ಕನ್ನಡ ನಾಡು | Kannada Naadu

ಗಣರಾಜ್ಯೋತ್ಸವದ ಅಂಗವಾಗಿ ಫಲಪುಷ್ಪ ಪ್ರದರ್ಶನಕ್ಕೆ ಅರ್ಜಿ ಆಹ್ವಾನ

02 Jan, 2025

 

 

ಬೆಂಗಳೂರು : ತೋಟಗಾರಿಕೆ ಇಲಾಖೆ ವತಿಯಿಂದ 2025ನೇ ಜನವರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ 217ನೇ ಫಲಪುಷ್ಪ ಪ್ರದರ್ಶನವನ್ನು ಬೆಂಗಳೂರಿನ ಲಾಲ್‍ಬಾಗ್‍ನಲ್ಲಿ ಹಮ್ಮಿಕೊಳ್ಳಲಾಗಿದೆ.

ಪ್ರದರ್ಶನದ ಪ್ರಯುಕ್ತ ಸರ್ಕಾರಿ/ ಖಾಸಗಿ ಅಲಂಕಾರಿಕ ತೋಟಗಾರಿಕಾ ಆಸಕ್ತರು ತಮ್ಮ ಮನೆ, ಕಚೇರಿ ಅಥವಾ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಲಂಕಾರಿಕ ತೋಟಗಳು, ತಾರಸಿ/ ಕೈತೋಟಗಳು, ತರಕಾರಿ/ ಔಷಧಿ ಗಿಡಗಳು, ಕುಂಡಗಳಲ್ಲಿ ಬೆಳೆದ ವಿವಿಧ ಜಾತಿಯ ಗಿಡಗಳು, ಇಕೆಬಾನ, ಜಾನೂರ್, ಥಾಯ್ ಆರ್ಟ್ ಮತ್ತು ಪೂರಕ ಕಲೆಗಳಿಗೆ ಸಂಬಂಧಿಸಿದಂತೆ ಸ್ಪರ್ಧೆಗಳನ್ನು 2025 ರ ಜನವರಿ 18 ರಂದು ಹಮ್ಮಿಕೊಳ್ಳಲಾಗಿದೆ.
ಇಕೆಬಾನ, ಜಾನೂರ್, ಥಾಯ್ ಆರ್ಟ್, ತರಕಾರಿ ಕೆತ್ತನೆ ಮತ್ತು ಇತರೆ ಪೂರಕ ಕಲೆಗಳಿಗೆ ಸಂಬಂಧಿಸಿದಂತೆ ಆಸಕ್ತರು / ಪ್ರದರ್ಶಕರಿಂದ ಅರ್ಜಿಗಳನ್ನು 2025 ಜನವರಿ 6 ರಿಂದ 10 ರವರೆಗೆ ಸ್ವೀಕರಿಸಲಾಗುವುದು. ತೋಟಗಾರಿಕಾ ಜಂಟಿ ನಿರ್ದೇಶಕರು (ಯೋಜನೆ) ಲಾಲ್‍ಬಾಗ್, ಬೆಂಗಳೂರು ಕಚೇರಿಯಲ್ಲಿ ಅರ್ಜಿಗಳನ್ನು ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಅರ್ಜಿಗಳನ್ನು ಪಡೆಯಬಹುದಾಗಿದೆ.
 
ಹೆಚ್ಚಿನ ಮಾಹಿತಿಗಾಗಿ ಹೆಚ್.ಟಿ.ಗೀತಾ ಮೊಬೈಲ್ ಸಂಖ್ಯೆ: 9008433076 ಅಥವಾ ಕುಮಾರಿ ತಾರಕೇಶ್ವರಿ ಕೆ.ಆರ್. ಮೊಬೈಲ್ ಸಂಖ್ಯೆ: 8497048733,  ಪುಷ್ಪಲತಾ ಎಂ. ಮೊಬೈಲ್ ಸಂಖ್ಯೆ: 8904592122 ಇವರನ್ನು ಸಂಪರ್ಕಿಸುವುದು.

ವಿವಿಧ ಅಲಂಕಾರಿಕ ತೋಟಗಳ ಸ್ಪರ್ಧೆ / ಕುಂಡಗಳಲ್ಲಿ ಬೆಳೆದ ಗಿಡಗಳ ಸ್ಪರ್ಧೆಗೆ ಅರ್ಜಿಗಳನ್ನು ಜನವರಿ 8 ರಿಂದ 15 ರವರೆಗೆ ಸ್ವೀಕರಿಸಲಾಗುವುದು. ಅರ್ಜಿಗಳನ್ನು ತೋಟಗಾರಿಕಾ ಜಂಟಿ ನಿರ್ದೇಶಕರು (ತೋಟದ ಬೆಳೆಗಳು) ಲಾಲ್‍ಬಾಗ್, ಬೆಂಗಳೂರು ಕಚೇರಿಯಲ್ಲಿ ಅರ್ಜಿಗಳನ್ನು ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಚುಂಚಯ್ಯ  ಮೊಬೈಲ್ ಸಂಖ್ಯೆ: 9916433061, ಎನ್.ಟಿ.ಸುಜಾತ ಮೊಬೈಲ್ ಸಂಖ್ಯೆ: 9901296270, ದೀಪಿಕ ಎಸ್.ಕೆ.  ಮೊಬೈಲ್ ಸಂಖ್ಯೆ: 7892100304 ಇವರನ್ನು ಸಂಪರ್ಕಿಸುವುದು.

ಮಳಿಗೆಗಳ ಹಂಚಿಕೆಗಾಗಿ 2024 ನೇ ಡಿಸೆಂಬರ್ 30 ರಿಂದ 2025 ನೇ ಜನವರಿ 4 ರವರೆಗೆ ಸ್ವೀಕರಿಸಲಾಗುವುದು. ಅರ್ಜಿಗಳನ್ನು ತೋಟಗಾರಿಕಾ ಜಂಟಿ ನಿರ್ದೇಶಕರು (ಹಣ್ಣುಗಳು) ಲಾಲ್‍ಬಾಗ್, ಬೆಂಗಳೂರು ಕಚೇರಿಯಲ್ಲಿ ಅರ್ಜಿಗಳನ್ನು ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಪಡೆಯಬಹುದಾಗಿದೆ.
 
ಹೆಚ್ಚಿನ ಮಾಹಿತಿಗಾಗಿ ಶೃತಿ ಟಿ. ನಾಯ್ಕ್ ಮೊಬೈಲ್ ಸಂಖ್ಯೆ: 9036986445, ವಿಶಾಲಾಕ್ಷಿ ಮೊಬೈಲ್ ಸಂಖ್ಯೆ: 9591304675, ಉಮಾ ಮೊಬೈಲ್ ಸಂಖ್ಯೆ: 9008094261 ಇವರನ್ನು ಸಂಪರ್ಕಿಸುವಂತೆ ಲಾಲ್‍ಬಾಗ್ ಸಸ್ಯತೋಟದ ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by