ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಶ್ರೀರಾಮಮಂದಿರ ವಾರ್ಡ್ ನಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು ಸ್ಥಳಕ್ಕೆ ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಭೇಟಿ ನೀಡಿ ಪರಿಶೀಲನೆ ಮಾಡಿದರು ಮತ್ತು ಸಾರ್ವಜನಿಕರ ಸಮಸ್ಯೆಗಳನ್ನು ಅಲಿಸಿದರು.
ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಜನಸ್ನೇಹಿ ಆಡಳಿತ ಮಾಡಲು ಪ್ರತಿವಾರ ಜನರೊಂದಿಗೆ ಜನಸೇವಕ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ ಸಾರ್ವಜನಿಕರ ನೂರಾರು ಸಮಸ್ಯೆಗಳಿಗೆ ಸ್ಥಳದಲ್ಲಿಯೆ ಪರಿಹಾರ ಸಿಕ್ಕಿದೆ.
ಜನರ ನಡುವೆ ನಿರಂತರ ಸಂಪರ್ಕದಿಂದ ಸಮಸ್ಯೆಗಳ ಕುರಿತು ಅರಿವು ಪರಿಹಾರಿಸಲು ಸಾಧ್ಯವಾಗಿದೆ, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಲಭಿಸಿದೆ.
ಬೆಂಗಳೂರು ನಾಗರಿಕರು ಮುಂದಿನ 25ವರ್ಷಕ್ಕೆ ಬೇಕಾದ ನೀರನ್ನು ಈಗಾಗಲೆ ಬಳಸಿಕೊಂಡಿದ್ದಾರೆ, ಬೋರ್ ವೆಲ್ ಗಳು ಒತ್ತಿ ಹೋಗಿದೆ, ಹೊಸ ಬೋರ್ ವೆಲ್ ಗಳು ಕೊರೆಯಲು ಅನುಮತಿ ನೀಡುತ್ತಿಲ್ಲ. ಸಾರ್ವಜನಿಕರು ಮಳೆ ನೀರು ಸಂಗ್ರಹ ಮತ್ತು ಮಿತವಾಗಿ ನೀರು ಬಳಕೆ ಮಾಡಿಕೊಂಡರೆ ಮಾತ್ರ ನಗರದ ನಾಗರಿಕರಿಗೆ ಕುಡಿಯುವ ನೀರು ಸಿಗಲು ಸಾಧ್ಯ.
ಜನರ ಸಹಕಾರ ಇದ್ದಾಗ ಅಭಿವೃದ್ದಿ ಸಾಧ್ಯ, ರಸ್ತೆ ಡಾಂಬರೀಕರಣ ಅದ ನಂತರ ವಿನಾಕಾರಣ ರಸ್ತೆ ಅಗೆಯವುದು ಮಾಡುವುದರಿಂದ ಕೈಗೊಂಡ ರಸ್ತೆ ಕಾಮಗಾರಿ ಅವ್ಯವಸ್ಥೆಯಾಗಿ ಗುಂಡಿ ಬೀಳುತ್ತದೆ.
ಸಾರ್ವಜನಿಕರ ತೆರಿಗೆ ಹಣ ಸಮರ್ಪಕ ಬಳಕೆ, ಜನರ ಅವಶ್ಯಕತೆಯಂತೆ ಮೂಲಭೂತ ಸೌಲಭ್ಯಗಳ ಒದಗಿಸುವುದು ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ.
ಮಂಡಲದ ಅಧ್ಯಕ್ಷರಾದ ಸುದರ್ಶನ್, ಅಬ್ದುಲ್ ರೆಹಮಾನ್, ಕಾಮಧೇನು ಸುರೇಶ್, ಸತೀಶ್ ಭಗವಾನ್, ಯಶಸ್ ನಾಯಕ್, ವಿಶ್ವನಾಥ್, ಮಂಜುನಾಥ್, ವೇಲು ಮೋಹನ್ ರಾಜ್, ಪ್ರವೀಣ್ ರವರು ಭಾಗವಹಿಸಿದ್ದರು.
Publisher: ಕನ್ನಡ ನಾಡು | Kannada Naadu