ಬೆಂಗಳೂರು: ಇಲ್ಲಿನ ರಾಜರಾಜೇಶ್ವರಿ ನಗರದಲ್ಲಿರುವ ಶ್ರೀ ಕೃಷ್ಣ ಗಾರ್ಡನ್ ಲೇಔಟ್ ನಲ್ಲಿ ನೂತನವಾಗಿ ದೇವಾಲಯಗಳ ಸಂಕೀರ್ಣ ಸಿದ್ದವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಶ್ರೀ ಗಣಪತಿ, ಶ್ರೀ ಕೃಷ್ಣ ಮತ್ತು ಶ್ರೀ ಮಹಾಲಕ್ಷ್ಮಿ ದೇವಾಲಯ ನಿರ್ಮಾಣದ ಭೂಮಿಪೂಜೆಯನ್ನು ಭಕ್ತಿ, ಭಾವದಿಂದ ನಡೆಸಲಾಯಿತು.
ಈ ಶುಭ ಸಂದಭದಲ್ಲಿ ಸ್ಥಳೀಯ ಮುಖಂಡರು, ನಾಗರಿಕರು ಹಾಗೂ ಮಹಿಳೆಯರು ಭಕ್ತಿಪೂರ್ಣವಾಗಿ ಭಾಗವಹಿಸಿದರು. ಮುಂದಿನ ದಿನಗಳಲ್ಲಿ ಈ ದೇವಾಲಯ ಸಂಕೀರ್ಣವನ್ನು ಆಧ್ಯಾತ್ಮಿಕ ಕೇಂದ್ರವನ್ನಾಗಿ ಅಭಿವೃದ್ಧಿಮಾಡುವ ವಿಶೇಷ ಯೋಜನೆಯನ್ನೂ ಸಹ ರೂಪಿಸಲಾಗಿದೆ. ಸ್ಥಳೀಯ ನಾಗರಿಕರು ಈ ಯೋಜನೆಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದು, ದೇವಾಲಯದ ನಿರ್ಮಾಣ ಕಾರ್ಯವು ಸಮುದಾಯದ ಸಹಕಾರದಿಂದ ಶೀಘ್ರದಲ್ಲೇ ಮುನ್ನಡೆಯಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.
Publisher: ಕನ್ನಡ ನಾಡು | Kannada Naadu