ಕನ್ನಡ ನಾಡು | Kannada Naadu

ಮಕರ ಸಂಕ್ರಾತಿಯ ನಿಮಿತ್ತ ರಾಜ್ಯಮಟ್ಟದ ಕವಿಗೋಷ್ಠಿಗೆ ಕವನಗಳ ಆಹ್ವಾನ

27 Dec, 2024

 

ಬೆಂಗಳೂರು: ಮಣೂರ ಪ್ರಕಾಶನ ಕಲಬುರಗಿ ಇವರ ವತಿಯಿಂದ ಮಕರ ಸಂಕ್ರಾ೦ತಿ  ನಿಮಿತ್ತ ಚೆನ್ನಮ್ಮಾಜಿಯವರ ಐಕ್ಯ ಸ್ಥಳವಾದ ಬೈಲಹೊಂಗಲದಲ್ಲಿ ಜನವರಿ ೧೨ರಂದು ರಾಜ್ಯಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದೆ.

ಈ ನಿಮಿತ್ತ ಉದಯೋನ್ಮುಖ ಹಾಗೂ ಪ್ರತಿಭಾವಂತ ಕವಿಗಳಿಂದ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ, ವೀರರಾಣಿ ಕಿತ್ತೂರು ಚನ್ನಮ್ಮ, ಸ್ವಾತಂತ್ರ‍್ಯ ಹೋರಾಟಗಾರರು, ಕನ್ನಡ ನಾಡು, ನುಡಿ, ಇತಿಹಾಸ, ಸಂಸ್ಕೃತಿ, ಪರಂಪರೆ, ಪರಿಸರ ಪ್ರೇಮ, ರಾಷ್ಟ್ರಪ್ರೇಮ, ಮಾನವೀಯ ಮೌಲ್ಯಗಳು ಇತ್ಯಾದಿ ವಿಷಯಗಳಿಗೆ ಸಂಬ೦ಧಿಸಿದ೦ತೆ ಕವನಗಳನ್ನು ಆಹ್ವಾನಿಸಲಾಗಿದೆ.

ಕವನವು ೩೦ ಸಾಲುಗಳಿಗೆ ಮಿಕ್ಕದಂತೆ ಕಾಗದದ ಒಂದೇ ಮಗ್ಗುಲಲ್ಲಿ ಬರೆದು ಅಥವಾ ಡಿಟಿಪಿ ಮಾಡಿಸಿರಬೇಕು. ಸ್ವವಿಳಾಸ, ಕಿರುಪರಿಚಯ, ಭಾವಚಿತ್ರ, ವಾಟ್ಸಪ್ ಮೊಬೈಲ್ ಸಂಖ್ಯೆಯೊ೦ದಿಗೆ ಜನವರಿ ೫ರ ಒಳಗಾಗಿ ಮೋಹನ ಬಸನಗೌಡ ಪಾಟೀಲ, ಮಾಜಿ ಜಿಲ್ಲಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ‘ಬಸವ ನಿವಾಸ’, ಚನ್ನಮ್ಮನಗರ ಮೊದಲನೆಯ ಅಡ್ಡರಸ್ತೆ, ಬೈಲಹೊಂಗಲ- ೫೯೧೧೦೨, ಬೆಳಗಾವಿ ಜಿಲ್ಲೆ. ಈ ವಿಳಾಸಕ್ಕೆ ನೋಂದಾಯಿತ ಅಂಚೆ ಮೂಲಕ ಕಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 94489 20888 ಸಂಪರ್ಕಿಸಬೇಕೆ೦ದು ಮಣೂರ ಪ್ರಕಾಶನದ ಮುಖ್ಯಸ್ಥರಾದ ಡಾ. ಫಾರೂಕ್ ಅಹಮ್ಮದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by