ಬೆಂಗಳೂರು : ಮಾಜಿ ಸಚಿವರಾಗಿದ್ದ ಬಿ.ಸುಬ್ಬಯ್ಯ ಶೆಟ್ಟಿ ಹಾಗೂ ಭಾರತೀಯ ಶಿಕ್ಷಣ ತಜ್ಞೆ, ಮೈಸೂರು ಶಿಕ್ಷಣ ಸೊಸೈಟಿಯ ಸ್ಥಾಪಕ ಸದಸ್ಯರಾದ ವಿಮಲಾ ರಂಗಾಚಾರ್ ಅವರುಗಳು ನಿಧನರಾದುದನ್ನು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದನದಲ್ಲಿ ತಿಳಿಸಿ ಸಂತಾಪವನ್ನು ವ್ಯಕ್ತಪಡಿಸಿದರು.
ಬಿ.ಸುಬ್ಬಯ್ಯ ಶೆಟ್ಟಿ :
ಮಾಜಿ ಸಚಿವರಾಗಿದ್ದ ಬಿ.ಸುಬ್ಬಯ್ಯ ಶೆಟ್ಟಿ ಅವರು ಮಾರ್ಚ್ 10 ರಂದು ನಿಧನ ಹೊಂದಿರುತ್ತಾರೆ. 1934ರ ಏಪ್ರಿಲ್ 4ರಂದು ಮಂಗಳೂರಿನಲ್ಲಿ ಜನಿಸಿದ್ದ ಶ್ರೀಯುತರು ಬಿ.ಎಸ್ಸಿ., ಬಿ.ಎಲ್., ಪದವೀಧರರಾಗಿದ್ದು ವೃತ್ತಿಯಲ್ಲಿ ವಕೀಲರಾಗಿದ್ದರು. ಇವರು 1956 ರಿಂದ 1965ರವರೆಗೆ ಸಿ.ಬಿ.ಐ. ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರಲ್ಲದೆ ಇಂಡೋ ಟಿಬೇಟಿಯನ್ ಗಡಿ ಪೆÇಲೀಸ್ ಪಡೆಯ ಸದಸ್ಯರಾಗಿದ್ದರು ಮತ್ತು ರಾಷ್ಟ್ರೀಯ ಏಕೀಕರಣ ವೇದಿಕೆಯ ಅಧ್ಯಕ್ಷರಾಗಿದ್ದರು. ಅಲ್ಲದೆ, ಸೂರತ್ಕಲ್ ವಿಧಾನಸಭೆ ಕ್ಷೇತ್ರದಿಂದ 5 ಮತ್ತು 6ನೇ ವಿಧಾನಸಭೆಗೆ ಚುನಾಯಿತರಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಭೂ ಸುಧಾರಣಾ ಸಚಿವರಾಗಿ, ವಾರ್ತಾ ಮತ್ತು ಇಂಧನ ಹಾಗೂ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿರುತ್ತಾರೆ. ರಾಷ್ಟ್ರೀಯ ಸಮಗ್ರತಾ ದಳ ಅಧ್ಯಕ್ಷರಾಗಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ದಕ್ಷಿಣ ಕನ್ನಡ ಜಿಲ್ಲೆಯ ಐ.ಎನ್.ಟಿ.ಯು.ಸಿ.,ಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಶ್ರೀಯುತರು ಡಿ.ದೇವರಾಜ ಅರಸ್ ಪ್ರಶಸ್ತಿ, ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದರು.
ವಿಮಲಾ ರಂಗಾಚಾರ್:
ಭಾರತೀಯ ಶಿಕ್ಷಣ ತಜ್ಞೆ ಹಾಗೂ ಮೈಸೂರು ಶಿಕ್ಷಣ ಸೊಸೈಟಿಯ ಸ್ಥಾಪಕ ಸದಸ್ಯರಾದ ವಿಮಲಾ ರಂಗಾಚಾರ್ ಅವರು ಫೆಬ್ರವರಿ 25 ರಂದು ನಿಧನ ಹೊಂದಿರುತ್ತಾರೆ. 1929ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಇವರು ಇಂಗ್ಲೀμï ಮತ್ತು ಮನೋವಿಜ್ಞಾನದಲ್ಲಿ ಪದವೀಧರರಾಗಿದ್ದರು. ಕರ್ನಾಟಕ ಕರಕುಶಲ ಮಂಡಳಿಯ ಅಧ್ಯಕ್ಷರಾಗಿ, ಮೈಸೂರು ಶಿಕ್ಷಣ ಸೊಸೈಟಿಯ ಸ್ಥಾಪಕ ಸದಸ್ಯರು ಹಾಗೂ ಅಧ್ಯಕ್ಷರಾಗಿ, ನಾಟ್ಯ ಕಥಕ್ ಮತ್ತು ನೃತ್ಯ ಸಂಯೋಜನೆ ಸಂಸ್ಥೆಯ ಅಧ್ಯಕ್ಷರಾಗಿ, ಕಾವೇರಿ ಕರಕುಶಲ ವಸ್ತುಗಳ ಎಂಪೆÇೀರಿಯಂನ ಅಧ್ಯಕ್ಷರಾಗಿ, ಮಹಿಳಾ ಸಬಲೀಕರಣದ ಪ್ರತಿಪಾದಕಿಯವರಾಗಿದ್ದ ಇವರು ಮಹಿಳಾ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದ ಮಲ್ಲೇಶ್ವರಂನ ಮಹಿಳಾ ಸಮಾಜವನ್ನು ಸ್ಥಾಪಿಸಿದ್ದರು. ಹತ್ತು ಹಲವಾರು ಸಂಘಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸೇವಾ ಸದನ ಅನಾಥಾಶ್ರಮದ ಅಧ್ಯಕ್ಷೆ, ಎಡಿಎ ರಂಗಮಂದಿರದ ಗೌರವ ಕಾರ್ಯದರ್ಶಿ, ಗಾಂಧಿ ವಿಜ್ಞಾನ ಮತ್ತು ಮಾನವ ಮೌಲ್ಯಗಳ ಕೇಂದ್ರ-ಭಾರತೀಯ ವಿದ್ಯಾ ಭವನದ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಲ್ಲೇಶ್ವರಂನಲ್ಲಿ ಮೊದಲ ಮಹಿಳಾ ಹಾಸ್ಟೆಲ್ ಅನ್ನು ಸ್ಥಾಪಿಸಿದ ಕೀರ್ತಿಗೆ ಭಾಜನಾಗಿದ್ದರಲ್ಲದೆ, ಬೆಂಗಳೂರಿನ ಕಬ್ಬನ್ ಪಾರ್ಕ್‍ನಲ್ಲಿ ಜವಾಹರ ಬಾಲ ಭವನವನ್ನು ಮಕ್ಕಳ ರಂಗಭೂಮಿಗೆ ಮೀಸಲಾದ ಸ್ಥಳವಾಗಿ ಸ್ಥಾಪಿಸಲು ಕೊಡುಗೆ ನೀಡಿದ್ದರು.
ಬೆಂಗಳೂರು ಮೂಲದ ರಂಗಭೂಮಿ ತಂಡದ ನೇತೃತ್ವ ವಹಿಸಿ ರಂಗಭೂಮಿಯಲ್ಲೂ ತೊಡಗಿಸಿಕೊಂಡಿದ್ದ ಇವರು ದೇಶದ ಸಾಂಸ್ಕøತಿಕ ರಾಯಭಾರಿಯಾಗಿ ಯುನೈಟೆಡ್ ಸ್ಟೇಟ್ಸ್ ಮತ್ತು ಯುಎಸ್‍ಎಸ್‍ಆರ್ ದೇಶಗಳಿಗೆ ಪ್ರವಾಸ ಕೈಗೊಂಡಿದ್ದರು.
ಇವರು ಶಿಕ್ಷಣ, ಕಲೆ ಮತ್ತು ಸಂಸ್ಕøತಿಗೆ ನೀಡಿದ ಕೊಡುಗೆಗಾಗಿ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕಮಲ ಸನ್ಮಾನ್ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ.
ಮಾನ್ಯ ಗಣ್ಯರುಗಳ ನಿಧನಕ್ಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಬೆಂಬಲ ವ್ಯಕ್ತಪಡಿಸಿ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದರು. ನಂತರ ಸದನದಲ್ಲಿ ಎಲ್ಲಾ ಸದಸ್ಯರುಗಳು ಎದ್ದು ನಿಂತು ಒಂದು ನಿಮಿಷಗಳ ಮೌನಾಚರಣೆಯನ್ನು ಸಲ್ಲಿಸಿದರು.
Publisher: ಕನ್ನಡ ನಾಡು | Kannada Naadu