ಕನ್ನಡ ನಾಡು | Kannada Naadu

ಡೀಲ್ ಅಟ್ ದಿ ಬಾರ್ಡರ್: ಬೆಂಗಳೂರಿನ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಿರ್ಗಿಜ್ ಚಿತ್ರ ಪ್ರದರ್ಶನ

27 Feb, 2025

ಬೆಂಗಳೂರು: 2025ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (BIFFes)ದಲ್ಲಿ ASIAN CINEMA COMPETITION ವಿಭಾಗದಲ್ಲಿ ಕಿರ್ಗಿಜ್ ಭಾಷೆಯ "Deal at the Border" ಚಲನಚಿತ್ರ ಪ್ರದರ್ಶನಗೊಳ್ಳಲಿದೆ. ಈ ಚಲನಚಿತ್ರವನ್ನು ಖ್ಯಾತ ನಿರ್ದೇಶಕ Dastan Zhapar Ryskeldi ನಿರ್ದೇಶಿಸಿದ್ದಾರೆ.

ಕಥಾ ಹಂದರ
ಮಧ್ಯ ಏಷ್ಯಾದ ಪರ್ವತಗಳ ನಡುವಿನ ರಹಸ್ಯಮಾರ್ಗದಲ್ಲಿ ಮಾದಕವಸ್ತು ವ್ಯವಹಾರ ನಡೆಸುವ ಅಜಾ ಮತ್ತು ಸಮತ್, ಗುಲಾಮಗಿರಿ ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ನಾಜೆಕ್ ಎಂಬ ಯುವತಿಯನ್ನು ಎದುರಾಗುತ್ತಾರೆ. ಸ್ಥಳೀಯ ಅಪರಾಧಿ ನಾಜೆಕ್ಳನ್ನು ಮತ್ತೆ ವಶಕ್ಕೆ ಪಡೆಯುವಾಗ, ಆಕೆ ಪುನಃ ಗುಲಾಮಗಿರಿಗೆ ಒತ್ತಾಯಿತಾಗಿ ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಈ ಸಂದರ್ಭದಲ್ಲಿ ಅಜಾ, ಯಾವುದೇ ಸಂಕಟವನ್ನು ಎದುರಿಸಲು ಸಿದ್ಧನಾಗಿ, ನಾಜೆಕ್‌ನ್ನು ರಕ್ಷಿಸಲು ನಿರ್ಧರಿಸುತ್ತಾನೆ.

ತಾಂತ್ರಿಕ ಹಾಗೂ ಕಲಾವಿದರ ವಿವರ
ನಿರ್ಮಾಪಕ(ರು) ಅಥವಾ ನಿರ್ಮಾಣ ಸಂಸ್ಥೆ:
Suium Sulaimanova

ಕಥಾಸ್ಪಂಧನ:
Dastan Zhapar Ryskeldi, Aktan Ryskeldiev

ಛಾಯಾಗ್ರಹಣ:
Bolsunbek Taalaibek

ಎಡಿಟರ್‌:
Bakyt Mukul, Nazgul Omurzhanova

ಸಂಗೀತ:
Basalagyn Musaev

ಶಬ್ದ ವಿನ್ಯಾಸ:
Kalybek Sherniazov

ಕಲಾವಿದರು :
Adinay Talantbek

ಪ್ರಶಸ್ತಿಗಳು, ಪ್ರದರ್ಶನ: 

Eurasia IFF (ಅತ್ಯುತ್ತಮ ನಟ)
Arctic Open IFF (ಅತ್ಯುತ್ತಮ ಚಿತ್ರ, ಛಾಯಾಗ್ರಹಣ) 
Busan IFF (Jiseok Competition - World Premiere)
Cottbus FF
Asian World FF
Dhaka IFF


ನಿರ್ದೇಶಕ ದಸ್ತಾನ್ ಝಪರ್ ರಿಸ್ಕೆಲ್ಡಿ ಪರಿಚಯ: 


Dastan Zhapar Ryskeldi 1988ರಲ್ಲಿ ಕಿರ್ಗಿಸ್ಥಾನದಲ್ಲಿ ಜನಿಸಿದರು. ಅವರು Kyrgyz State University of Culture and Arts ನಲ್ಲಿ ನಾಟಕ ಹಾಗೂ ಚಲನಚಿತ್ರ ಅಧ್ಯಯನ ಮಾಡಿದ್ದಾರೆ. ಅವರ ಪ್ರಮುಖ ಚಿತ್ರಗಳಲ್ಲಿ A Father’s Will (2016) ಮತ್ತು The Road to Eden (2020) ಸೇರಿವೆ. ಅವರು Asia-Pacific Film Academy ಹಾಗೂ Union of Film Directors of the Kyrgyz Republic ಸದಸ್ಯರಾಗಿದ್ದಾರೆ.

ಈ ಸಿನಿಮಾದ ಪೋಮೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ:    https://biffes.org/filmdetails/563#section5

Publisher: ಕನ್ನಡ ನಾಡು | Kannada Naadu

Login to Give your comment
Powered by