ಬೆಂಗಳೂರು : ನಬಾರ್ಡ್ ರಾಜ್ಯಕ್ಕಾಗಿ 2025-26ನೇ ಸಾಲಿನಲ್ಲಿ 4.47 ಲಕ್ಷ ಕೋಟಿ ರೂ.ಗಳ ಆದ್ಯತಾ ವಲಯದ ಸಾಲ ಸಾಮಥ್ರ್ಯ ಯೋಜನೆ ರೂಪಿಸಿದೆ. ಇದು 2024-25ನೇ ಸಾಲಿನಲ್ಲಿ ಮಾಡಿದ ಅಂದಾಜಿಗಿಂತ ಶೇ.12.55 ರಷ್ಟು ಅಧಿಕವಾಗಿದೆ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಶ್ರೀಮತಿ ಉಮಾ ಮಹದೇವನ್ ತಿಳಿಸಿದರು.
ಇಂದು ನಬಾರ್ಡ್‍ನ ಪ್ರಾದೇಶಿಕ ಕಚೇರಿಯ ಸಭಾಂಗಣದಲ್ಲಿ ನಬಾರ್ಡ್ ಆಯೋಜಿಸಿದ್ದ “ರಾಜ್ಯ ಸಾಲ ಗೋಷ್ಠಿ” ವಿಚಾರ ಸಂಕಿರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ ಗ್ರಾಮೀಣ ಜೀವನೋಪಾಯಗಳನ್ನು ಬಲಪಡಿಸುವುದರ ಜೊತೆಗೆ ಕೃಷಿಯ ಸಾಮಥ್ರ್ಯ, ಆರ್ಥಿಕ ಬಲವನ್ನು ಹೆಚ್ಚಿಸಲು ನಬಾರ್ಡ್ ತೋರಿದ ನಿರಂತರ ಬದ್ಧತೆಯನ್ನು ಶ್ಲಾಘಿಸಿದರು.
ರಾಜ್ಯವು ಹಿಂದಿನಿಂದಲೂ ಒಂದು ಕ್ರಿಯಾಶೀಲ ರಾಜ್ಯವಾಗಿದ್ದು, ತನ್ನ ಕೃಷಿ ಬೇರುಗಳನ್ನು ಕೈಗಾರಿಕಾ ಪ್ರಗತಿಯೊಂದಿಗೆ ಸಮತೋಲನಗೊಳಿಸುತ್ತಿದೆ. ಕೃಷಿಯು ಮಹ್ವದ ಆಧಾರ ಸ್ತಂಭವಾಗಿ ಉಳಿದಿದ್ದರೂ, ಇಂದಿನ ಗ್ರಾಮೀಣ ಪರಿವರ್ತನೆಯು ತಂತ್ರಜ್ಞಾನ ಅಳವಡಿಕೆ, ಮೂಲಸೌಕರ್ಯ ವಿಸ್ತರಣೆ, ಹವಾಮಾನ ಸೂಕ್ಷ್ಮ ಕಾರ್ಯಾಚರಣೆಗಳು ಮತ್ತು ಕೃಷಿಯೇತರ ಉದ್ಯೋಗವಕಾಶಗಳಿಂದ ಪ್ರೇರಿತವಾಗಿದೆ ಎಂದರು.
ಮೂಲ ಸೌಕರ್ಯದ ಸೃಷ್ಟಿಗೆ ಸಾರ್ವಜನಿಕ ಹೂಡಿಕೆಗಳು ಸಾಲದ ಪ್ರಯೋಜನವನ್ನು ಪಡೆದುಕೊಳ್ಳುವ ಸಾಮಥ್ರ್ಯವನ್ನು ಹೆಚ್ಚಿಸಲು ಪ್ರಮುಖ ಉತ್ಪ್ರೇರಕವಾಗಿರುವುದರಿಂದ ಗ್ರಾಮೀಣ ಸಂಪರ್ಕ, ನೀರಾವರಿ ಮೂಲಸೌಕರ್ಯ, ಮಾರುಕಟ್ಟೆ ಮತ್ತು ಉಗ್ರಾಣ ಸೌಲಭ್ಯಗಳು, ಆರೋಗ್ಯ ಮತ್ತು ನೈರ್ಮಲ್ಯ, ಕುಡಿಯುವ ನೀರಿನ ಸರಬರಾಜು ಇತ್ಯಾದಿ ಗ್ರಾಮೀಣ ಮೂಲಸೌಕರ್ಯಗಳನ್ನು ಸ್ಥಾಪಿಸುವ ಮೂಲಕ ಅಂದಾಜು ಸಾಲ ಸಾಮಥ್ರ್ಯವನ್ನು ಬಳಸಿಕೊಳ್ಳಲು ರಾಜ್ಯವು ಸುಸಜ್ಜಿತವಾಗಿದೆ ಎಂದರು.
ನಬಾರ್ಡ್ ಜೀವಾ ಯೋಜನೆಯಡಿ ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಸಿದ್ದನಗೌಡನಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಬುಕ್ಕಾಸಾಗರದಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಕಾಮಾರವರಿಪಲ್ಲಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಕಾರ್ಯಕ್ರಮವು ಕೃಷಿ ಪರಿಸರ ಪರಿವರ್ತನೆಯ ವಿಧಾನವಾಗಿದೆ ಎಂದರು.
ನಬಾರ್ಡ್ ಗ್ರಾಮೀಣ ಮಹಿಳೆಯರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂದೆ ಇದ್ದಾರೆ. ಸರ್ಕಾರವು ಸಹ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಮಾಹೆಯಾನ 2 ಸಾವಿರ ನೀಡುತ್ತಿದೆ. ಅಲ್ಲದೆ ಉಚಿತ ಬಸ್ ಸೌಲಭ್ಯವನ್ನು ಕಲ್ಪಿಸಿದೆ. ಇದರಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಹೆಚ್ಚಿನ ಉಪಯೋಗವಾಗುತ್ತಿದೆ. ಇಂದು ಮಹಿಳೆಯರು ಬ್ಯಾಂಕಿನಲ್ಲೂ ಸಹ ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಧಿ (ಆರ್‍ಐಡಿಎಫ್) ಮೂಲಕ ಗ್ರಾಮೀಣ ಮೂಲ ಸೌಕರ್ಯಗಳ ಸೃಷ್ಟಿಗೆ ಆರ್ಥಿಕ ನೆರವು ನೀಡುವ ಮೂಲಕ ನಬಾರ್ಡ್ ಗ್ರಾಮೀಣ ಮೂಲ ಸೌಕರ್ಯ ಸೃಷ್ಟಿಸುವಲ್ಲಿ ರಾಜ್ಯ ಸರ್ಕಾರದ ಪರಿಶ್ರಮಗಳಿಗೆ ಪೂರಕವಾಗಿದೆ ಎಂದರು.
ಇದೇ ಸಂದರ್ಭದಲ್ಲಿ “ಜೀವಾ” ಯೋಜನೆಯ ಕಿರುಚಿತ್ರ, ಸ್ಟೇಟ್ ಫೋಕಸ್ ಪೇಪರ್ 2025-26, ಫೈನಾನ್‍ಷಿಯಲ್ ಇನ್‍ಕ್ಲುಷನ್ “ಅನ್‍ಲಾಕಿಂಗ್ ಸಕ್ಸಸ್ ಇನ್ ಕರ್ನಾಟಕ” ಹಾಗೂ ಮಾರ್ಕೆಟಿಂಗ್ ಇನಿಟಿಯೇಟಿವ್ಸ್ ಆಫ್ ನಬಾರ್ಡ್ ಇನ್ ಕರ್ನಾಟಕ ಪುಸ್ತಕ ಬಿಡುಗಡೆ ಮಾಡಿದರು.
ಕನಾಟಕ ಪ್ರಾದೇಶಿಕ ಕಚೇರಿಯ ನಬಾರ್ಡ್‍ನ ಮುಖ್ಯ ವ್ಯವಸ್ಥಾಪಕÀರಾದ ಕೆವಿಎಸ್‍ಎಸ್‍ಎಲ್‍ವಿ ಪ್ರಸಾದ್ ರಾವ್ ಅವರು ಮಾತನಾಡಿ, ಕರ್ನಾಟಕದಲ್ಲಿ ಆದ್ಯವಲಯದ ಸಾಲಕ್ಕಾಗಿ ರೂಪಿಸಿರುವ ಅಂದಾಜು ರೂ.4.47 ಲಕ್ಷ ಕೋಟಿ ರೂ.ಗಳ ಸಾಲ ಸಾಮಥ್ರ್ಯದಲ್ಲಿ ಕೃಷಿಯ ಪಾಲು ರೂ.2.04 ಲಕ್ಷ ಕೋಟಿ, ಎಂಎಸ್‍ಎಂಇ ಪಾಲು ರೂ.1.88 ಲಕ್ಷ ಕೋಟಿ ಮತ್ತು ಇತರ ಆದ್ಯತೆಯ ವಲಯದ ಚÀಟುವಟಿಕೆಗಳ ಪಾಲು ರೂ. 0.56 ಲಕ್ಷ ಕೋಟಿ ಎಂದು ನಿಗಧಿಪಡಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆರ್‍ಬಿಐನ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಸೋನಾಲಿ ಸೇನ್ ಗುಪ್ತಾ, ಎಸ್‍ಬಿಐನ ಚೀಫ್ ಜನರಲ್ ಮ್ಯಾನೇಜರ್, ಶ್ರೀಮತಿ ಜೂಹಿ ಸ್ಮಿತಾ ಸಿನ್ಹಾ, ಕೆನರಾ ಬ್ಯಾಂಕ್ ಇ.ಡಿ ಭವೇಂದ್ರ ಕುಮಾರ್, ಕರ್ನಾಟಕದ ಎಸ್‍ಎಲ್‍ಬಿಸಿಯ ಸಂಚಾಲಕರಾದ ಎಂ.ಭಾಸ್ಕರ ಚಕ್ರವರ್ತಿ, ರಾಜ್ಯ ಸರ್ಕಾರದ ಮತ್ತು ಬ್ಯಾಂಕ್ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Publisher: ಕನ್ನಡ ನಾಡು | Kannada Naadu