ಕನ್ನಡ ನಾಡು | Kannada Naadu

ರಾಜ್ಯದಲ್ಲಿ 2025 ರಲ್ಲಿ ಜರುಗಲಿರುವ ನೀರಾವರಿ ಗಣತಿಗಳಿಗಾಗಿ ಪ್ರಾದೇಶಿಕ ತರಬೇತಿ ಕಾರ್ಯಾಗಾರ

24 Dec, 2024

ಬೆಂಗಳೂರು : ನೀರು ನೈಸರ್ಗಿಕ ಸಂಪನ್ಮೂಲವಾಗಿದೆ. ಆದ್ದರಿಂದ ಅದರ ಪರಿಣಾಮಕಾರಿ ಬಳಕೆ ಮತ್ತು ನೀರಿನ ಸಂಪನ್ಮೂಲಗಳ ನಿರ್ವಹಣೆ ಅತ್ಯಗತ್ಯ, ಭಾರತದ ನೈಋತ್ಯ ಭಾಗದಲ್ಲಿರುವ ಕರ್ನಾಟಕವು ಹೇರಳವಾದ ಮತ್ತು ವಿರಳವಾದ ನೀರಿನ ಸಂಪನ್ಮೂಲಗಳನ್ನು ಹೊಂದಿವೆ. ರಾಜ್ಯದ ಸಂಕೀರ್ಣ ಸ್ಥಳಾಕೃತಿ, ಋತುವಾರು ವ್ಯತ್ಯಾಸ ಮತ್ತು ತ್ತು ಬೆಳೆಯುತ್ತಿರುವ ಜನಸಂಖ್ಯೆಯು ಅದರ ನೀರಿನ ಸಂಪನ್ಮೂಲಗಳನ್ನು ನಿರ್ವಹಿಸುವಲ್ಲಿ ವಿಶಿಷ್ಟ ಸವಾಲುಗಳನ್ನು ಪ್ರಸ್ತುತಪಡಿಸುತ್ತದೆ.

 ನೀರಿನಾಸರೆಗಳ ಮತ್ತು ನೀರಾವರಿ ಯೋಜನೆಗಳ ಸಮಗ್ರ ದತ್ತಾಂಶಗಳನ್ನು ಸಂಗ್ರಹಿಸಬೇಕಾದುದು ಈಗಿನ ಅಗತ್ಯತೆಯಾಗಿದೆ. ಈ ಹಿನ್ನಲೆಯಲ್ಲಿ ಜಲ ಶಕ್ತಿ ಮಂತ್ರಾಲಯದ ಜಲಸಂಪನ್ಮೂಲ, ನದಿ ವಿಕಾಸ ಮತ್ತು ಗಂಗಾ ಸಂಸ್ಕರಣ ಇಲಾಖೆಯ, ಸಣ್ಣ ನೀರಾವರಿ ಅಂಕಿ-ಅಂಶಗಳ ವಿಭಾಗವು ಪ್ರತಿ 5 ವರ್ಷಗಳಿಗೊಮ್ಮೆ ಕರ್ನಾಟಕವೂ ಸೇರಿ ರಾಷ್ಟ್ರಾದ್ಯಂತ ವಿವಿಧ ನೀರಾವರಿ ಮತ್ತು ನೀರಿನಾಸರೆಗಳ ಗಣತಿಗಳನ್ನು ಹಮ್ಮಿಕೊಳ್ಳಲಾಯಿತು. ಸದರಿ ಗಣತಿಗಳ ದತ್ತಾಂಶಗಳು ನೀರಾವರಿ ಇಲಾಖೆಯ ವಿವಿಧ ಯೋಜನೆಗಳ ಮೇಲ್ವಿಚಾರಣೆ ಮತ್ತು ಮೌಲ್ಯ ಮಾಪನಕ್ಕೆ ಸಾಧನಗಳಾಗಿ ಕಾರ್ಯನಿರ್ವಹಿಸುತ್ತವೆ.

ನೀರಾವರಿ ಗಣತಿಗಳಿಗಾಗಿ ಜರುಗಲಿರುವ ಪ್ರಾದೇಶಿಕ ತರಬೇತಿ ಕಾರ್ಯಾಗಾರದಲ್ಲಿ ದಕ್ಷಿಣ ಭಾಗವಹಿಸಿದ್ದು, ಇದನ್ನು ಭಾರತದ ಎಲ್ಲಾ ರಾಜ್ಯಗಳು ಶಕ್ತಿ ಮಂತ್ರಾಲಯದ ಜಲಸಂಪನ್ಮೂಲ, ನದಿ ವಿಕಾಸ ಮತ್ತು ಗಂಗಾ ಸಂಸ್ಕರಣ ಇಲಾಖೆಯ, ಸಣ್ಣ ನೀರಾವರಿ ಅಂಕಿ-ಅಂಶಗಳ ವಿಭಾಗವು ನಡೆಸಿಕೊಟ್ಟಿತು.

ಪ್ರಾದೇಶಿಕ ತರಬೇತಿ ಕಾರ್ಯಾಗಾರವು ಬೆಂಗಳೂರಿನಲ್ಲಿ ಡಿಸೆಂಬರ್ 11 ರಿಂದ 13 ರ ವರೆಗೆ 3 ದಿನಗಳ ಕಾಲ ಜರುಗಿ, ಇದರಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ಗಣತಿ ಪ್ರಪತ್ರಗಳನ್ನು ತುಂಬುವ ಕುರಿತು ವಿಸ್ತøತವಾದ ತರಬೇತಿಯನ್ನು ನೀಡಲಾಯಿತು.

ಕರ್ನಾಟಕವೂ ಸೇರಿ ರಾಷ್ಟ್ರಾದ್ಯಂತ ನಾಲ್ಕು ರೀತಿಯ ಗಣತಿಗಳನ್ನು ನಡೆಸಲಾಗುತ್ತದೆ. ಅವುಗಳೆಂದರೆ 7ನೇ ಸಣ್ಣ ನೀರಾವರಿ ಗಣತಿ, 2ನೇ ನೀರಿನಾಸರೆಗಳ ಗಣತಿ, 1ನೇ ಮಧ್ಯಮ ಮತ್ತು ಬೃಹತ್ ನೀರಾವರಿ ಗಣತಿ ಮತ್ತು 1ನೇ ಚಿಲುಮೆಗಳ ಗಣತಿಗಳಾಗಿವೆ.

ಪ್ರಾದೇಶಿಕ ತರಬೇತಿ ಕಾರ್ಯಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾರತ ಸರ್ಕಾರದ ಅಜಯ್ ಬಕ್ಸಿ, ಹೆಚ್ಚುವರಿ ಮಹಾನಿರ್ದೇಶಕರು, ಸಣ್ಣ ನೀರಾವರಿ ಅಂಕಿ-ಅಂಶಗಳ ವಿಭಾಗ, ಜಲ ಶಕ್ತಿ ಮಂತ್ರಾಲಯ, ಜಲಸಂಪನ್ಮೂಲ, ನದಿ ವಿಕಾಸ ಮತ್ತು ಗಂಗಾ ಸಂಸ್ಮರಣ ಇಲಾಖೆ, ಇವರು ನವದೆಹಲಿ ಅವರು ಭಾಗವಹಿಸಿದ್ದರು.

ಭಾರತ ಸರ್ಕಾರದ ಉನ್ನತ ಅಧಿಕಾರಿಗಳಾದ ಶ್ರೀಮತಿ ಪ್ರಿಯಾಂಕ ಕುಲಕ್ಷೇತ್ರ, ಉಪ ಮಹಾನಿರ್ದೇಶಕರು, ಸಣ್ಣ ನೀರಾವರಿ ಅಂಕಿ-ಅಂಶಗಳ ವಿಭಾಗ, ಜಲ ಶಕ್ತಿ ಮಂತ್ರಾಲಯ, ಜಲಸಂಪನ್ಮೂಲ, ನದಿ ವಿಕಾಸ ಮತ್ತು ಗಂಗಾ ಸಂಸ್ಕರಣ ಇಲಾಖೆ, ಹಾಗೂ ಕರ್ನಾಟಕ ಸರ್ಕಾರದ ಉನ್ನತ ಅಧಿಕಾರಿಗಳಾದ ಶ್ರೀ ಸತೀಶ್ ಎಂ.  ಮುಖ್ಯ ಇಂಜಿನಿಯರ್ ಜಲಸಂಪನ್ಮೂಲ ಇಲಾಖೆ, ಬಿ.ಕೆ. ರಾಜೇಂದ್ರ, ಮುಖ್ಯ ಇಂಜಿನಿಯರ್ ಅಂರ್ತಜಲ ಅಭಿವೃದ್ಧಿ ನಿರ್ದೇಶನಾಲಯ, ಪವಿತ್ರ ಬಿ.ಕೆ. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ, ರಾಜೇಂದ್ರ ಎಸ್. ವಾಲಿಕಾರ್ ಉಪ ಮುಖ್ಯ ಇಂಜಿನಿಯರ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಸತೀಶ ರ. ಹುದ್ದಾರ, ಜಂಟಿ ನಿರ್ದೇಶಕರು (ಸಾಂಖ್ಯಿಕ) ಹಾಗೂ ಸಣ್ಣ ನೀರಾವರಿ ಗಣತಿ ನೋಡಲ್ ಅಧಿಕಾರಿಗಳು, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಇವರುಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by