ಕನ್ನಡ ನಾಡು | Kannada Naadu

ಅಖಿಲ ಭಾರತ ದಕ್ಷಿಣ ವಲಯ ಪೊಲೀಸ್ ಟಿ-20 ಕ್ರಿಕೆಟ್ ಪಂದ್ಯಾವಳಿ-2025

13 Feb, 2025

 

ಬೆಂಗಳೂರು, ಫೆಬ್ರವರಿ 13, (ಕರ್ನಾಟಕ ವಾರ್ತೆ):

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನೇತೃತ್ವದಲ್ಲಿ ನಡೆದ ಮೊದಲನೇ ಅಖಿಲ ಭಾರತ ದಕ್ಷಿಣ ವಲಯ ಪೆÇೀಲಿಸ್ ಟಿ-20 ಕ್ರಿಕೆಟ್ ಪಂದ್ಯಾವಳಿಯು ಫೆಬ್ರವರಿ 11, 2025 ರಂದು ಮುಕ್ತಾಯಗೊಂಡಿತು. ಪಂದ್ಯಾವಳಿಯ ಸಮಾರೋಪ ಸಮಾರಂಭವು ಡಾ. ಅಲೋಕ್ ಮೋಹನ್, ಐಪಿಎಸ್, ಡಿಜಿ&ಐಜಿಪಿ, ಕರ್ನಾಟಕ ರಾಜ್ಯ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಫೆಬ್ರವರಿ 7 ರಿಂದ 11, 2025 ರವರೆಗೆ ನಡೆದ ಈ ಐತಿಹಾಸಿಕ ಪದ್ಯಾವಳಿಯಲ್ಲಿ ಕರ್ನಾಟಕ ಸೇರಿದಂತೆ ಅಂಡಮಾನ್ ಮತ್ತು ನಿಕೋಬಾರ್, ಛತ್ತೀಸ್‍ಗಢ, ಐಟಿಬಿಪಿ (ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್), ಕೇರಳ, ಲಕ್ಷದ್ವೀಪ, ಎನ್.ಎಸ್.ಜಿ. (ನ್ಯಾಷನಲ್ ಸೆಕ್ಯುರಿಟಿ ಗಾರ್ಡ್) ಪುದುಚೇರಿ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಒಟ್ಟು 10 ತಂಡಗಳು ಭಾಗವಹಿಸಿದವು. ಪಂದ್ಯಾವಳಿಗಳನ್ನು ಎಎಸ್‍ಸಿ ಕ್ರಿಕೆಟ್ ಮೈದಾನ ದೊಮ್ಮಲೂರು ಮತ್ತು ಆರ್‍ಎಸ್‍ಐ ಕ್ರೀಡಾ ಮೈದಾನ ಎಂ.ಜಿ.,ರಸ್ತೆ, ಬೆಂಗಳೂರು ಇಲ್ಲಿ ನಡೆಸಲಾಯಿತು.

ತಮಿಳುನಾಡು ಮತ್ತು ಕೇರಳ ರಾಜ್ಯಗಳ ನಡುವೆ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕೇರಳ ಪೊಲೀಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ತಮಿಳುನಾಡು 20 ಓವರ್‍ಗಳಲ್ಲಿ 8 ವಿಕೆಟ್‍ಗಳ ನಷ್ಟದೊಂದಿಗೆ 173 ರನ್‍ಗಳ ಮೊತ್ತವನ್ನು ಕಲೆಹಾಕಿದರು. ಕೇರಳ ಪೆÇಲೀಸ್ ತಂಡವು 19 ಓವರ್‍ಗಳಲ್ಲಿ ಕೇವಲ 136 ರನ್ ಗಳಿಸುವ ಮೂಲಕ ತನ್ನ ಎಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು ತಮಿಳುನಾಡು ತಂಡದ ವಿರುದ್ಧ 37 ರನ್‍ಗಳಿಂದ  ಸೋಲನ್ನು ಅನುಭವಿಸಿತು. ತಮಿಳುನಾಡು ರಾಜ್ಯ ಪೆÇಲೀಸ್ ತಂಡವು ಫೈನಲ್ ಪಂದ್ಯವನ್ನು ಗೆಲ್ಲುವುದರ ಮೂಲಕ ಅಖಿಲ ಭಾರತ ದಕ್ಷಿಣವಲಯ ಪೆÇಲೀಸ್ ಟಿ-20 ಕ್ರಿಕೆಟ್ ಪಂದ್ಯಾವಳಿ-2025 ರ ಚಾಂಪಿಯನ್ ಆಗಿ ಹೊರಹೊಮ್ಮಿತು.

ಪುದುಚೇರಿ ಪೊಲೀಸ್ ತಂಡದ ಆಟಗಾರ ಪ್ರಭುರವರು 3 ಪಂದ್ಯಗಳಲ್ಲಿ 195 ರನ್ ಹಾಗೂ ಬಾಲಿಂಗ್‍ನಲ್ಲಿ  06 ವಿಕೆಟ್‍ಗಳನ್ನು ಪಡೆಯುವುದರ ಮೂಲಕ ʼಸರಣಿ ಶ್ರೇಷ್ಠʼ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಡಾ. ಅಲೋಕ್ ಮೋಹನ್, ಐಪಿಎಸ್, ಡಿಜಿ ಮತ್ತು ಐಜಿಪಿ ಕರ್ನಾಟಕ ರಾಜ್ಯರವರು ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತ ಪೊಲೀಸರು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಉಲ್ಲಾಸ ಸಿಗುವುದರ ಜೊತೆಗೆ ದೈಹಿಕ ಹಾಗೂ ಮಾನಸಿಕ ಸದೃಡತೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು ಹಾಗೂ ವಿಜೇತರಿಗೆ ಬಹುಮಾನಗಳನ್ನು ವಿತರಿಸುವ ಮೂಲಕ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ಪೊಲೀಸ್ ತಂಡಗಳಿಗೆ ಶುಭ ಹಾರೈಸಿದರು.

ಈ ಟೂರ್ನಮೆಂಟ್ ಅನ್ನು ಉಮೇಶ್ ಕುಮಾರ್, ಐಪಿಎಎಸ್ ಎಡಿಜಿಪಿ, ಕೆಎಸ್‍ಆರ್‍ಪಿ ಬೆಂಗಳೂರು ರವರ ನೇತೃತ್ವದಲ್ಲಿ ಮತ್ತು ಸಂದೀಪ್ ಪಾಟೀಲ್, ಐಪಿಎಸ್, ಐಜಿಪಿ, ಕೆಎಸ್‍ಆರ್‍ಪಿ ಹಾಗೂ ಇತರ ಹಿರಿಯ ಅಧಿಕಾರಿಗಳ ಮಹತ್ವ ಪೂರ್ಣ ಕೊಡುಗೆ ಹಾಗೂ ಸಹಕಾರದಿಂದ ಅಖಿಲ ಭಾರತ ಮಟ್ಟದಲ್ಲಿ ಮೊಟ್ಟ ಮೊದಲ ಬಾರಿಗೆ ಯಶಸ್ವಿಯಾಗಿ ಆಯೋಜಿಸಲಾಯಿತು.

Publisher: ಕನ್ನಡ ನಾಡು | Kannada Naadu

Login to Give your comment
Powered by