ಬೆಂಗಳೂರು, : ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಶಾಸನಬದ್ಧ ಸಂಸ್ಥೆಯಾಗಿದೆ. ಪತ್ರಿಕಾ ಸ್ವಾತಂತ್ರ್ಯವನ್ನು ಸಂರಕ್ಷಿಸುವ ಮತ್ತು ನಿರ್ವಹಿಸುವ ಸಂಬಂಧ ಪ್ರೆಸ್ ಕೌನ್ಸಿಲ್ ಆಕ್ಟ್ 1978 ರ ಅಡಿಯಲ್ಲಿ ಈ ಸಂಸ್ಥೆಯನ್ನು ನವದೆಹಲಿಯ ಲೋಧಿ ರಸ್ತೆಯ ಸಿಜಿಒ ಸಂಕೀರ್ಣದ ಸೂಚನಾ ಭವನದಲ್ಲಿ ಸ್ಥಾಪಿಸಲಾಗಿದೆ. ಇದು ಯಾವುದೇ ರಾಜ್ಯ ಶಾಖೆಯನ್ನು ಹೊಂದಿಲ್ಲ ಮತ್ತು ಅದರ ಪರವಾಗಿ ಕಾರ್ಯ ನಿರ್ವಹಿಸಲು ಇತರೆ ಯಾವುದೇ ಸಂಸ್ಥೆಯನ್ನು ಅಧಿಕೃತಗೊಳಿಸಿರುವುದಿಲ್ಲ ಅಥವಾ ರಚಿಸಿರುವುದಿಲ್ಲ.
ಇತರ ಪತ್ರಿಕಾ ಸಂಸ್ಥೆಗಳಿಂದ “ಪ್ರೆಸ್ ಕೌನ್ಸಿಲ್” ಪದವನ್ನು ಬಳಸಿಕೊಂಡಿರುವ ನಿದರ್ಶನಗಳಿದ್ದು, ಇದು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಸಾಂಸ್ಥಿಕ ಮೌಲ್ಯವವನ್ನು ಕಳೆದುಕೊಂಡಿರುವುದು ಮಾತ್ರವಲ್ಲದೇ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ವಿಶಿಷ್ಟ ಡೊಮೇನ್ ಮತ್ತು ಶೀರ್ಷಿಕೆಯನ್ನು ಉಲ್ಲಂಘಿಸಿದಂತಾಗುವುದು.
"ಪ್ರೆಸ್ ಕೌನ್ಸಿಲ್" ಅಥವಾ ಅದರ ಹಿಂದಿ ಸಮಾನವಾದ ‘ಭಾರತೀಯ ಪ್ರೆಸ್ ಪರಿಷತ್’ ಅನ್ನು ಬಳಸಿಕೊಂಡು ಯಾವುದೇ ಸ್ಥಳೀಯ ಅಥವಾ ಸರ್ಕಾರಿ ಸಂಘ/ಸಂಸ್ಥೆಯ ನೋಂದಣಿಯನ್ನು ನಿμÉೀಧಿಸಲು/ ಸರಿಪಡಿಸಲು ಅಗತ್ಯ ಸಲಹೆಯನ್ನು ಮಾತ್ರ ನೀಡಬಹುದಾಗಿದೆ.
ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ, ‘ಪ್ರೆಸ್ ಕೌನ್ಸಿಲ್’ ಪದ, ಚಿಹ್ನೆ, ಲಾಂಛನವನ್ನು ಬೇರೆ ಯಾವುದೇ ಸಂಸ್ಥೆ ಬಳಕೆ ಮಾಡುವುದು ಅನುಚಿತ ಬಳಕೆಯ ತಡೆಗಟ್ಟುವಿಕೆ ಕಾಯ್ದೆ (is in violation of the section 3 read with entry 7(ii)of the Emblem and Names (prevention of improper Use)Act, 1950 ರ ಪ್ರಕಾರ ಉಲ್ಲಂಘನೆಯಾಗುತ್ತದೆ ಎಂದು ಕಾನೂನು ವ್ಯವಹಾರಗಳ ಇಲಾಖೆ ತಿಳಿಸಿದೆ.
Publisher: ಕನ್ನಡ ನಾಡು | Kannada Naadu