಧಿಗೊಳಿಸಿರುವ ಅತ್ಯಾಧುನಿಕ ಡಿಜಿಟಲ್ ಫೆÇರೆನ್ಸಿಕ್ ಉಪಕರಣಗಳು ಮತ್ತು ಪರಿಹಾರಗಳನ್ನು ಪ್ರದರ್ಶಿಸುವ ಮಳಿಗೆಗಳನ್ನು ತೆರೆಯಲಾಗಿದೆ. ಪ್ರದರ್ಶಿತ ಮಳಿಗೆಗೆ ಭೇಟಿ ನೀಡುವವರಿಗೆ ಸೈಬರ್ ಅಪರಾಧ ತನಿಖೆಯ ಭವಿಷ್ಯವನ್ನು ರೂಪಿಸುವ ತಂತ್ರಜ್ಞಾನಗಳ ಬಗ್ಗೆ ನೇರ ಅನುಭವವನ್ನು ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಕಾನೂನು ಜಾರಿ ಮತ್ತು ಉದ್ಯಮಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಈ ಶೃಂಗಸಭೆಯ ಬದ್ಧತೆಯನ್ನು ಬಲಪಡಿಸುತ್ತದೆ.
ಕರ್ನಾಟಕ ರಾಜ್ಯದ ಸನ್ಮಾನ್ಯ ಗೃಹ ಮಂತಿಗಳು, ಹ್ಯಾಕಥಾನ್ ಮತ್ತು ಸೈಬರ್ ಲಾ, ಐಡಿಯಾಥಾನ್ಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಹ್ಯಾಕಥಾನ್ನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು "ಡೀಪ್ ಫೇಕ್ ಗಳ ಪತ್ತೆ, ಬ್ಲಾಕ್ ಚೈನ್ ತಂತ್ರಜ್ಞಾನ ಬಳಕೆ, ಮುಂತಾದ ಸಮಸ್ಯೆಗಳನ್ನು ಬಗೆಹರಿಸಲು ಸಾಪ್ಟವೇರ್ ಅಭಿವೃದ್ಧಿಪಡಿಸಿದರು. ಸೈಬರ್ ಲಾ ಐಡಿಯಾಥಾನ್ನಲ್ಲಿ ಪಾಲ್ಗೊಂಡವರು ಸೈಬರ್ ಅಪರಾಧಗಳ ಅಭಿಯೋಜನೆ ಬಲಪಡಿಸುವ ಬಗ್ಗೆ ಸೃಜನಶೀಲರಾಗಿ ಕಾನೂನಿನ ಚೌಕಟ್ಟುಗಳು ಮತ್ತು ನೀತಿಗಳ ಬಗ್ಗೆ ರೂಪುರೇಷುಗಳನ್ನು ಸಿದ್ಧಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸೈಬರ್ ಅಪರಾಧಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಇತ್ತೀಚಿನ ಪ್ರವೃತ್ತಿಗಳು, ಸಾಧನಗಳು ಮತ್ತು ತಂತ್ರಗಳಿಂದ ಕೂಡಿದ ಪ್ರಮುಖ ಸಂಪನ್ಮೂಲವಾದ ಬಹು ನಿರೀಕ್ಷಿತ ಪರಿಷ್ಕøತ "ಸೈಬರ್ ಅಪರಾಧ ತನಿಖಾ ಮ್ಯಾನುಯಲ್'ನ 4ನೇ ಆವೃತ್ತಿಯನ್ನು ಕೂಡ ಬಿಡುಗಡೆಗೊಳಿಸಿದರು.
ಸೈಬರ್ ಅಪರಾಧಗಳಲ್ಲಿ ವೃದ್ಧಿಸುತ್ತಿರುವ ಸವಾಲುಗಳನ್ನು ಜ್ಞಾನದ ಹಂಚಿಕೆ, ಕೌಶಲ್ಯಾಭಿವೃದ್ಧಿ ಹಾಗೂ ಸಹಯೋಗದ ಮೂಲಕ ಪರಿಹರಿಸುವ ಸಲುವಾಗಿ ಕರ್ನಾಟಕದ 150 ಕ್ಕೂ ಹೆಚ್ಚು ಉನ್ನತ ಪೆÇಲೀಸ್ ಅಧಿಕಾರಿಗಳು ಹಾಗೂ ಇತರೆ ರಾಜ್ಯಗಳ ಮತ್ತು ಕೇಂದ್ರದ 55 ಉನ್ನತ ಪೆÇಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸೈಬರ್ ಜಗತ್ತಿನಲ್ಲಿ Ransomware, ಫಿಶಿಂಗ್, ಆಥೈನ್ ವಂಚನೆ ಸೇರಿದಂತೆ ಉದ್ಭವಿಸುತ್ತಿರುವ ಸಮಸ್ಯೆಗಳನ್ನು ಕಾನೂನು ಜಾರಿ, ಸರ್ಕಾರ ಹಾಗೂ ಖಾಸಗಿ ಪಾಲುದಾರರ ನಡುವಿನ ನಿರಂತರ ಸಹಯೋಗದ ಮೂಲಕ ಎದುರಿಸಲು ಕರೆ ನೀಡುವ ಮೂಲಕ ಶೃಂಗಸಭೆಗೆ ತೆರೆ ಎಳೆಯಲಾಯಿತು.
Publisher: ಕನ್ನಡ ನಾಡು | Kannada Naadu