ಶ್ರೀ ಕ್ಷೇತ್ರ ಆದಿಚುಂಚಮಗಿರಿ ಮಹಾ ಸಂಸ್ಥಾನದಲ್ಲಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ. ಮಹಾ ಸಂಸ್ಥಾನದ ಪರಮ ಪೂಜ್ಯ ಸ್ವಾಮಿಗಳಿಂದ ನಾಂದಿ ಪೂಜೆ ಮತ್ತು ಧರ್ಮಧ್ವಜ ಸ್ಥಾಪನೆ ನೆರವೇರಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಿ ಆಶೀರ್ವದಿಸಿದ ಶ್ರೀಗಳು ಸಮಸ್ತ ಜನತೆಗೆ ಸನ್ನಮಂಗಳ ಉಂಟಾಗಲಿ ಎಂದು ಹಾರೈಸಿದರು. ಈ ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಎಲ್ಲಾ ಶಾಖೆಯ ಪೂಜ್ಯ ಸ್ವಾಮೀಜಿಗಳವರು, ಗಣ್ಯರು, ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು
Publisher: ಕನ್ನಡ ನಾಡು | Kannada Naadu