ಕನ್ನಡ ನಾಡು | Kannada Naadu

ರಾಗ ತರಂಗ(ರಿ) ಮಂಗಳೂರು ಇದರ ಸಾಂಸ್ಕೃತಿಕ ಸ್ಪರ್ಧೆ "ಬಾಲ ಪ್ರತಿಭಾ-2024”

24 Dec, 2024

ರಾಗ ತರಂಗ(ರಿ)ಮಂಗಳೂರು ಇದರ ಸಾಂಸ್ಕೃತಿಕ ಸ್ಪರ್ಧೆ "ಬಾಲ ಪ್ರತಿಭಾ-2024" ತಾ.13,14 ಮತ್ತು 15  ಡಿಸೆಂಬರ್ ನೇ ಶುಕ್ರವಾರ, ಶನಿವಾರ ಮತ್ತು ಆದಿತ್ಯವಾರ ಮಂಗಳೂರಿನ ಭಾರತೀಯ ವಿದ್ಯಾ ಭವನದ ಸಹಯೋಗದೊಂದಿಗೆ ವಿದ್ಯಾಭವನದ ಸಭಾಂಗಣದಲ್ಲಿ ಜರುಗಿತು. 

ಭಾರತೀಯ ವಿದ್ಯಾಭವನದ ನಿರ್ದೇಶಕರಾದ ಶ್ರೀಮತಿ ಶಮ್ಮಿ ಆತ್ಮಚರಣ್ ಅವರು ಸ್ಪರ್ಧೆಗಳಿಗೆ ದೀಪ ಪ್ರಜ್ವಲನೆಯ ಮೂಲಕ ಶುಭ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನಿಶುಲ್ಕವಾಗಿ ಪ್ರವೇಶ ಹೊಂದಿದ್ದ ಈ ಸ್ಪರ್ಧೆಗಳು ಅಪಾರ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾದ ಬಗ್ಗೆ ರಾಗ ತರಂಗದ ಅಧ್ಯಕ್ಷರಾದ ಶ್ರೀ ಶಶಿಧರ್ ಕೆ ಎನ್ ಅವರು ಸಂತಸ ವ್ಯಕ್ತಪಡಿಸಿದರು.

ಕಾಸರಗೋಡು,ದಕ್ಷಿಣ ಕನ್ನಡ, ಉಡುಪಿ ಮತ್ತು ಜಿಲ್ಲಾ ಸರಕಾರಿ, ಖಾಸಗಿ ಮತ್ತು ಕೇಂದ್ರೀಯ ವಿದ್ಯಾಲ ಯಗಳ 10ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಈ ಸ್ಪರ್ಧೆಗಳು ಕಳೆದ 4 ದಶಕಗಳಿಂದ ನಿರಂತರ ನಡೆಯುತ್ತಿದ್ದು ಈ ವರ್ಷ ಸರಕಾರಿ ಶಾಲಾ ಮಕ್ಕಳಿಗಾಗಿ ಒಂದು ದಿನವನ್ನು ಮೀಸಲಾಗಿರಿ ಸಲಾಗಿತ್ತು.

20 ಸ್ಪರ್ಧೆಗಳಲ್ಲಿ ಸುಮಾರು 280 ಮಕ್ಕಳು ಪಾಲ್ಗೊಂಡಿದ್ದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರತಿಭಾ ಸ್ಪರ್ಧೆಯ ಅಭಿನಂದನೆಯ ಪತ್ರಗಳನ್ನು ನೀಡಲಾಯಿತು.

Publisher: ಕನ್ನಡ ನಾಡು | Kannada Naadu

Login to Give your comment
Powered by