ಬೆಂಗಳೂರು : ರೈತ ಉತ್ಪಾದಕರ ಸಂಸ್ಥೆಯು ಪ್ರಾಥಮಿಕ ಉತ್ಪಾದಕರ ಸಂಸ್ಥೆಯಾಗಿದ್ದು, ಕೃಷಿ ಹಾಗೂ ಸಂಬಂಧಿಸಿದ ಚಟುವಟಿಕೆಗಳಲ್ಲಿ ಪಾಲ್ಗೊಂಡ ಸದಸ್ಯ ರೈತರಿಗೆ ತಾಂತ್ರಿಕ ಸಲಹೆ, ಸಾಮಥ್ಯ ಬಲವರ್ಧನೆ. ಉತ್ತಮ ಗುಣಮಟ್ಟದ ಪರಿಕರಗಳನ್ನು ಪೂರೈಸುವುದು, ಬೆಳೆದ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮುಖಾಂತರ ನೇರ ಮಾರುಕಟ್ಟೆ ಕಲ್ಪಿಸಿ ಸದಸ್ಯ ರೈತರನ್ನು ಹೆಚ್ಚು ಸಬಲರನ್ನಾಗಿ ಮಾಡುವ ಉದ್ದೇಶದೊಂದಿಗೆ ರೈತ ಉತ್ಪಾದಕ ಸಂಸ್ಥೆಗಳ ಉತ್ಕøಷ್ಟ ಕೇಂದ್ರ, ಜಲಾನಯನ ಅಭಿವೃದ್ಧಿ ಇಲಾಖೆ, ಬೆಂಗಳೂರು (ಕರ್ನಾಟಕ ಸರ್ಕಾರ) ಹಾಗೂ ಸಣ್ಣ ರೈತರ ಕೃಷಿ-ವ್ಯಾಪಾರ ಒಕ್ಕೂಟ (ಭಾರತ ಸರ್ಕಾರ) ಸಂಸ್ಥೆಗಳ ಸಹಯೋಗದೊಂದಿಗೆ ಫೆಬ್ರುವರಿ 28 ರಿಂದ ಮಾರ್ಚ್ 2 ವರೆಗೆ ಮೂರು ದಿನಗಳ “ಎಫ್.ಪಿ.ಒ. ಮೇಳ-2025”ವನ್ನು ತೋಟಗಾರಿಕೆ ಮಹಾವಿದ್ಯಾಲಯ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣ, ಜಿ.ಕೆವಿ.ಕೆ.ಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಮೇಳದ ಉದ್ಘಾಟನೆಯನ್ನು ಮಾನ್ಯ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಯವರು ಮಾಡಲಿದ್ದು, ಮಾನ್ಯ ಕಂದಾಯ ಸಚಿವರಾದ ಕೃಷ್ಣಭೈರೇಗೌಡ ರವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಕೇಂದ್ರ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಹಾಗೂ ಯಲಹಂಕ ಕ್ಷೇತ್ರದ ಶಾಸಕರಾದ ಎಸ್.ಆರ್. ವಿಶ್ವನಾಥ್ ರವರು ಆಗಮಿಸಲಿದ್ದಾರೆ
ಈ ವಿನೂತನ ಮೇಳದಲ್ಲಿ ಸರಿಸುಮಾರು 15,000 ರೈತರು, ಉದ್ಯಮಿಗಳು ಹಾಗೂ ಹಿತಾಸಕ್ತರು ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಸ್ಥಾಪನೆಗೊಂಡಿರುವ 100 ಕ್ಕೂ ಹೆಚ್ಚು ಎಫ್.ಪಿ.ಒ. ಗಳು ತಮ್ಮ ಮಳಿಗೆಗಳನ್ನು ತೆರೆಯಲಿದ್ದು, ತಮ್ಮ ಸಂಸ್ಥೆಯ ಉತ್ಪನ್ನಗಳ ವಸ್ತು ಪ್ರದರ್ಶನ ಮಾಡಲಿದ್ದಾರೆ.
ಸುಮಾರು 400-500 ಕ್ಕೂ ಹೆಚ್ಚಿನ ಎಫ್.ಪಿ.ಒ.ಗಳ ಸದಸ್ಯರು, ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮೇಳದ ಪ್ರಯೋಜನ ಪಡೆಯಲಿದ್ದಾರೆ. ಉಳಿದಂತೆ ಈ ಮೇಳದಲ್ಲಿ ವಿವಿಧ ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದ್ದು ರೈತ ಉತ್ಪಾದಕರ ಸಂಸ್ಥೆಗಳ ಧೈಯ, ದೂರದೃಷ್ಟಿ, ಅವಕಾಶಗಳು, ತೊಡಕುಗಳು, ಸಾಮಥ್ರ್ಯ ಬಲವರ್ಧನೆ, ಕಾನೂನು ಅನುಸರಣೆ, ಮಾರಾಟ ಮಾಡುವವರ ಮತ್ತು ಖರೀದಿಸುವವರ ಸಮಾವೇಶ (Buyer-Seller Meet), ಇನ್ನಿತರೆ ವಿಷಯಗಳ ಬಗ್ಗೆ ಚಿಂತನ-ಮಂಥನ ಸಭೆಗಳು, ರೈತರು ಹಾಗೂ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲಿದೆ.
ಭಾರತ ಸರ್ಕಾರದ ಕೃಷಿ ಸಚಿವಾಲಯದ ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯು ರೈತರನ್ನು ಒಟ್ಟುಗೂಡಿಸಿ ಅವರ ಉತ್ಪಾದನೆ ಹಾಗೂ ಮಾರುಕಟ್ಟೆ ಸಾಮಥ್ರ್ಯವನ್ನು ವೃದ್ಧಿಸಲು ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸುವುದು ಹೆಚ್ಚು ಸೂಕ್ತವೆಂದು ಪರಿಗಣಿಸಿದೆ. ಇದಕ್ಕೆ ಪೂರಕವಾಗಿ ಭಾರತ ಸರ್ಕಾರವು 2013ರಲ್ಲಿ 1956ರ ಕಂಪನಿ ಕಾಯ್ದೆಗೆ ವಿಭಾಗ IXA ರಲ್ಲಿ ತಿದ್ದುಪಡಿ ತಂದು ಕಂಪನಿ ಕಾಯ್ದೆಯಡಿಯಲ್ಲಿ ರೈತ ಉತ್ಪಾದಕರ ಸಂಸ್ಥೆಗಳನ್ನು ನೊಂದಾಯಿಸಲು ಅವಕಾಶ ನೀಡಲಾಗಿದೆ.
ರೈತ ಉತ್ಪಾದಕರ ಸಂಸ್ಥೆಗಳಿಂದ ರೈತರಿಗಾಗುವ ಲಾಭಗಳನ್ನು ಮನಗಂಡು 2020ರಲ್ಲಿ ಹೊಸ ತಂತ್ರವನ್ನು ರೂಪಿಸಿ ದೇಶದಾದ್ಯಂತ 10,000 ರೈತ ಉತ್ಪಾದಕರ ಸಂಸ್ಥೆಗಳನ್ನು 5 ವರ್ಷದೊಳಗೆ ರಚಿಸಿ ಬಲಪಡಿಸಲು ಯೋಜನೆಯನ್ನು ರೂಪಿಸಲಾಗಿದೆ. ರೈತ ಉತ್ಪಾದಕರ ಸಂಸ್ಥೆಗಳ ರಚನೆ ಮತ್ತು ಅಭಿವೃದ್ಧಿಗೆ ಅಗತ್ಯ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವೂ ಸಹ, ರೈತರ ಏಳಿಗೆಗಾಗಿ ರೈತ ಉತ್ಪಾದಕರ ಸಂಸ್ಥೆಗಳನ್ನು ಉತ್ತೇಜಿಸಲು 2018ರಲ್ಲಿ ರೈತ ಉತ್ಪಾದಕರ ಸಂಸ್ಥೆಗಳ ನೀತಿಯನ್ನು ರೂಪಿಸಿ ವಿವಿಧ ಅಭಿವೃದ್ಧಿ ಇಲಾಖೆಗಳ ಮುಖಾಂತರ ರೈತ ಉತ್ಪಾದಕರ ಸಂಸ್ಥೆಗಳನ್ನು ಉತ್ತೇಜಿಸುತ್ತಿದೆ.
ಈಗಾಗಲೇ ರಾಜ್ಯದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸುಮಾರು 1,472 ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸಿದ್ದು ಅವು ವಿವಿಧ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ರೈತ ಉತ್ಪಾದಕರ ಸಂಸ್ಥೆಯು ಪ್ರಾಥಮಿಕ ಉತ್ಪಾದಕರ ಸಂಸ್ಥೆಯಾಗಿದ್ದು, ರೈತರಿಗೆ ಬೇಕಾದ ಅಗತ್ಯ ತರಬೇತಿ, ಸಲಹೆ ಹಾಗೂ ಆರ್ಥಿಕ ನೆರವನ್ನು ಸರ್ಕಾರವು ವಿವಿಧ ಸಂಸ್ಥೆಗಳ ಮುಖಾಂತರ ನೀಡುತ್ತ ಬಂದಿದೆ. ರೈತ ಉತ್ಪಾದಕರ ಕಂಪನಿಗಳ ಸದಸ್ಯರು, ರೈತ ಬಾಂಧವರು, ರೈತೋದ್ಯಮಿಗಳು, ಆಸಕ್ತ ನಾಗರೀಕರು ಈ ಮೇಳದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ, ಡಾ. ರಾಘವೇಂದ್ರ ಮೇಸ್ತ, ನಿರ್ದೇಶಕರು, ದೂರವಾಣಿ ಸಂಖ್ಯೆ 9448640881 ಹಾಗೂ ಡಾ. ಸದಾನಂದ. ಜಿ. ಕೆ. ಉಪ ನಿರ್ದೇಶಕರು, ದೂರವಾಣಿ ಸಂಖ್ಯೆ 9481181749 ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರ, ಬೆಂಗಳೂರು ರವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Publisher: ಕನ್ನಡ ನಾಡು | Kannada Naadu