ಕನ್ನಡ ನಾಡು | Kannada Naadu

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ರವರ ನಿಧನಕ್ಕೆ - ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ತೀವ್ರ ಸಂತಾಪ

27 Dec, 2024

 

ಬೆಂಗಳೂರು : ಸರಳ ಸಜ್ಜನಿಕೆ ರಾಜಕಾರಣಿ ಮಾಜಿ ಪ್ರಧಾನ ಮಂತ್ರಿ ಡಾ.ಮನಮೋಹನ್ ಸಿಂಗ್. ಪಿ.ವಿ.ನರಸಿಂಹರಾವ್ ರವರು ಪ್ರಧಾನಿಯಾಗಿದ್ದಾಗ ಅವರು ಹಣಕಾಸು ಸಚಿವರಾಗಿ ಈ ದೇಶವನ್ನು ತನ್ನದೆ ಆದ ಶೈಲಿಯಲ್ಲಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುದ ಮಹಾನ್ ವ್ಯಕ್ತಿ.

ವಿಶ್ವದ ಅತ್ಯುತ್ತಮ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾದ ಡಾ. ಮನಮೋಹನ್ ಸಿಂಗ್ ಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್ ಆಗಿ, ಹಣಕಾಸು ಇಲಾಖೆ ಕಾರ್ಯದರ್ಶಿಯಾಗಿ, ಪ್ರಧಾನ ಮಂತ್ರಿಗಳ ಸಲಹೆಗಾರರಾಗಿ ಕಾರ್ಯನಿರ್ವಹಿಸುವುದರ ಮೂಲಕ ಭಾರತದ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸಿದವರು. ಈ ದೇಶದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ದೇಶ ಆರ್ಥಿಕವಾಗಿ ದೊಡ್ಡ ಮಟ್ಟದಲ್ಲಿ ಬೆಳೆಯಲು ಮನಮೋಹನ್ ಸಿಂಗ್ ಭದ್ರ ಬುನಾದಿ ಹಾಕಿದ್ದರು.
 
ನಾನು ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಭೇಟಿ ಮಾಡಿ ಸಲಹೆಗಳನ್ನು ಪಡೆಯುತ್ತಿದ್ದೆ. ಅಲ್ಲದೇ ನಾನು ಪ್ರಧಾನ ಮಂತ್ರಿಯಾದಗಲೂ ಸಹ ಅವರನ್ನು ಭೇಟಿ ಮಾಡಿ ಸಲಹೆಗಳನ್ನು ಪಡೆಯುತ್ತಿದ್ದೆ. ಅವರು ಈ ದೇಶಕ್ಕೆ ಕೊಟ್ಟ ಯೋಜನೆಗಳು ಈಗಲೂ ಅವಿಸ್ಮರಣೀಯವಾಗಿದೆ.

90 ರ ದಶಕದಲ್ಲಿ ಉದಾರಿಕರಣ ಮತ್ತು ಜಾಗತೀಕರಣದ ವ್ಯಾಪ್ತಿಯಲ್ಲಿ ಭಾರತದ ಆರ್ಥಿಕ ವ್ಯವಸ್ಥೆಯನ್ನು ಹೊಸ ದಿಕ್ಕಿಗೆ ತಂದಂತಹ ಅಪ್ರತಿಮ ಮೇಧಾವಿ. ಸರಳ ಸಜ್ಜನಿಕೆಯ ಪ್ರತೀಕವಾಗಿದ್ದ ಡಾಕ್ಟರ್ ಮನಮೋಹನ್ ಸಿಂಗ್ ಅವರ ನಿಧನದಿಂದ ದುಃಖ ತಪ್ತರಾಗಿರುವ ಅವರ ಕುಟುಂಬಕ್ಕೆ ಭಗವಂತನು ಶಾಂತಿ, ನೆಮ್ಮದಿ ಹಾಗೂ ದುಃಖವನ್ನು ಸಂತೈಸುವ ಶಕ್ತಿ ನೀಡಲೆಂದು ದೇಶದ ಜನತೆಯ ಪರವಾಗಿ ಪ್ರಾರ್ಥಿಸುತ್ತೇನೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by