ಕನ್ನಡ ನಾಡು | Kannada Naadu

ಸಿದ್ದೇಶ್ವರಪ್ಪ ಜಿ.ಬಿ. ಅವರಿಗೆ ಅತ್ಯುತ್ತಮ ಕ್ಷೇತ್ರಪ್ರಚಾರಾಧಿಕಾರಿ ಪ್ರಶಸ್ತಿ

04 Feb, 2025

 


ಬೆಂಗಳೂರು : ನವದೆಹಲಿಯ ಕೌನ್ಸಿಲ್ ಫಾರ್ ಮೀಡಿಯಾ ಆ್ಯಂಡ್ ಸ್ಯಾಟಲೈಟ್ ಬ್ರಾಡ್‌ಕಾಸ್ಟಿಂಗ್ (ಸಿಎಂಎಸ್‌ಬಿ) ಸಂಸ್ಥೆಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕರಾದ ಸಿದ್ದೇಶ್ವರಪ್ಪ ಜಿ.ಬಿ.ಅವರಿಗೆ ಅತ್ಯುತ್ತಮ ಕ್ಷೇತ್ರ ಪ್ರಚಾರಾಧಿಕಾರಿ ಪ್ರಶಸ್ತಿ ನೀಡಿ ಗೌರವಿಸಿದೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಕುರಿತು ಮೈಸೂರು ದಸರಾ ,ಕೃಷಿ ಮೇಳ,ಉತ್ಸವಗಳಲ್ಲಿ ವಸ್ತು ಪ್ರದರ್ಶನ,ಬೀದಿನಾಟಕ,ಜನಪದ ಸಂಗೀತ ಮೂಲಕ ಜನಜಾಗೃತಿ ,ಸಾಂಸ್ಕೃತಿಕ ನಾಯಕ ಬಸವಣ್ಣ  , ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ 1924 ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ 'ಗಾಂಧಿ ಭಾರತ' ಕಾರ್ಯಕ್ರಮ
ಆಯೋಜನೆ ಸೇರಿದಂತೆ ಕ್ಷೇತ್ರ ಪ್ರಚಾರ ಚಟುವಟಿಕೆಗಳ ಯಶಸ್ವಿ ಆಯೋಜನೆ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

ಬೆಂಗಳೂರಿನ ಎಫ್‌ಕೆಸಿಸಿಐ  ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ,ಸಂಸ್ಥೆಯ ಅಧ್ಯಕ್ಷ ಡಾ.ಬಿ.ಕೆ.ಬಂಗಾರಿ ಮತ್ತಿತರರು ಪ್ರಶಸ್ತಿ ಪ್ರದಾನ ಮಾಡಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by