ಬೆಂಗಳೂರು : ರಾಜ್ಯದ ಎಲ್ಲಾ ಸ್ಥಳಗಳಲ್ಲಿ ಸ್ಥಾಪಿಸಲ್ಪಟ್ಟಿರುವ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಯಡಿ ತಮ್ಮ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು ಇ-ಕಾರ್ಮಿಕ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳಲು ಕಾರ್ಮಿಕ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ.
ನೋಂದಣಿ ಮಾಡಲು ತಮ್ಮ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಯಾವುದೇ ನೌಕರರು ಇಲ್ಲದಿದ್ದರೆ ಶುಲ್ಕ ರೂ. 405/-, 1 ರಿಂದ 9 ನೌಕರÀರಿದ್ದರೆ ರೂ.810/-, 10 ರಿಂದ 19 ನೌಕರÀರಿದ್ದರೆ ರೂ.5400/-, 20 ರಿಂದ 49 ನೌಕರÀರಿದ್ದರೆ ರೂ.13,500/-, 50 ರಿಂದ 99 ನೌಕರÀರಿದ್ದರೆ ರೂ.27,000/-, 100 ರಿಂದ 250 ನೌಕರÀರಿದ್ದರೆ ರೂ.54,000/-, 251 ರಿಂದ 500 ನೌಕರರಿದ್ದರೆ ರೂ.67,500/-, 501 ರಿಂದ 1,000 ನೌಕರರಿದ್ದರೆ ರೂ94,500/-, 1,000 ಸಾವಿರಕ್ಕಿಂತ ಅಧಿಕ ನೌಕರರು ಕಾರ್ಯನಿರ್ವಹಿಸುತ್ತಿದ್ದರೆ ರೂ.1,01,250/- ಗಳನ್ನು ಪಾವತಿಸಬೇಕು.
ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961 ರ ಪ್ರಾವಧಾನಗಳ ಕಾರ್ಯವ್ಯಾಪ್ತಿಯನ್ನು ಕರ್ನಾಟಕ ರಾಜ್ಯಾದ್ಯಂತ ವಿಸ್ತರಿಸಿದೆ. ಈ ಅಧಿಸೂಚನೆಯು 2025 ಜನವರಿ 1 ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾಗಿದೆ. ಇದು ಈ ಹಿಂದೆ ಹೊರಡಿಸಲಾದ ಎಲ್ಲಾ ಅಧಿಸೂಚನೆಗಳ ಮುಂದುವರೆದ ಭಾಗವಾಗಿದ್ದು, ಅಧಿನಿಯಮದ ಉಪಬಂಧಗಳು ಈಗಾಗಲೇ ಜಾರಿಗೆ ಬಂದಿರುವ ಸ್ಥಳಗಳನ್ನು ಒಳಗೊಂಡಂತೆ ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ ಮೂರು ತಿಂಗಳ ನಂತರದ ದಿನಾಂಕದಿಂದ 2025 ಏಪ್ರಿಲ್ 1 ರಿಂದ ರಾಜ್ಯದ ಎಲ್ಲಾ ಸ್ಥಳಗಳಲ್ಲಿ ಜಾರಿಗೆ ಬರಲಿದೆ.
ಆನ್‍ಲೈನ್‍ನಲ್ಲಿ ಅರ್ಜಿಯನ್ನು ಜಾಲತಾಣ https://www.ekarmika.karnataka.gov.in/ekarmika/Static/Home.aspx ಮೂಲಕ ಸಲ್ಲಿಸಬಹುದು. ಇಲಾಖೆಯ ಹಿರಿಯ ಕಾಮಿಕ ನಿರೀಕ್ಷಕರು ಮತ್ತು ಕಾರ್ಮಿಕ ನಿರೀಕ್ಷಕರು ನೋಂದಣಿ ಅಧಿಕಾರಿಗಳಾಗಿರುತ್ತಾರೆ. ಹೆಲ್ಪ್‍ಲೈನ್ ಸಂಖ್ಯೆ 155214 ಹಾಗೂ ಇ-ಮೇಲ್ ವಿಳಾಸ: ekarmikalabour@gmail.com ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Publisher: ಕನ್ನಡ ನಾಡು | Kannada Naadu