ಬೆಂಗಳೂರು: ತುಮಕೂರಿನಲ್ಲಿ ನಡೆದ 39ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ವಿದೇಶದ ಪತ್ರಕರ್ತರಾಗಿ ಆಹ್ವಾನಿತರಾಗಿದ್ದ ಶ್ರೀಲಂಕಾದ ನಿಶಾಂತ ಅಲ್ವೀಸ್ ಮತ್ತು ಮರ್ಷದ್ ಬೇರಿ ಅವರು ವಿಧಾನಸೌಧಕ್ಕೆ ಭೇಟಿ ನೀಡಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಕೆಂಗಲ್ ಹನುಮಂತಯ್ಯ ಅವರು ನಿರ್ಮಾಣ ಮಾಡಿದ ಕಲ್ಲಿನ ಕಟ್ಟಡದ ವಿಧಾನಸೌಧದ ಮಾಹಿತಿ ತಿಳಿದು ಅವರು ಅಚ್ಚರಿ ವ್ಯಕ್ತಪಡಿಸಿದ್ದಲ್ಲದೆ, ಕುತೂಹಲದಿಂದ ವಿಧಾನಸೌಧ ವೀಕ್ಷಿಸಿದರು. ಮಹಾತ್ಮಾಗಾಂದಿ ಪ್ರತಿಮೆಯ ಬಳಿ ನಿಂತು ರಾಷ್ಟ್ರಪಿತನಿಗೆ ನಮನ ಸಲ್ಲಿಸಿದರು. ಶ್ರೀಲಂಕಾ ಸಂಸತ್ತಿನ ಬಗ್ಗೆಯೂ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಖಜಾಂಚಿ ವಾಸುದೇವ ಹೊಳ್ಳ, ಮಾಜಿ ಶಾಸಕಿ ವಿನೀಶ ನಿರೊ ಜೊತೆಗಿದ್ದರು.
ವಿಧಾನ ಪರಿಷತ್ ಸಭಾಪತಿಗಳ ವಿಶೇಷಾಧಿಕಾರಿ ಕೆ.ಡಿ.ಶೈಲಾ, ವಿಶೇಷ ಕರ್ತವ್ಯಧಿಕಾರಿ ಮಹೇಶ್ ವಾಳ್ವೇಕರ್, ವಿಧಾನಸಭೆಯ ಮಾರ್ಗದರ್ಶಕರಾದ ಜ್ಞಾನಶೇಖರ್ ಅವರು ಮಾಹಿತಿ ನೀಡಿ, ಶುಭ ಹಾರೈಸಿದರು.
Publisher: ಕನ್ನಡ ನಾಡು | Kannada Naadu