ಕನ್ನಡ ನಾಡು | Kannada Naadu

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2025ರಲ್ಲಿ ಕೊಂಕಣಿ ಚಿತ್ರ "DAMMAM" ಪ್ರದರ್ಶನ

27 Feb, 2025

ಬೆಂಗಳೂರು: 2025ನೇ ವರ್ಷದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (BIFFes) ನಲ್ಲಿ ASIAN CINEMA COMPETITION ವಿಭಾಗದ ಅಂಗವಾಗಿ, ಖ್ಯಾತ ನಿರ್ದೇಶಕ Jayan Cherian ಅವರ ಕೊಂಕಣಿ ಚಲನಚಿತ್ರ "DAMMAM" ಪ್ರದರ್ಶನಗೊಳ್ಳಲಿದೆ. ಈ ಚಿತ್ರವು ಭಾರತೀಯ ಬುಡಕಟ್ಟು ಸಮುದಾಯದ ಆಳವಾದ ಕಥೆಯನ್ನು ಚಿತ್ರಿಕರಿಸುತ್ತಾ, ಸಂಗೀತದ ಮೂಲಕ ಆಘಾತ ಹಾಗೂ ಪುನರುಜ್ಜೀವನದ ಮಹತ್ವವನ್ನು ತೆರೆಮೇಲೆ ತರಲಿದೆ.

ಕಥಾಸಾರಾಂಶ:
"DAMMAM" ಚಿತ್ರವು ಸಿದ್ದಿಜನಾಂಗ ಸಮುದಾಯದ ಪೈಕಿ 12 ವರ್ಷ ವಯಸ್ಸಿನ ಜಯರಾಮ್ ಸಿದ್ಧಿನ ಜೀವನದ ಸುತ್ತ ಹೆಣೆಯಲಾಗಿದೆ. ಆತ ತನ್ನ ತಾತನ ಆತ್ಮವು ತನ್ನನ್ನು ಕಾಡುತ್ತಿದೆ ಎಂಬ ಭ್ರಮೆಗೆ ಒಳಗಾಗುತ್ತಾನೆ. ಈ ಅನುಭವ ಅವನನ್ನು ಭೀತಿಗೆ ಕೊಂಡೊಯ್ಯುತ್ತದೆ, ಆದರೆ ಈ ಎಲ್ಲಕ್ಕಿಂತ ಮುಖ್ಯವಾಗಿ, ಅವನ ಕುಟುಂಬವು ಆತನನ್ನು ವಾಸ್ತವಕ್ಕೆ ಮರಳಿಸಲು, ಆ ತಲೆಮಾರುಗಳಿಂದ ಕೂರಿಕೊಂಡು ಬಂದ ಮಾನಸಿಕ ಭೀತಿಗಳನ್ನು ದೂರಮಾಡಲು "ದಮ್ಮಮ್" ಎಂಬ ಸಂಗೀತ ಶಕ್ತಿಯನ್ನು ಬಳಸಿಕೊಳ್ಳುತ್ತದೆ.

ತಾಂತ್ರಿಕ ತಂಡ ಹಾಗೂ ಪ್ರಮುಖ ಪಾತ್ರಗಳು:
    ನಿರ್ಮಾಪಕರು:                                  Jayan Cherian
     ಚಿತ್ರಕಥೆ:                                         Jayan Cherian
      ಕ್ಯಾಮರಾ ಕಾರ್ಯಚರಣೆ:                   Sabin Uralikandi
       ಸಂಪಾದನೆ:                                    Shinos Rhaman
     ಸಂಗೀತ:                                       Sunilkumar PK
     ಶಬ್ದ ವಿನ್ಯಾಸ:                              Arun Ramavarma
         ಪಾತ್ರವರ್ಗ : Chinamaya Siddi, Prashant Siddi,  Girija Siddi ,  Mohan Siddi
ಅಂತರಾಷ್ಟ್ರೀಯ ಪ್ರಶಸ್ತಿ ಹಾಗೂ ಪರಿಗಣನೆ:
Kerala International Film Festival (Special Mention - Performance)
Kerala IFF Suvarna Chakoram - Best Film (ನಾಮನಿರ್ದೇಶನ)

ನಿರ್ದೇಶಕ Jayan Cherian ಪರಿಚಯ:


ಕೇರಳ ಮೂಲದ Jayan Cherian ಅವರು The City College of New York ನ MFA ಪದವೀಧರರು. ಅವರ ಸಾಕ್ಷ್ಯಚಿತ್ರಗಳು ಮತ್ತು ಚಿತ್ರಗಳು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಗುರುತಿಸಲ್ಪಟ್ಟಿವೆ. ಅವರ ಪ್ರಮುಖ ಚಿತ್ರಗಳೆಂದರೆ:
 KA BODYSCAPES (2016)
 PAPILIO BUDDHA (2014)
 THE SHAPE OF THE SHAPELESS (2010)
RHYTHM OF DAMMAM (2024)

ಚಿತ್ರದ ಪ್ರೋಮೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ



ನಾಟಕೀಯ ಕಥನ ಮತ್ತು ಸಂಗೀತದ ವಿಶಿಷ್ಟ ಬಳಕೆಯಿಂದ, DAMMAM ಚಲನಚಿತ್ರ ಪ್ರೇಕ್ಷಕರನ್ನು ಆಕರ್ಷಿಸಲು ಸಿದ್ಧವಾಗಿದೆ!

Publisher: ಕನ್ನಡ ನಾಡು | Kannada Naadu

Login to Give your comment
Powered by