ಉಡುಪಿ:; ನಗರದ ಸಿಟಿ ಬಸ್, ನರ್ಮ್ ಬಸ್ ಹಾಗೂ ಸರ್ವಿಸ್ ಬಸ್ ನಿಲ್ದಾಣದ ಅಕ್ಕಪಕ್ಕದಲ್ಲಿ ಸಂಜೆಯಾಗುತ್ತಲೇ ವಲಸೆ ಕಾರ್ಮಿಕ ಮದ್ಯವಸನಿಗಳ ಆಟೋಪಗಳು ಹೆಚ್ಚಾಗಿದ್ದು, ಸಭ್ಯ ನಾಗರಿಕರು ನಡೆದಾಡದ ಪರಿಸ್ಥಿತಿ ಎದುರಾಗಿದೆ.
ರಾತ್ರಿಯಾದರೆ ಸಾಕು ಕುಡಿದ ಮತ್ತಿನಲ್ಲಿ ಸ್ಥಳೀಯರನ್ನೂ ಬೆದರಿಸಿ, ಭಯದ ವಾತಾವರಣ ಸೃಷ್ಟಿಸಿತ್ತಾರೆ. ಇವರಿಗೆ ಬಸ್ ನಿಲ್ದಾಣವೇ ವಾಸಸ್ಥಾನ ಆಗಿದೆ. ಪ್ರತಿನಿತ್ಯ ಕುಡಿದು ಅಲ್ಲೇ ತೂರಾಡುತ್ತಾ, ಹೊಡದಾಡಿಕೊಂಡು ಇರುತ್ತಾರೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಬಗ್ಗೆ ಪೊಲೀಸ್ ಇಲಾಖೆ, ಸ್ಥಳೀಯಾಡಳಿತ ತಕ್ಷಣ ಕ್ರಮಕೈಗೊಂಡು ಪ್ರಯಾಣಿಕರಿಗೆ ಬಸ್ ನಿಲ್ದಾಣ ಉಪಯೋಗವಾಗುವಂತೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
Publisher: ಕನ್ನಡ ನಾಡು | Kannada Naadu