ಕನ್ನಡ ನಾಡು | Kannada Naadu

ಹಿರಿಯ ಸಾಹಿತಿ ಜಿ ಕೃಷ್ಣಪ್ಪ ನಿಧನಕ್ಕೆ ಸಚಿವ ಶಿವರಾಜ ತಂಗಡಗಿ ಶೋಕ.

28 Jan, 2025


 ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ, ಸಂಶೋಧಕ ಜಿ ಕೃಷ್ಣಪ್ಪ ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಹಾಗೂ ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಶೋಕ ವ್ಯಕ್ತಪಡಿಸಿದ್ದಾರೆ.
ಬೇಂದ್ರೆ ಕೃಷ್ಣಪ್ಪ ಎಂದೆ ಚಿರಪರಿಚಿತರಾಗಿದ್ದ ಜಿ ಕೃಷ್ಣಪ್ಪ ದ. ರಾ ಬೇಂದ್ರೆ ಅವರ ಗಾಢ ಪ್ರಭಾವಕ್ಕೆ ಒಳಗಾಗಿದ್ದವರು.ಅವರ ಸಾಹಿತ್ಯ ಅಧ್ಯಯನವೇ ಕೃಷ್ಣಪ್ಪ ಅವರ ಜೀವನದ ಬಹುಮುಖ್ಯ ಅಧ್ಯಾಯವಾಗಿತ್ತು. ಮಕ್ಕಳ ಸಾಹಿತ್ಯ, ವಿಮರ್ಶೆ, ಬೇಂದ್ರೆ ಕೃತಿಗಳ ವಿವಿಧ ಆಯಾಮಗಳ ಕೃತಿ ರಚನೆ ಹೀಗೆ ಜಿ ಕೃಷ್ಣಪ್ಪ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಕೊಡುಗೆಗಳ ಮೂಲಕ ಹೆಸರಾಗಿದ್ದವರು. ರಾಜ್ಯಾದ್ಯಂತ ಶಾಲಾ ,ಕಾಲೇಜುಗಳಲ್ಲಿ  ಬೇಂದ್ರೆ ಕಾವ್ಯ ಗಾಯನ ಸ್ಪರ್ಧೆ ಏರ್ಪಡಿಸಿ ಬಹುಮಾನ ನೀಡುತ್ತಾ ಬೇಂದ್ರೆ ಕಾವ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಒಲವು ಮೂಡಿಸುವಲ್ಲಿ ಮುಖ್ಯ ಪಾತ್ರವಹಿಸಿದ್ದರು.
ಕನ್ನಡ ಪುಸ್ತಕ ಪ್ರಾಧಿಕಾರದ ಜಿ ಪಿ ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಹಾಗೂ ಹಂಪಿ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದ ಜಿ ಕೃಷ್ಣಪ್ಪ ನವರ ನಿಧನ ಸಾಹಿತ್ಯ ಲೋಕಕ್ಕೆ ದೊಡ್ಡ ನಷ್ಟ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by