ಬೆಂಗಳೂರು, ಜನವರಿ 01 (ಕರ್ನಾಟಕ ವಾರ್ತೆ):
ಕರ್ನಾಟಕದಲ್ಲಿ ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್.ಪಿ.ಒ) ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ಸಹಯೋಗದೊಂದಿಗೆ ಸ್ಥಾಪಿತವಾದ ಬೆಂಗಳೂರಿನ ರೈತ ಉತ್ಪಾದಕ ಸಂಸ್ಥೆಗಳ ಉತ್ಕøಷ್ಟ ಕೇಂದ್ರವು ಮಹತ್ವದ ಹೆಜ್ಜೆಯನ್ನು ತೆಗೆದುಕೊಂಡಿದ್ದು ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಸಹ್ಯಾದ್ರಿ ಫಾರ್ಮರ್ಸ್ ಪೆÇ್ರಡ್ಯೂಸರ್ ಕಂಪನಿ ಲಿಮಿಟೆಡ್ ಮತ್ತು ಸಹ್ಯಾದ್ರಿ ಗ್ರಾಮಿಣಾಭಿವೃದ್ಧಿ ಪ್ರತಿμÁ್ಠನದೊಂದಿಗೆ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ. ಸಾಮಥ್ರ್ಯ ನಿರ್ಮಾಣ ಮತ್ತು ಸಂದರ್ಶನ ಪ್ರವಾಸಗಳ ಮೂಲಕ ಎಫ್.ಪಿ.ಒ ಗಳ ಸುಸ್ಥಿರತೆ ಹೆಚ್ಚಿಸುವುದು ಈ ಒಪ್ಪಂದದ ಪ್ರಮುಖ ಗುರಿಯಾಗಿದೆ.
ನಿಯೋಗದ ವಿವರಗಳು:
ಕರ್ನಾಟಕ ಅಧಿಕಾರಿಗಳ ನಿಯೋಗದ ನೇತೃತ್ವವನ್ನು ತೋಟಗಾರಿಕೆ ಮತ್ತು ರೇμÉ್ಮ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಶಮ್ಲಾ ಇಕ್ಬಾಲ್ ಐಎಎಸ್, ರವರು ವಹಿಸಿದ್ದು, ತೋಟಗಾರಿಕೆ ಇಲಾಖೆಯ ನಿರ್ದೇಶಕರಾದ ಶ್ರೀ ಡಿ.ಎಸ್. ರಮೇಶ್, ಐಎಎಸ್, ಜಲಾನಯನ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾದ ಶ್ರೀ ಪರ್ವೇಜ್ ಬಂಥನಾಳ್, ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಡಾ.ಪ್ರಕಾಶ್ ಸೊಬರದ್, ಜಂಟಿ ನಿರ್ದೇಶಕರಾದ ಡಾ.ಎಂ. ವಿಶ್ವನಾಥ್ ಹಾಗೂ ಉಪನಿರ್ದೇಶಕರಾದ ಶ್ರೀಮತಿ. ಕ್ಷಮಾ ಪಾಟೀಲ್, ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರ, ಬೆಂಗಳೂರಿನ ನಿರ್ದೇಶಕರಾದ ಡಾ. ರಾಘವೇಂದ್ರ ಕೆ. ಮೇಸ್ತಾ ಮತ್ತು ಉಪನಿರ್ದೇಶಕರಾದ ಡಾ.ಸದಾನಂದ ಜಿ.ಕೆ, ಜಲಾನಯನ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ. ಪಂಕಜಾ ಎಚ್ ರವರು ಜೊತೆಗೂಡಿದರು.
ಒಪ್ಪಂದದ ಮಹತ್ವ:
ಕರ್ನಾಟಕದ ಎಫ್.ಪಿ.ಒ. ಪರಿಸರದ ವ್ಯವಸ್ಥೆಗಾಗಿ: ಸರಿಸುಮಾರು 1460 ಎಫ್.ಪಿ.ಒಗಳನ್ನು ಹೊಂದಿರುವ ಕರ್ನಾಟಕವು ಸುಸ್ಥಿರ ಎಫ್.ಪಿ.ಒ ಮಾದರಿಯನ್ನು ನಿರ್ಮಿಸುವಲ್ಲಿ ಸಹ್ಯಾದ್ರಿ ಫಾರ್ಮ್‍ಗಳ ಪರಿಣತಿಯಿಂದ ಅಪಾರ ಪ್ರಯೋಜನವನ್ನು ಪಡೆಯುತ್ತದೆ. ಈ ಸಹಯೋಗವು ಆಧುನಿಕ ಕೃಷಿ ಸವಾಲುಗಳನ್ನು ಎದುರಿಸಲು, ಆಡಳಿತವನ್ನು ಸುಧಾರಿಸಲು ಮತ್ತು ದೃಢವಾದ ಮೌಲ್ಯ ಸರಪಳಿಗಳನ್ನು ಅಭಿವೃದ್ಧಿಪಡಿಸಲು ಎಫ್.ಪಿ.ಒ ಗಳಿಗೆ ಅಧಿಕಾರ ನೀಡುತ್ತದೆ.
ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರವು ಎಫ್.ಪಿ.ಓ.ಗಳ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರದಿಂದ 2017 ರಲ್ಲಿ ಭಾರತದಲ್ಲಿ ಮೊದಲ ಕೇಂದ್ರವಾಗಿ ಸ್ಥಾಪಿಸಲಾಯಿತು. ಇದನ್ನು ಅಧಿಕೃತವಾಗಿ ಕರ್ನಾಟಕ ಎಫ್.ಪಿ.ಓ ನೀತಿ, 2018 ರಲ್ಲಿ ಜ್ಞಾನ ಪಾಲುದಾರರಾಗಿ ಗುರುತಿಸಲಾಗಿದೆ. ಈ ಕೇಂದ್ರವು ತರಬೇತಿ, ಮಾರುಕಟ್ಟೆ ಸಂಪರ್ಕಗಳು, ರಾಷ್ಟ್ರೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಎಫ್.ಪಿ.ಒ ಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸುತ್ತಿದೆ.
ಸಹ್ಯಾದ್ರಿಯು ಭಾರತದ ಅತಿದೊಡ್ಡ ಎಫ್‍ಪಿಒ ಆಗಿದ್ದು, ದ್ರಾಕ್ಷಿ, ಕಿತ್ತಳೆ, ದಾಳಿಂಬೆ, ಟೊಮೆಟೊ, ಮಾವು, ಗೋಡಂಬಿ ಮತ್ತು ಬಾಳೆ ಮುಂತಾದ ಪ್ರಮುಖ ತೋಟಗಾರಿಕಾ ಬೆಳೆಗಳ ಕೃಷಿ, ಸಂಸ್ಕರಣೆ ಮತ್ತು ಮಾರುಕಟ್ಟೆಯನ್ನು ಸಂಯೋಜಿಸುವ ಸಮಗ್ರ ಮೌಲ್ಯ ಸರಪಳಿ ಮಾದರಿಗೆ ಹೆಸರುವಾಸಿಯಾಗಿದೆ. ಇದರ ಕಾರ್ಯಾಚರಣೆಗಳು ಸುಸ್ಥಿರತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಉತ್ತೇಜಿಸುವಾಗ ರೈತರಿಗೆ ಹೆಚ್ಚಿನ ಆದಾಯವನ್ನು ಖಚಿತಪಡಿಸುತ್ತದೆ. ಕರ್ನಾಟಕದ ಎಫ್‍ಪಿಒಗಳು ಸಹ್ಯಾದ್ರಿ ಎಫ್.ಪಿ.ಒ ನ ಪರಿಣಾಮಕಾರಿ ಚಟುವಟಿಕೆಗಳಾದ ಕೊಯೋತ್ತರ ನಿರ್ವಹಣೆ ಮತ್ತು ಮೌಲ್ಯವರ್ಧನೆಯಿಂದ ಲಾಭ ಪಡೆಯುತ್ತವೆ.
ಒಪ್ಪಂದದ ಪ್ರಮುಖ ಕೇಂದ್ರೀಕೃತ ಅಂಶಗಳು:
ಈ ಒಪ್ಪಂದವು ಕರ್ನಾಟಕದಲ್ಲಿ ರೈತ ಉತ್ಪಾದಕ ಸಂಸ್ಥೆಗಳ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಸಹಯೋಗದ ಚೌಕಟ್ಟನ್ನು ಸ್ಥಾಪಿಸುತ್ತದೆ ಮತ್ತು ಒಪ್ಪಂದವು ಇದರ ಮೇಲೆ ಕೇಂದ್ರೀಕರಿಸುತ್ತದೆ:
ಸಾಮಥ್ರ್ಯ ಬಲವರ್ಧನೆ ಮತ್ತು ತರಬೇತಿ, ಜ್ಞಾನ ಪಾಲುದಾರಿಕೆ, ಕ್ಷೇತ್ರ ಪ್ರವಾಸ, ಮೌಲ್ಯ ಸರಪಳಿ ಅಭಿವೃದ್ಧಿ, ರಫ್ತು, ಉತ್ತೇಜನ, ಸಾಂಸ್ಥಿಕ ಅಭಿವೃದ್ಧಿ ಮುಂತಾದವುಗಳನ್ನು ಒಳಗೊಂಡಿದೆ.
"ಈ ಒಪ್ಪಂದವು ಕರ್ನಾಟಕದ ಎಫ್.ಪಿ.ಒ ಗಳಿಗೆ ಹೊಸ ಅಧ್ಯಾಯವನ್ನು ಗುರುತಿಸುತ್ತದೆ. ಸಹ್ಯಾದ್ರಿ ಸಂಸ್ಥೆಯ ಯಶಸ್ಸಿನಿಂದ ಸುಸ್ಥಿರ ಮತ್ತು ಲಾಭದಾಯಕ ಉದ್ಯಮಗಳನ್ನು ರಚಿಸಲು ನಮಗೆ ಸಾಧ್ಯವಾಗುತ್ತದೆ, ಇದಲ್ಲದೆ ನಮ್ಮ ರೈತರಿಗೆ ಉತ್ತಮ ಜೀವನೋಪಾಯವನ್ನು ಖಾತರಿಪಡಿಸುತ್ತದೆ” ಎಂದು ಡಾ. ಶಮಾ ಇಕ್ಸಾಲ್, ಐಎಎಸ್, ಕಾರ್ಯದರ್ಶಿ, ತೋಟಗಾರಿಕೆ ಮತ್ತು ರೇμÉ್ಮ ಇಲಾಖೆ, ಕರ್ನಾಟಕ ಸರ್ಕಾರ ರವರು ಅಭಿಪ್ರಾಯ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಈ ಪಾಲುದಾರಿಕೆಯು ಕರ್ನಾಟಕದ ಕೃಷಿ ಸಮುದಾಯಕ್ಕೆ ಒಂದು ಮೈಲುಗಲ್ಲಾಗಿ, ಸುಸ್ಥಿರ ಮತ್ತು ಲಾಭದಾಯಕ ಎಫ್.ಪಿ.ಒ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಪಾಲುದಾರರ ನಡುವೆ ಸಹಯೋಗವನ್ನು ಉತ್ತೇಜಿಸುತ್ತದೆ. ಈ ಒಪ್ಪಂದವು ಆರ್ಥಿಕ ಸಬಲೀಕರಣ ಮತ್ತು ಗ್ರಾಮೀಣ ಅಭಿವೃದ್ಧಿಯನ್ನು ಖಾತ್ರಿಪಡಿಸುವ, ಕೃಷಿ ಕ್ಷೇತ್ರವನ್ನು ಪರಿವರ್ತಿಸುವ ಸಾಮೂಹಿಕ ಪ್ರಯತ್ನವನ್ನು ಸೂಚಿಸುತ್ತದೆ.
Publisher: ಕನ್ನಡ ನಾಡು | Kannada Naadu