ಕನ್ನಡ ನಾಡು | Kannada Naadu

ಕೃಷಿ ಇಲಾಖೆಯ ಗ್ರೂಪ್ ‘ಸಿ’ ಮೇಲ್ವಿಚಾರಕರ ಹುದ್ದೆಗೆ ನೇಮಕಾತಿ ಕುರಿತು ನಕಲಿ ಸಂದೇಶದ ಬಗ್ಗೆ ಎಚ್ಚರಿಕೆ

26 Dec, 2024

 

ಬೆಂಗಳೂರು :   ಕೃಷಿಯ ಇಲಾಖೆಯಿಂದ ಗ್ರೂಪ್ ‘ಸಿ’ ಮೇಲ್ವಿಚಾರಕರ ಹುದ್ದೆಗೆ ಉದ್ಯೋಗ ನೇಮಕಾತಿ ಆದೇಶ ನೀಡಿರುವ ರೀತಿಯಲ್ಲಿ ಕೆಲವು ಕಿಡಿಗೇಡಿಗಳು ನಕಲಿಯಾಗಿ ಬಿಂಬಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿ ಬಿಟ್ಟಿರುವುದು ಕಂಡು ಬಂದಿರುತ್ತದೆ. ಈ ಆದೇಶವು ನಕಲಿ ಆದೇಶವಾಗಿರುತ್ತದೆ. ಕೃಷಿ ಇಲಾಖೆಯಿಂದ ಇಂತಹ ಉದ್ಯೋಗ ನೇಮಕಾತಿ ಆದೇಶವನ್ನು ಎಂದೂ ನೀಡಿರುವುದಿಲ್ಲ. ಸಾರ್ವಜನಿಕರು ಈ ಬಗ್ಗೆ ಜಾಗರೂಕರಾಗಿ ಇರಲು ಕೃಷಿ ಇಲಾಖೆಯು ತಿಳಿಸಿದೆ.

ಕೃಷಿ ಇಲಾಖೆಯಿಂದ ಯಾವುದೇ ಹುದ್ದೆಗಳನ್ನು ಭರ್ತಿ ಮಾಡುವಾಗ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನೇಮಕಾತಿ ಅಧಿಸೂಚನೆ ಹೊರಡಿಸಿ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿ ನಿಯಮಾನುಸಾರ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು.

ಈ ರೀತಿ ಯಾವುದಾದರೂ ವ್ಯಕ್ತಿ ಅಥವಾ ಸಂಸ್ಥೆ ಗ್ರೂಪ್ ‘ಸಿ’ ಮೇಲ್ವಿಚಾರಕ ಇತ್ಯಾದಿ ಹುದ್ದೆಗಳಿಗೆ ಕೃಷಿ ಇಲಾಖೆಯಿಂದ ನೇಮಕಾತಿ ಆದೇಶ ನೀಡಿರುವುದಾಗಿ ತಿಳಿಸಿ ವಂಚಿಸಲು ಕಂಡುಬಂದಲ್ಲಿ ಸಾರ್ವಜನಿಕರು ನಂಬದೆ ಎಚ್ಚರದಿಂದಿರಲು ಕೃಷಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

 

Publisher: ಕನ್ನಡ ನಾಡು | Kannada Naadu

Login to Give your comment
Powered by