ಬೆಂಗಳೂರು : ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ 2025ನೇ ಸಾಲಿನ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ವಿಧೇಯಕವನ್ನು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಹಾಗೂ ಕೃಷಿ ಮಾರುಕಟ್ಟೆ ಸಚಿವಾರದ ಶಿವಾನಂದ ಪಾಟೀಲ್ ಅವರು ಮಂಡಿಸುತ್ತಾ, ವಾಣಿಜ್ಯ ವಹಿವಾಟುಗಳನ್ನು ನಡೆಸುವ ಇ-ಕಾಮಾರ್ಸ್ ಸಂಸ್ಥೆಗಳನ್ನು ಆನ್‍ಲೈನ್ ಪ್ಲಾಟ್ ಫಾರಂ ಮೂಲಕ ಕೃಷಿ ಉತ್ಪನ್ನ ಮತ್ತು ಮಾರುಕಟ್ಟೆ ವ್ಯಾಪ್ತಿಗೆ ತರುವ ಉದ್ದೇಶವನ್ನು ಈ ವಿಧೇಯಕ ಹೊಂದಿದೆ. ಹಾಗೂ ಅವರೆಲ್ಲರನ್ನೂ ಸೆಸ್ ವ್ಯಾಪ್ತಿಗೆ ಒಳಪಡಿಸಿ ಆರ್ಥಿಕ ವೃದ್ಧಿ ಮಾಡುವ ಉದ್ದೇಶದೊಂದಿಗೆ ಈ ವಿಧೇಯಕವನ್ನು ತರಲಾಗಿದೆ ಎಂದು ತಿಳಿಸುತ್ತಾ, ವಿಧೇಯಕವನ್ನು ಪರ್ಯಾಲೋಚಿಸುವಂತೆ ಸದನದಲ್ಲಿ ಕೋರಿದರು.
ವಿಧಾನ ಪರಿಷತ್ತಿನ ಸದಸ್ಯರಾದ ಸಿ.ಟಿ. ರವಿ, ಟಿ.ಎ. ಶರವಣ, ಕೇಶವ ಪ್ರಸಾದ್, ನವೀನ್, ಡಿ.ಎಸ್. ಅರುಣ್ ಮತ್ತು ಐವಾನ್ ಡಿಸೋಜ ಅವರುಗಳು ವಿಧೇಯಕವನ್ನು ಪಯಾಲೋಚಿಸಿದರು. ನಂತರ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳು “ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ವಿಧೇಯಕ 2025ನ್ನು ಅಂಗೀಕರಿಸಿದರು.
Publisher: ಕನ್ನಡ ನಾಡು | Kannada Naadu