CreamA Cream article
Article

ವಿಧಾನಸಭೆಯ ಸಭಾಧ್ಯಕ್ಷರನ್ನು ಭೇಟಿ ಮಾಡಿದ ಜರ್ಮನಿ ದೇಶದ ಬವೇರಿಯಾ ಸಂಸತ್ತಿನ ಸದಸ್ಯರ ನಿಯೋಗ

ಕನ್ನಡ ನಾಡು

 

ಬೆಂಗಳೂರು : ಜರ್ಮನಿ ದೇಶದ ಬವೇರಿಯಾ ಸಂಸತ್ತಿನ "Internal Security and Municipal Affairs and Sport" ಸಮಿತಿಯ ಉಪಾಧ್ಯಕ್ಷರಾದ Florian Siekmann ಅವರ ನೇತೃತ್ವದ 23 ಸದಸ್ಯರುಗಳನ್ನೊಳಗೊಂಡ ನಿಯೋಗವು ವಿಧಾನ ಸೌಧಕ್ಕೆ ಭೇಟಿ ನೀಡಿ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಅವರನ್ನು ಭೇಟಿ ಮಾಡಿ ವಿಧಾನ ಮಂಡಲದ ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳೊಂದಿಗೆ ಚರ್ಚೆ ನಡೆಸಿದರು.

ಬವೇರಿಯಾ ಸಂಸತ್ತಿನ ಮತ್ತು ಕರ್ನಾಟಕ ವಿಧಾನ ಸಭೆಯ ಸದನದ ಕಾರ್ಯವೈಖರಿ, ನಡಾವಳಿಗಳು, ನಿಯಮಾವಳಿಗಳ ಕುರಿತು ಸಭೆಯಲ್ಲಿ ಪರಸ್ಪರ ಚರ್ಚಿಸಿದ ಮುಖಂಡರುಗಳು, ಮುಂದೆ ಕರ್ನಾಟಕ ಮತ್ತು ಬವೇರಿಯಾ ಸಂಸತ್ತಿನ ನಡುವೆ ಅತ್ಯುತ್ತಮ ನಡವಳಿಗಳ ಕುರಿತು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದಾಗಿದೆ ಎಂದು ಸಭಾಧ್ಯಕ್ಷರು ತಿಳಿಸಿದರು.

ಸಭೆಯಲ್ಲಿ, ವಿಧಾನ ಮಂಡಲದ ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ಅಧಿಕಾರಿಗಳು ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

Read More