ಕುಮಟಾ: ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿಸುವ ಉದ್ದೇಶದಿಂದ ಕುಮಟಾದ 'ಬೆನಕಾ ಕನ್ಸಲ್ಟನ್ಸಿ' ಯ ಇಂಜಿನಿಯರ್ ಎಚ್.ಎನ್. ನಾಯ್ಕ ಮತ್ತು ಸ್ವಪ್ನಾ ನಾಯ್ಕ ದಂಪತಿ ತಮ್ಮ ಪುತ್ರ ಗೌತಮ ಅವರ ಜನ್ಮದಿನದ ಪ್ರಯುಕ್ತ ಇಲ್ಲಿನ 'ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆ' ಗೆ ವೀಲ್‌ಚೇರ್ ಒಂದನ್ನು ದೇಣಿಗೆಯಾಗಿ ನೀಡಿದರು.
ಆಸ್ಪತ್ರೆಗೆ ಬರುವ ವೃದ್ಧರು ಹಾಗೂ ಅಂಗವಿಕಲರಿಗೆ ಹೊಸದಾದ ವೀಲ್ ಚೇರ್ ಒಂದರ ಅವಶ್ಯಕತೆ ಅರಿತು ಈ ದೇಣಿಗೆಯನ್ನು ಸ್ವಪ್ರೇರಣೆಯಿಂದ ಅವರು ನೀಡಿದ್ದು, ಈ ಮಾನವೀಯ ಕಾರ್ಯ ಶ್ಲಾಘನೀಯವಾಗಿದೆ.ಎಚ್.ಎನ್. ನಾಯ್ಕ ರವರು ಸ್ವತಃ ಆಸ್ಪತ್ರೆಯ ಟ್ರಸ್ಟಿಗಳಲ್ಲೊಬ್ಬರಾಗಿದ್ದು,
ಮಗನ ಜನ್ಮದಿನವನ್ನು ಸೇವಾ ಕಾರ್ಯವಾಗಿ ಆಚರಿಸುವ ಅವರ ಕ್ರಮ ಸಮಾಜಕ್ಕೆ ಪ್ರೇರಣೆಯಾಗಲೆಂದು ಆಸ್ಪತ್ರೆಯ ಆಡಳಿತಾಧಿಕಾರಿ
ಜಯದೇವ ಬಳಗಂಡಿ ಟ್ರಸ್ಟ್ ಪರವಾಗಿ ವೀಲ್‌ಚೇರ್ ಸ್ವೀಕರಿಸಿ,ಈ ದಂಪತಿಯನ್ನು ಅಭಿನಂದಿಸಿ, ಧನ್ಯವಾದ ಸಲ್ಲಿಸಿದರು.
Publisher: ಕನ್ನಡ ನಾಡು | Kannada Naadu