ಕನ್ನಡ ನಾಡು | Kannada Naadu

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಜಿ.ಪದ್ಮಾವತಿ ಅಧ್ಯಕ್ಷತೆಯಲ್ಲಿ 136ನೇ ನಿರ್ದೇಶಕ ಮಂಡಳಿ ಸಭೆ

24 Dec, 2024

ಬೆಂಗಳೂರು : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಜಿ.ಪದ್ಮಾವತಿ ರವರ ಅಧ್ಯಕ್ಷತೆಯಲ್ಲಿ ಇಂದು ನಿಗಮದ 136ನೇ ನಿರ್ದೇಶಕ ಮಂಡಳಿ ಸಭೆಯನ್ನು ನಡೆಸಲಾಯಿತು.

ಸಭೆಯಲ್ಲಿ ಮಹಿಳೆಯರಿಗೆ ಹೊಸ ಯೋಜನೆಗಳ ಅನುಷ್ಟಾನದ ಬಗ್ಗೆ ಚರ್ಚಿಸಲಾಗಿ ನಂತರ ಕಿರು ಸಾಲ ಯೋಜನೆ, ಮಾರುಕಟ್ಟೆ ನೆರವು ಯೋಜನೆ, ಸಮೃದ್ದಿ ಯೋಜನೆಗಳ ಪುನರ್ ಆರಂಭ, ಅಭಿವೃದ್ಧಿ ನಿರೀಕ್ಷರ ಪದೋನ್ನತಿ, ಕಂಪ್ಯೂಟರ್ ಆಪರೇಟರ್‍ಗಳ ನೇಮಕ, ಲಿಂಗತ್ವ ಅಲ್ಪ ಸಂಖ್ಯಾತರು ಮತ್ತು ಮಾಜಿ ದೇವದಾಸಿಗಳ ಮರು ಸಮೀಕ್ಷೆ ಹಾಗೂ ಸಹಾಯ ಧನ, ಪಿಂಚಣಿಗಳ ಬಗ್ಗೆ, ಉದ್ಯೋಗಿನಿ ಯೋಜನೆಯ ಗೈಡ್‍ಲೈನ್ ಸಡಿಲಿಕೆಗಳು, ತರಬೇತಿ ಯೋಜನೆಯ ಅನುಷ್ಠಾನ, ನಿಗಮದಲ್ಲಿನ ಲೆಕ್ಕಪತ್ರ ವ್ಯವಹಾರಗಳು, ಹೊಸ ಕಛೇರಿ ಕಾಮಗಾರಿಯ ಹಂತಗಳ ಬಗ್ಗೆ, ನಿಗಮದ ಜಾಗಕ್ಕೆ ಭದ್ರತೆಯ ಬಗ್ಗೆ ಇನ್ನು ಹಲವು ಮಹಿಳೆಯರ, ಧಮನಿತ ಮಹಿಳೆಯರ, ಲಿಂಗತ್ವ ಅಲ್ಪಸಂಖ್ಯಾತರ, ಮಾಜಿ ದೇವದಾಸಿಯವರ ಪರವಾಗಿ ನಿಗಮದಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಿ ಅವುಗಳನ್ನು ಕಾರ್ಯರೂಪಕ್ಕೆ ತರುವ ವಿಚಾರವಾಗಿ ನಿರ್ಣಯಿಸಲಾಯಿತು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಬಲರಾಮ್, ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಪುಷ್ಪಲತಾ, ಕಂಪನಿ ಕಾರ್ಯದರ್ಶಿ ಶ್ರೀನಿವಾಸ್ ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by