CreamA Cream article
Article

ಘನತ್ಯಾಜ್ಯ ವಿಲೇವಾರಿಗೆ ಕ್ರಮ-ಸಚಿವ ರಹೀಂಖಾನ್

ಕನ್ನಡ ನಾಡು

 

ಬೆಂಗಳೂರು : ಪಾರಂಪರಿಕ ತ್ಯಾಜ್ಯ ಸಂಸ್ಕರಣೆಯಿಂದ ಬರುವ Bio-earth ಅನ್ನು ಪರೀಕ್ಷೆಗೊಳಪಡಿಸಿ FCO(Fertilizer Control order) ಮಾನದಂಡ ಪೂರೈಸಿದಲ್ಲಿ ಅದನ್ನು ಸ್ಥಳೀಯ ರೈತರಿಗೆ ಮಾರಾಟ ಮಾಡಲಾಗುವುದು ಅಥವಾ ಸ್ಯಾನಿಟರಿ ನೆಲಭರ್ತಿ ಸೌಲಭ್ಯದಲ್ಲಿ Soil Cover ಆಗಿ ಬಳಕೆ ಮಾಡಲಾಗುವುದು ಎಂದು ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ತಿಳಿಸಿದರು.

ಇಂದು ವಿಧಾನಸಭೆಯ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ರಾಣೆಬೆನ್ನೂರು ಕ್ಷೇತ್ರದ ಪ್ರಕಾಶ್ ಕೋಳಿವಾಡ ಪ್ರಶ್ನೆಗೆ ಉತ್ತರಿಸಿದ ಅವರು, ಪಾರಂಪರಿಕ ತ್ಯಾಜ್ಯ ನಿರ್ವಹಣೆಗೆ ಹಾವೇರಿ ಜಿಲ್ಲಾ ಮಟ್ಟದಲ್ಲಿ ಕ್ಲಸ್ಟರ್ ಮಾದರಿ ಟೆಂಡರ್ ಕರೆಯಲಾಗಿದೆ. 1ನೇ, 2ನೇ ಮತ್ತು 3ನೇ ಕರೆಯಲ್ಲಿ ಭಾಗವಹಿಸಿದ ಯಾವುದೇ ಗುತ್ತಿಗೆದಾರರು ಅರ್ಹತೆ ಗಳಿಸಿಲ್ಲದಿರುವ ಕಾರಣ ಪ್ರಸ್ತುತ 4ನೇ ಬಾರಿ ಟೆಂಡರ್ ಕರೆಯಲಾಗಿದೆ. ಟೆಂಡರ್‍ನ್ನು ವ್ಯಾಪಕವಾಗಿ ಪ್ರಚಾರ ಮಾಡಿ ಹೆಚ್ಚಿನ ಗುತ್ತಿಗೆದಾರರು ಟೆಂಡರಿನಲ್ಲಿ ಭಾಗವಹಿಸಲು ಪೆÇ್ರೀತ್ಸಾಹಿಸಲಾಗುವುದು. ಕೊನೆಯ ದಿನಾಂಕದ ಬಳಿಕ ಗುತ್ತಿಗೆದಾರರ ಭಾಗವಹಿಸುವಿಕೆಯನ್ನು ಪರಿಶೀಲಿಸಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Read More