ಕನ್ನಡ ನಾಡು | Kannada Naadu

ಮಂಗಳೂರು ವಿವಿ: ಇಗ್ನೈಟ್- ಎಂ.ಕಾಂ.ಎಚ್.ಆರ್ ಕಾರ್ಯಕ್ರಮ

22 Dec, 2024

ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಎಂ.ಕಾಂ.ಎಚ್.ಆರ್ ವತಿಯಿಂದ ಇಗ್ನೈಟ್ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗದ ಪ್ರೊ. ವೇದವ ಪಿ. ಉದ್ಘಾಟಿಸಿದರು. ಬಳಿಕ ಮಾತನಾಡಿ,  ವಿದ್ಯಾರ್ಥಿಗಳು ಜೀವನದ ಯಶಸ್ಸು ಸಾಧಿಸುವತ್ತ ಗಮನ ಹರಿಸಬೇಕು ಎಂದು ಹೇಳಿದರು.

ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯ ವಿಭಾಗದ ಮುಖ್ಯಸ್ಥ ರಾದ ಡಾ. ಪ್ರೀತಿ ಕೀರ್ತಿ ಡಿಸೋಜಾ ಅವರು ಮಾತನಾಡಿ, ವಿದ್ಯಾರ್ಥಿಗಳು ನಾಯಕತ್ವದ ಗುಣ ಹೆಚ್ಚಿಸಿಕೊಳ್ಳಬೇಕು. ಫೆಸ್ಟ್‌ಗಳು ವಿದ್ಯಾರ್ಥಿಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ತಾತ್ವಿಕ ಚಿಂತನೆಗೆ ಉತ್ತೇಜನ ನೀಡುತ್ತದೆ. ಹಾಗೂ ಆತ್ಮವಿಶ್ವಾಸ ಮತ್ತು ಪ್ರಸ್ತುತಿಕೆ ಕೌಶಲಗಳನ್ನು ಹೆಚ್ಚಿಸುತ್ತದೆ. ಈ ರೀತಿಯ ಕಾರ್ಯಕ್ರಮವು ಶೈಕ್ಷಣಿಕ ಮೇಲುಗೈ ಮತ್ತು ಪ್ರಾಯೋಗಿಕ ಕಲಿಕೆಯನ್ನು ಉತ್ತೇಜಿಸುತ್ತದೆ. ಜೊತೆಗೆ ಎಚ್ ಆರ್ ವೃತ್ತಿ ಕನಸುಗಳನ್ನು ಹೊಂದಿದ ವಿದ್ಯಾರ್ಥಿಗಳಿಗೆ ಇದು ಬಹಳ ಪ್ರಭಾವಶಾಲಿ ಆಗುತ್ತದೆ ಎಂದರು.

ಸಭಾ ಕಾರ್ಯಕ್ರಮದ ನಂತರ ಫೆಸ್ಟ್ ನ ವಿವಿಧ ಈವೆಂಟ್ಗಳಾದ ಕ್ವಿಜ್, ಮಲ್ಟಿ ಟಾಸ್ಕಿನ್ಗ್, ಗ್ರೂಪ್ ಡಿಸ್ಕಶನ್, ಪಿಕ್ ಅಂಡ್ ಸ್ಪೀಚ್ ಮತ್ತು ಕೇಸ್ ಸ್ಟಡಿ ಅನಾಲಿಸಿಸ್ ನಡೆಯಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಾಣಿಜ್ಯ ಸಂಘದ ಸ್ಟಾಫ್ ಕೋ-ಆರ್ಡಿನೇಟರ್ ಗುರುರಾಜ್ ಪಿ. ಹಾಗೂ ವೈಶಾಲಿ ಕೆ ಮತ್ತು ಉಪನ್ಯಾಸಕರಾದ ಡಾ. ದಿನಕರ ಕೆಂಜೂರು, ರಶ್ಮಿತ ಆರ್. ಕೋಟ್ಯಾನ್, ಸಿ. ಲಹರಿ ಮತ್ತು ರಮ್ಯ ರಾಮಚಂದ್ರ ನಾಯ್ಕ್ ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by