ಕನ್ನಡ ನಾಡು | Kannada Naadu

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ ಕೊಡುಗೆ ಕುರಿತು ವಿಚಾರಗೋಷ್ಠಿ

05 Mar, 2025

 

ಬೆಂಗಳೂರು : ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಮತ್ತು ಹಿಂದುಳಿದ ವರ್ಗಗಳ ಕೋಶ ಸಹಯೋಗದಲ್ಲಿ ಮಾರ್ಚ್ 06 ರಂದು ಗುರುವಾರ ಬೆಳಿಗ್ಗೆ 10.30 ರಿಂದ ಸೆಂಟ್ರಲ್ ಕಾಲೇಜಿನ ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಾಮಾಜಿಕ ಸುಧಾರಣೆಗಳು ಮತ್ತು ಪ್ರಗತಿ ಪರಂಪರೆ- ಡಿ. ದೇವರಾಜ ಅರಸುರವರ ಕೊಡುಗೆ ಕುರಿತ ವಿಚಾರಗೋಷ್ಠಿಯನ್ನು ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಲಿಂಗರಾಜ ಗಾಂಧಿ ಅವರು ಅಧ್ಯಕ್ಷತೆ ವಹಿಸಲಿದ್ದು, ಅಗ್ನಿಶಾಮಕ ದಳದ ಉಪ ಪೆÇಲೀಸ್ ಮಹಾನಿರೀಕ್ಷಕರಾದ ರವಿ ಡಿ. ಚನ್ನಣ್ಣನವರ್,  ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕಾಂತರಾಜು ಕೆ.ಜಿ.ಎಸ್. ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಬಂಜಗೆರೆ ಜಯಪ್ರಕಾಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಕುಲಸಚಿವರಾದ ಟಿ.ಜವರೇಗೌಡ,  ಕುಲಸಚಿವ (ಮೌಲ್ಯಮಾಪನ) ಪ್ರೊ.ರಮೇಶ್.ಬಿ, ವಿತ್ತಾಧಿಕಾರಿ ಎಂ.ವಿ. ವಿಜಯಲಕ್ಷ್ಮಿ, ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಇತರೆ ಹಿಂದುಳಿದ ವರ್ಗಗಳ ಕೋಶದ ವಿಶೇಷಾಧಿಕಾರಿ ಪ್ರೊ. ನಿರ್ಮಲ ಎಂ. ಉಪಸ್ಥಿತರಿರುವರು.
ಮಧ್ಯಾಹ್ನದ ಅಧಿವೇಶನದಲ್ಲಿ ಮಹಿಳಾ ಸಬಲೀಕರಣ ಮತ್ತು ದೇವರಾಜ ಅರಸು ಕೊಡುಗೆ ಎಂಬ ವಿಷಯದ ಕುರಿತು ಪ್ರೊ. ವಿ ಅನುರಾಧ ಉಪನ್ಯಾಸ ನೀಡುವರು. ಪ್ರೊ.ಡಿ.ಕೆ. ಚಿತ್ತಯ್ಯ ಪೂಜಾರ್ ಗೋಷ್ಠಿಯ ಅಧ್ಯಕ್ಷತೆ ವಹಿಸುವರು.

ಡಿ. ದೇವರಾಜ ಅರಸು ಮತ್ತು ಸಾಮಾಜಿಕ ನ್ಯಾಯ ಎಂಬ ವಿಷಯದ ಕುರಿತು ಪ್ರೊ. ಎಂ.ಗುರುಲಿಂಗಯ್ಯ ಉಪನ್ಯಾಸ ನೀಡುವರು. ಪ್ರೊ. ಸಿ.ಬಿ. ಹೊನ್ನು ಸಿದ್ಧಾರ್ಥ ಗೋಷ್ಠಿಯ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by