ಕನ್ನಡ ನಾಡು | Kannada Naadu

ಜನವರಿ 11 ಮತ್ತು 12ರಂದು ಶ್ರೀ ಚಂಡಿಕಾ ಹೋಮ ಮತ್ತು ಶ್ರೀಚಕ್ರ ನವಾವರಣ ಪೂಜೆ

09 Jan, 2025

ಸದ್ಗುರು ಶ್ರೀ ಶ್ರೀ ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸ ಭಕ್ತಮಂಡಳಿಯಿಂದ
ಜನವರಿ 11 ಮತ್ತು 12ರ ಶನಿವಾರ ಮತ್ತು ಭಾನುವಾರ
ಶ್ರೀ ಚಂಡಿಕಾ ಹೋಮ ಮತ್ತು ಶ್ರೀಚಕ್ರ ನವಾವರಣ ಪೂಜೆ

ಬೆಂಗಳೂರು: ಮಹಾ ಅವಧೂತರಾದ ಶ್ರೀ ಶ್ರೀ ಶಂಕರಲಿಂಗ ಭಗವಾನರ ಪ್ರೇರಣೆಯಂತೆ ಶ್ರೀದೇವಿಯ ಕೋಟಿ ಶ್ರೀ ಲಲಿತಾ ಸಹಸ್ತ್ರ ನಾಮ ಕುಂಕುಮಾರ್ಚನೆಯನ್ನು ಮಾಡಲು ಸಂಕಲ್ಪಿಸಿ ಅದರಂತೆ ಆಸಕ್ತ ಸುಹಾಸಿನಿಯರಿಗೆ ಶ್ರೀ ಲಕ್ಷ್ಮಿವಿಗ್ರಹ ಮತ್ತು ಸಂಕಲ್ಪಿತ ಕುಂಕುಮವನ್ನು ನೀಡಲಾಗಿತ್ತು. ಶ್ರೀ ಗುರುಗಳ ಆಶೀರ್ವಾದದಿಂದ ಕೋಟಿ ಕುಂಕುಮಾರ್ಚನೆಯ ಕಾರ್ಯ ಯಶಸ್ವಿಯಾಗಿ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಜನವರಿ 11 ಮತ್ತು 12ರ ಶನಿವಾರ ಮತ್ತು ಭಾನುವಾರ  ತ್ಯಾಗರಾಜ ನಗರದಲ್ಲಿರುವ ಶ್ರೀ ದತ್ತಾತ್ರೇಯ ದೇವಸ್ಥಾನದ ಶ್ರೀ ಪಾದ ವಲ್ಲಭ ಮಂದಿರದಲ್ಲಿ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿದೆ. 

ಜನವರಿ,11ನೆಯ ತಾರೀಖಿನ ಶನಿವಾರ,  ಕಳಶಸ್ಥಾಪನೆ, ರುದ್ರಾಭಿಷೇಕ, ಸಹಸ್ತ್ರ ನಾಮಾರ್ಚನೆ ಮತ್ತು ಶ್ರೀ ಸಪ್ತಶತಿ ಪಾರಾಯಣವು ಏರ್ಪಾಟಾಗಿದ್ದು ಶ್ರೀ ಲಲಿತಾ ಸಹಸ್ತ್ರನಾಮ ಲಕ್ಷ ಕುಂಕುಮಾರ್ಚನೆ ಕೂಡ ಇರುತ್ತದೆ. ಅಂದು ಸಂಜೆ ಶೃಂಗೇರಿಯ ವೇ/ಬ್ರ/ಶ್ರೀ ಎಂ.ವಿ.ಶಂಕರ ಭಟ್ ಘನಪಾಠಿಗಳು ‘ಶ್ರೀಚಕ್ರ ನವಾವರಣ ಪೂಜೆ’ಯ ಕುರಿತು ವಿಶೇಷ ಉಪನ್ಯಾಸ ನೀಡುತ್ತಾರೆ. 

ಜನವರಿ 12ನೆಯ ತಾರೀಖಿನ ಭಾನುವಾರ, ಶ್ರೀ ಗುರುಗಳ ಪಾದುಕೆಗೆ ರುದ್ರಾಭಿಷೇಕ ಮತ್ತು ಶ್ರೀ ನವಚಂಡಿಕಾ ಹೋಮ ಇರುತ್ತದೆ. ಕೋಟಿ ಕುಂಕುಮಾರ್ಚನೆಯಲ್ಲಿ ಭಾಗವಹಿಸಿದವರು ಇದೇ ಸಂದರ್ಭದಲ್ಲಿ ತಾವು ಪೂಜಿಸಿದ ಕುಂಕುಮವನ್ನು ಸಮರ್ಪಿಸ ಬೇಕು. 
ಆಸಕ್ತರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದ್ಗುರುಗಳ ಮತ್ತು ಶ್ರೀ ಲಲಿತೆಯ ಕೃಪೆಗೆ ಪಾತ್ರರಾಗಲು ವಿನಂತಿಸಲಾಗಿದೆ. ಈ ಕಾರ್ಯಕ್ರಮದ ಕುರಿತು ವರದಿಯನ್ನು ಪ್ರಕಟಿಸಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡ ಬೇಕೆಂದು ಕೋರಿ ಕೊಳ್ಳಲಾಗಿದೆ. 

Publisher: ಕನ್ನಡ ನಾಡು | Kannada Naadu

Login to Give your comment
Powered by