ಕನ್ನಡ ನಾಡು | Kannada Naadu

ಫೆಬ್ರವರಿ 17 ರಿಂದ 24 ರವರೆಗೆ 2025 ನೇ ಸಾಲಿನ ರಸ್ತೆ ಸಂಚಾರ ಗಣತಿ

13 Feb, 2025

 

ಬೆಂಗಳೂರು  : ಕರ್ನಾಟಕ ರಾಜ್ಯದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಓಡಾಡುವ ವಾಹನಗಳ ಗಣತಿಯನ್ನು ನಡೆಸಲಾಗುತ್ತಿದ್ದು, 2025 ನೇ ಸಾಲಿನ ರಸ್ತೆ ಸಂಚಾರ ಗಣತಿಯನ್ನು ಫೆಬ್ರವರಿ 17 ರ ಬೆಳಿಗ್ಗೆ 6.00 ಗಂಟೆಯಿಂದ ಫೆಬ್ರವರಿ 24 ರ ಬೆಳಿಗ್ಗೆ 6.00 ಗಂಟೆಯವರೆಗೆ ಸತತವಾಗಿ 07 ದಿನಗಳ ಕಾಲ ನಡೆಯಲಿದೆ.

ಸಂಚಾರ ಗಣತಿಗೆ ಈಶಾನ್ಯ ವಲಯದ ಕಲಬುರಗಿ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳ ಮೇಲೆ 361 ಗಣತಿ ಕೇಂದ್ರಗಳನ್ನು ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ 601 ಗಣತಿ ಕೇಂದ್ರಗಳು ಸೇರಿ ಒಟ್ಟು 962 ಗಣತಿ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕಲಬುರಗಿಯ ಲೋಕೋಪಯೋಗಿ ಇಲಾಖೆಯ  ಸಂಪರ್ಕ ಮತ್ತು ಕಟ್ಟಡಗಳು (ಈಶಾನ್ಯ) ಮುಖ್ಯ ಇಂಜಿನೀಯರ್ ಶರಣಪ್ಪ ಸುಲಗಂಟೆ ಅವರು ತಿಳಿಸಿದ್ದಾರೆ.

ಗಣತಿಯ ಮುಖ್ಯ ಉದ್ದೇಶಗಳು:
ಪ್ರತಿ ರಸ್ತೆಯ ಸಂಚಾರದ ಬೆಳವಣೆಗೆಯ ತೀವ್ರತೆಯನ್ನು ಅಳೆಯುವುದು. ಪ್ರಸ್ತುತದಲ್ಲಿ ಇರುವ ರಸ್ತೆಗಳನ್ನು ದುರಸ್ತಿ ಪಡಿಸುವಲ್ಲಿ ಹಾಗೂ ರಸ್ತೆಯನ್ನು ಇನ್ನು ಉತ್ತಮ ಪಡಿಸಲು ಸಹಾಯಕವಾಗುವುದು. ರಸ್ತೆಯ ಸಂಚಾರದ ಬೆಳವಣೆಗೆಯ ತೀವ್ರತೆಯನ್ನು ಗಮನಿಸಿ ರಸ್ತೆಯ ಅಗಲಿಕರಣ ಗೊಳಿಸುವುದು. ರಸ್ತೆಗಳನ್ನು ಮೇಲ್ದರ್ಜೆಗೇರಿಸುವಲ್ಲಿ ಈ ಗಣತಿಯ ವರದಿ ಪ್ರಮುಖವಾಗಿರುತ್ತದೆ.

ರಸ್ತೆಯ ಸಂಚಾರದ ಗಣತಿಯಿಂದ ವಾಹನ ಅಪಘಾತಗಳನ್ನು ತಡೆಯಲು ಕ್ರಮ ತೆಗೆದುಕೂಳ್ಳಲು ಅನುಕೂಲವಾಗುತ್ತದೆ. ರಸ್ತೆ ಸಂಚಾರ ಗಣತಿಯಿಂದ ಆ ರಸ್ತೆ ಮೇಲೆ ಯಾವ ರೀತಿ ವಾಹನ ಸಂಚಾರ ಅಧಿಕವಾಗುತ್ತಿದೆ ಎನ್ನುವುದನ್ನು ತಿಳಿಯುವುದರಿಂದ ಹಲವಾರು ರಸ್ತೆಗಳ ಅಭಿವೃದ್ಧಿ ಕಾರ್ಯಕ್ರಮವನ್ನು ಸರ್ಕಾರ ಮಟ್ಟದಲ್ಲಿ ರೂಪಿಸಲು ಅನುಕುಲವಾಗುತ್ತದೆ. ಸಂಚಾರ ಗಣತಿಯನ್ನು ಯಶಸ್ವಿಯಾಗಿಸಲು ವಾಹನ ಚಾಲಕರು ಮತ್ತು ಸಾರ್ವಜನಿಕರು ತಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ ಸಹಕರಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by