ಬೆಂಗಳೂರು : ಕೆ.ಎಸ್.ಆರ್.ಪಿ ಅಂತರ್- ಪಡೆಗಳ ಕರ್ತವ್ಯ ಕೂಟ-2024ನ್ನು ಜನವರಿ 2025ರಂದು ಆಯೋಜಿಸಲಾಗಿದ್ದು, 2024ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪಡೆಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಈ ಮಹತ್ವಪೂರ್ಣ ಸಮಾರಂಭದಲ್ಲಿ ಕೆ.ಎಸ್.ಆರ್.ಪಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ (ಎಡಿಜಿಪಿ) ಉಮೇಶ್ ಕುಮಾರ್, ಕೆಎಸ್‍ಆರ್‍ಪಿ ಆರಕ್ಷಕ ಪೆÇಲೀಸ್ ಮಹಾನಿರೀಕ್ಷಕರಾದ (ಐಜಿಪಿ) ಸಂದಿಪ್ ಪಾಟೀಲ, ಅವರ ಉಪಸ್ಥಿತಿಯಲ್ಲಿ ಸದರಿಯವರು 2024ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಎಲ್ಲಾ 14 ಕೆ.ಎಸ್.ಆರ್.ಪಿ / ಐ.ಆರ್.ಬಿ (ಇಂಡಿಯಾ ರಿಸರ್ವ್ ಬೆಟಾಲಿಯನ್) ಪಡೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಪರಿಶೀಲನೆಯಲ್ಲಿ ಹಲವಾರು ಪ್ರಮುಖ ಕಾರ್ಯಕ್ಷಮತೆ ಮಾನದಂಡಗಳನ್ನು ಅವಲೋಕಿಸಿ, ಸಂಪತ್ತು ನಿರ್ವಹಣೆ – ಐ.ಆರ್.ಬಿ ವಿಜಯಪುರ, ವಾಹನಗಳ ನಿರ್ವಹಣೆ -7ನೇ ಪಡೆ, ಮಂಗಳೂರು, ಆಡಳಿತ – 1ನೇ ಪಡೆ, ಬೆಂಗಳೂರು, ಆರೋಗ್ಯ ಮತ್ತು ದೇಹದಾಢ್ರ್ಯತೆ - 8ನೇ ಪಡೆ ಶಿವಮೊಗ್ಗ, ತರಬೇತಿ ಮತ್ತು ಕಲ್ಯಾಣ ಉಪಕ್ರಮಗಳು- 12ನೇ ಪಡೆ ತೂಮಕೂರು ಪಡೆಗಳ ವಿವಿಧ ವಿಭಾಗಗಳಲ್ಲಿನ ಸಾಧನೆಗಳನ್ನು ಗುರುತಿಸಿದರು.
ಎಲ್ಲಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಫಲಿತಾಂಶವನ್ನು ಸಾಧಿಸಿದ "ಒಟ್ಟಾರೆ ಅತ್ಯುತ್ತಮ ಪಡೆ" ಪ್ರಶಸ್ತಿಯನ್ನು 2ನೇ ಪಡೆ, ಬೆಳಗಾವಿ ಗೆ ನೀಡಲಾಯಿತು.
ಇದರೊಂದಿಗೆ, ಸದರಿ ಕರ್ತವ್ಯ ಕೂಟದಲ್ಲಿ ವಿಶೇಷ ಸ್ಪರ್ಧೆಗಳು ಆಯೋಜಿಸಲಾಯಿತು. ಇದರಿಂದ ಕೆ.ಎಸ್.ಆರ್.ಪಿ ಸಿಬ್ಬಂದಿಯ ಶಿಸ್ತು ಮತ್ತು ಕೌಶಲ್ಯವನ್ನು ಪ್ರದರ್ಶಿಸಲು ಒಂದು ಅದ್ಭುತ ಅವಕಾಶವನ್ನು ನೀಡಿದಂತಾಯಿತು. ಈ ಸ್ಪರ್ಧೆಗಳ ವಿಜೇತರು, ಶಸ್ತ್ರ ಸಹಿತ ಕವಾಯತು - 12ನೇ ಪಡೆ ತೂಮಕೂರು, ಶಸ್ತ್ರ ರಹಿತ ಕವಾಯತು – 9ನೇ ಪಡೆ ಬೆಂಗಳೂರು, ಲಾಠಿ ಕವಾಯತು - 2ನೇ ಪಡೆ ಬೆಳಗಾವಿ, ಆಬ್ಸ್ಟೆಕಲ್ (ಅಡೆ-ತಡೆ) ರೇಸ್ - 9ನೇ ಪಡೆ ಬೆಂಗಳೂರು, ವಾದ್ಯವೃಂದ ಪ್ರದರ್ಶನ – 5ನೇ ಪಡೆ ಮೈಸೂರು, ಬಿಗ್ಯೂಲರ್ ಪ್ರದರ್ಶನ - 9ನೇ ಪಡೆ ಬೆಂಗಳೂರು, ಒಂದು ನಿಮಿಷ ಡ್ರಿಲ್ – 3ನೇ ಪಡೆ ಬೆಂಗಳೂರು ಇವರು ವಿಜೇತರಾದರು.
ಅಂತರ್ ಪಡೆಗಳ ಕ್ರೀಡಾಕೂಟ-2024, ಕೆ.ಎಸ್.ಆರ್.ಪಿ ಪಡೆಗಳ ಶಿಸ್ತು, ಶ್ರೇಷ್ಠತೆ ಮತ್ತು ಸಮರ್ಪಣೆಯನ್ನು ಪ್ರದರ್ಶಿಸುವ ಅದ್ಭುತ ವೇದಿಕೆಯಾಗಿ ಕಾರ್ಯನಿರ್ವಹಿಸಿತು. ಪ್ರಶಸ್ತಿಗಳು, ಸಿಬ್ಬಂದಿಯ ಶ್ರಮ, ನಾಯಕತ್ವ ಮತ್ತು ಕರ್ತವ್ಯದಲ್ಲಿನ ನಿಷ್ಟೆ ಮತ್ತು ಗೌರವವನ್ನು ಸೂಚಿಸುತ್ತವೆ.
ಎಡಿಜಿಪಿ ಉಮೇಶ್ ಕುಮಾರ್ ಮತ್ತು ಐಜಿಪಿ ಸಂದೀಪ್ ಪಾಟೀಲ್ ಅವರು ಸದರಿ ಕವಾಯತಿನಲ್ಲಿ ಭಾಗವಹಿಸಿದ ಮತ್ತು ಪ್ರಶಸ್ತಿ ವಿಜೇತ ಅಧಿಕಾರಿ/ಸಿಬ್ಬಂದಿಗಳನ್ನು ಅಭಿನಂದಿಸಿ, ಕರ್ನಾಟಕದ ಜನತೆಗೆ ಸೇವೆ ಸಲ್ಲಿಸುವಲ್ಲಿ ಶಿಸ್ತು ಮತ್ತು ಕಾರ್ಯನಿರ್ವಹಣೆಯ ಉನ್ನತ ಮಟ್ಟವನ್ನು ಕಾಪಾಡುವ ಮಹತ್ವವನ್ನು ಮತ್ತೊಮ್ಮೆ ಒತ್ತಿ ಹೇಳಿದರು. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಸದಾ ಶ್ರೇಷ್ಠತೆಗೆ ಬದ್ಧವಾಗಿದೆ, ಹಾಗೂ ತರಬೇತಿ, ಕಲ್ಯಾಣ ಮತ್ತು ಕಾರ್ಯನಿರ್ವಹಣಾ ಸಾಮಥ್ರ್ಯಗಳನ್ನು ನಿರಂತರವಾಗಿ ಸುಧಾರಣೆಯಾಗಿ ಆಧುನಿಕ ಪೊಲೀಸ್ ವ್ಯವಸ್ಥೆಗೆ ಹೊಂದಿಕೊಳ್ಳಲು ಸೈದ್ಧಾಂತಿಕವಾಗಿ ತಯಾರಾಗಲು ತನ್ನ ಸಿದ್ಧತೆಯನ್ನು ಹೆಚ್ಚಿಸಿಕೊಂಡಿದೆ ಎಂದರು.
ಕರ್ತವ್ಯ ಕೂಟದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು, ನಿವೃತ್ತ ಅಧಿಕಾರಿಗಳು ಹಾಗೂ ಎಲ್ಲಾ ಪಡೆಗಳ ಕಮಾಂಡೆಂಟ್‍ಗಳು ಮತ್ತಿತರರು ಉಪಸ್ಥಿತರಿದ್ದರು.
Publisher: ಕನ್ನಡ ನಾಡು | Kannada Naadu