ಕನ್ನಡ ನಾಡು | Kannada Naadu

ಕನೂರಿ ಗಡಿಯ ಹೋರಾಟ ದೇಶದ ರೈತರ ಹಿತರಕ್ಷಣೆಯ ಹೋರಾಟ .ನಾಳೆಗೆ ಒಂದು ವರ್ಷ ರೈತರಿಗೆ ದುಃಖದ ವರ್ಷ ಪೂರೈಸುತ್ತಿದೆವೆ.

12 Feb, 2025

 

 

ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯೆತರ ಸಂಘಟನೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು. ದೇಶದ ರೈತರ ಸಾಲ ಮನ್ನಾ ಆಗಬೇಕು. ಸ್ವಾಮಿನಾಥನ್ ವರದಿ ಜಾರಿಗೆ ಬರಬೇಕು .
60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ಬರಬೇಕು ಎಂಬ ಒತ್ತಾಯಗಳ ಬಗ್ಗೆ ಕಳೆದ ವರ್ಷ ಫೆಬ್ರವರಿ 13 ರಂದು ಆರಂಭಿಸಿ ದೆಹಲಿಗೆ ಹೋಗಲು ಟ್ರ್ಯಾಕ್ಟರ್ ರ್ಯಾಲಿ ಹೋಗುತ್ತಿದ್ದಾಗ ಹರಿಯಾಣ ಸರ್ಕಾರ ರಸ್ತೆ ಮಧ್ಯದಲ್ಲಿ ತಡೆದ ಪರಿಣಾಮವಾಗಿ ಚಳುವಳಿ ಮುಂದುವರಿಯುತ್ತಿದೆ.ಇದರ ಅಂಗವಾಗಿ ಒಂದು ವರ್ಷ ತುಂಬಿದ ಕ್ರಾಂತಿ ದಿನ ಆಚರಣೆಗಾಗಿ ಇಂದು ಕನೂರಿಯಲ್ಲಿ ಕಿಸಾನ್ ರ್ಯಾಲಿ ನಡೆಸಲಾಯಿತು.

ಈ ರ್ಯಾಲಿಯಲ್ಲಿ ಭಾಗವಹಿಸಿದ ದಕ್ಷಿಣ ಭಾರತ ರಾಜ್ಯಗಳ ಸಂಚಾಲಕ ರೈತ ಮುಖಂಡ ಕುರುಬೂರ್ ಶಾಂತಕುಮಾರ್ ಮಾತನಾಡಿ

ದೇಶಕ್ಕೆ ಸ್ವತಂತ್ರ ಬಂದ 76 ವರ್ಷಗಳಲ್ಲಿ ರೈತನ ಬದುಕು ಆತ್ಮಹತ್ಯ ಹಾದಿಯಲ್ಲಿ ಸಾಗಿದೆ ರೈತ ವಲಸೆ ಹೋಗುತ್ತಿದ್ದಾನೆ ರೈತರ ದೇಶ ಕೃಷಿ ಅವಲಂಬಿತರ ದೇಶ ರೈತ ದೇಶದ ಬೆನ್ನೆಲುಬು ಎನ್ನುತ್ತಾರೆ ಆಡಳಿತಗಾರರು ಆದರೆ ಬೆನ್ನೆಲುಬನ್ನ ಮುರಿಯುವ ಕೆಲಸ ನಿರಂತರವಾಗಿ ನಡೆಯುತ್ತಿದೆ.     

ಮತ್ತೊಂದು ಕಡೆ ಪ್ರಕೃತಿ ವಿಕೋಪ. ಹವಮಾನ ವೈಪರಿತ್ಯ ಕೂಡ ರೈತನನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. ಆದರೆ ರೈತರಿಂದ ಆಯ್ಕೆಯಾದ ಕೇಂದ್ರ ಸರ್ಕಾರ ರೈತರ ಸಮಸ್ಯೆಗಳ ಬಗ್ಗೆ ನಿರ್ಲಕ್ಷತನ ತೋರುತ್ತಿದೆ ಆದರೆ ಶೇಕಡ 2 ಇರುವ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಲು ಒಂದು ವರ್ಷ ಮೊದಲೇ  ವೇತನವನ್ನು ಏರಿಕೆ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.   ಆದರೆ 70ರಷ್ಟು ಇರುವ ರೈತರು ನಾಲ್ಕು ವರ್ಷಗಳಿಂದ ಹೋರಾಟ ಮಾಡುತ್ತಿದ್ದರು ನಿರ್ಲಕ್ಷ ಮಾಡುತ್ತಿದ್ದಾರೆ ಯಾಕೆ ಈ ರೀತಿಯ ತಾರತಮ್ಯ.  ಈ ಬಗ್ಗೆ ನಾವು ಗೆಲ್ಲಿಸಿದ ಜನಪ್ರತಿನಿಧಿಗಳು ನಿದ್ರೆ ಮಾಡುವ ನಾಟಕವಾಡುತ್ತಿದ್ದಾರೆ.       
ಈಗ ಬ್ಯಾಂಕುಗಳು ರೈತರ ಜಮೀನು ಮುಟ್ಟುಗೊಲು ಆಗುವ ಸರ್ಪ್ರೈಸಿ ಕಾಯ್ದೆ ರೂಪಿಸಿ ಕೃಷಿಕರ ಜಮೀನು ಕಿತ್ತುಕೊಂಡು ಒಕ್ಕಲಿಬ್ಬಿಸುವ ಕಾರ್ಯ ಮಾಡುತ್ತಿದ್ದಾರೆ. ನಮ್ಮೆಲ್ಲರ ಪ್ರಧಾನಿಗಳು ಕಾಣದ ಕೈಗಳ ಒತ್ತಡದಲ್ಲಿ ಸಿಲುಕಿ ಆಡಳಿತ ನಡೆಸುವ ಕಾರಣದಿಂದ ರೈತರ ಬದುಕು ಬೀದಿಪಾಲಾಗಿದೆ. ಬಿಜೆಪಿ ಪಕ್ಷ ಎಂದರೆ ಬಿಸಿನೆಸ್ ಮ್ಯಾನ್ ಗಳ ಪಕ್ಷ ಎಂದು ಕರೆಯುತ್ತಾರೆ .  ನಮ್ಮ ಹೋರಾಟ ಇರುವುದು ಕಬ್ಬಿಗೆ ಎಫ್‌ಆರ್‌ಪಿ ದರ ಶಾಸನಬದ್ಧವಾಗಿ ನಿಗದಿ ಮಾಡುತ್ತಾರೆ ಅದೇ ರೀತಿ ಎಲ್ಲಾ ಕೃಷಿ ಉತ್ಪನ್ನಗಳಿಗೂ ನಿಗದಿ ಮಾಡಿ ಎಂಬುದು ನಮ್ಮ ಒತ್ತಾಯ ಅದಕ್ಕೆ ಸರ್ಕಾರ ಯಾಕೆ ನಿರ್ಲಕ್ಷತನ ತೋರುತ್ತಿದೆ. ಹತ್ತು ವರ್ಷವಾದರೂ ಸರಿ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆ ಈಗಾಗಲೇ ಸಾವಿರಾರು ರೈತರು ಪ್ರಾಣ ಕಳೆದುಕೊಂಡಿದ್ದಾರೆ ಇನ್ನು ಸಾವಿರಾರು ರೈತರ ಹೆಣ ಬಿದ್ದರೂ ಸರಿ ನಾವು ಹಿಂದೆ ಹೋಗಬಾರದು ಎಂಎಸ್‌ಪಿ ಖಾತ್ರಿ ಕಾನೂನು ಜಾರಿ ಆಗಲೇಬೇಕು  ಎಂಬುದು ನಮ್ಮೆಲ್ಲರ ಶಪತವಾಗಭೇಕು. ಅದಕ್ಕಾಗಿ ನಾವು ದಕ್ಷಿಣ ಭಾರತ ರಾಜ್ಯಗಳ ರೈತರು ನಿಮ್ಮ ಜೊತೆ ನಿಲ್ಲುತ್ತೇವೆ. ಎಂದರು ತಮಿಳುನಾಡಿನ ಪಿಆರ್ ಪಾಂಡನ್. ಉತ್ತರ ಪ್ರದೇಶದ ಹರಪಾಲ್ ಬಿಲಾರಿ. ಹರಿಯಾಣದ ಅಭಿಮನ್ಯು ಕೂಹರ್.  ಹರಿಯಾಣದ ಲಕ್ವಿನ್ ದರರ್ಸಿಂಗ್  ಪಂಜಾಬ ಶುಖಜೀತ್ ಸಿಂಗ್. ಬಿಹಾರ್ ಅರುಣ್ ಸಿನ್ನ ಮಾತನಾಡಿದರು 
ಜಗಜಿತ್ ಸಿಂಗ್ ದಲೆವಾಲ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾವೇಶದ ರೈತರಿಗೆ ಸಂದೇಶ ಕಳಿಸಿದರು

Publisher: ಕನ್ನಡ ನಾಡು | Kannada Naadu

Login to Give your comment
Powered by