ಕನ್ನಡ ನಾಡು | Kannada Naadu

ರಾಷ್ಟ್ರೀಯ ಕ್ರೀಡಾಕೂಟ - ಈಜು ವಿಭಾಗದಲ್ಲಿ ಕರ್ನಾಟಕದ ಶ್ರೀಹರಿ ಹಾಗೂ ದಿನಿಧಿಗೆ ಪ್ರಶಸ್ತಿ

13 Feb, 2025

 

ಬೆಂಗಳೂರು : ಉತ್ತರಾಖಂಡ್‍ನಲ್ಲಿ ಇತ್ತೀಚೆಗೆ ಜರುಗಿದ ರಾಷ್ಟ್ರೀಯ ಕ್ರೀಡಾಕೂಟದ ಈಜು ವಿಭಾಗದ ಸ್ಫರ್ಧೆಗಳಲ್ಲಿ ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್‍ನಿಂದ ಪ್ರತಿನಿಧಿಸಿದ್ದ ಶ್ರೀಹರಿ ನಟರಾಜ್ ಅವರು ಅತ್ಯುತ್ತಮ ಪುರುಷ ಈಜುಪಟು ಹಾಗೂ ದಿನಿಧಿ ದೇಸಿಂಗು ಅವರು ಅತ್ಯುತ್ತಮ ಮಹಿಳಾ ಈಜುಪಟು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

 

ಕ್ರೀಡಾಪಟುಗಳ ಈ ಸಾಧನೆ ಸ್ಫೂರ್ತಿದಾಯಕವಾಗಿದೆ ಹಾಗೂ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ಹೊಸೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಛಾಯಾಚಿತ್ರ ಲಗತ್ತಿಸಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by