ಕನ್ನಡ ನಾಡು | Kannada Naadu

ಕನ್ನಡದ ಜ್ವಲಂತ ಸಮಸ್ಯೆಗಳ ಪರಿಹಾರ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಅಗ್ರಹ

20 Dec, 2024

 

ನವದೆಹಲಿ : ಕನ್ನಡದ ಜ್ವಲಂತ ಸಮಸ್ಯೆಗಳ ಪರಿಹಾರ ಕುರಿತಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುವ ಸಲುವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದವತಿಯಿಂದ ಪರಿಣಿತರ ಸಮಿತಿಯು ನವದೆಹಲಿಗೆ ಆಗಮಿಸಿ, ಹಲವಾರು ಪ್ರಮುಖ ವಿಷಯಗಳ ಕುರಿತಂತೆ ನಿಯೋಗವು ಗಣ್ಯರ ಗಮನಕ್ಕೆ ತಂದಿದ್ದು, ಇವುಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಗಣ್ಯರು ಭರವಸೆ ನೀಡಿರುತ್ತಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಮಾಧ್ಯಮಗಳಿಗೆ ತಿಳಿಸಿದರು.

ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಧಮೇರ್ಂದ್ರ ಪ್ರಧಾನ್ ರವರುಗಳನ್ನು ಭೇಟಿ ಮಾಡಿ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡ ರವರನ್ನು ಸಹ ಭೇಟಿ ಮಾಡಿ ಸಹಕರಿಸಲು ಕೋರಲಾಗಿದೆ ಎಂದು ಅವರು ತಿಳಿಸಿದರು.
 
ದಿನಾಂಕ 17/12/2024 ರಂದು ರಾಜ್ಯದ ಸಂಸದರ ಸಭೆ ಕರೆದು ಕನ್ನಡ ಸಮಸ್ಯೆಗಳ ಕುರಿತಂತೆ ಮನವರಿಕೆ ಮಾಡಲಾಗಿದೆ. ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದರಾದ ಕುಮಾರನಾಯ್ಕ್, ತುಕಾರಂ, ಈರಣ್ಣ ಕಡಾರಿ, ಡಾ. ಸಿ.ಎನ್. ಮಂಜುನಾಥ್ ಇದ್ದರು. ದಿನಾಂಕ 18/12/2024 ರಂದು ಸಂಸದರಾದ ಶ್ರೀಮತಿ ಸುಧಾಮೂರ್ತಿ, ಡಾ. ಕೆ.ಸುಧಾಕರ್ ಅವರುಗಳನ್ನು ಭೇಟಿ ಮಾಡಲಾಗಿದೆ.
 
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರವರು ಕನ್ನಡಕ್ಕಾಗಿ ತಾವು ಎಂದಿಗೂ ಸೇವೆಗೆ ಸಿದ್ಧ. ನೀವು ತಂದಿರುವ ಕನ್ನಡದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕ್ರಿಯಾಶೀಲರಾಗಿ ಪಾಲ್ಗೋಳ್ಳುತ್ತೇನೆ ಎಂಬ ಭರವಸೆಯನ್ನು ನೀಡಿದ್ದಾರೆ. ಕೇಂದ್ರ ಮಂತ್ರಿ ಸನ್ಮಾನ್ಯ ಹೆಚ್.ಡಿ. ಕುಮಾರಸ್ವಾಮಿರವರು ಸಹ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗದ ಮನವಿಯನ್ನು ಪೂರ್ಣವಾಗಿ ಓದಿ ಕೇಂದ್ರ ಸರ್ಕಾರದ ಕ್ರಮಗಳಿಗೆ ಈ ಕೋರಿಕೆಗಳು ಪ್ರಸ್ತುತವಾಗಿದ್ದು, ತಮ್ಮೆಲ್ಲ ಸಹಕಾರವನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
 
ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಅವರು, ಮಾಜಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳರವರು ಹಾಗೂ ಸಭೆಯಲ್ಲಿ ಹಾಜರಿದ್ದ ನಿಯೋಗದ ಮನವಿಯನ್ನು ಸ್ವೀಕರಿಸಿ ಕನ್ನಡದ ಸೇವೆಗೆ ತಾವು ಸದಾ ಸಿದ್ಧವೆಂದು ಹೇಳಿದ್ದಾರೆ. ಎಲ್ಲ ಸಂಸದರು ಸಂಸತ್ತಿನಲ್ಲಿ ಕನ್ನಡದಲ್ಲಿಯೇ ಮಾತನಾಡಬೇಕೆಂಬ ನನ್ನ ಆಗ್ರಹಕ್ಕೆ ಕ್ರಿಯಾಶೀಲವಾಗಿ ಸ್ಪಂಧಿಸಿದ್ದಾರೆ.

ರಾಜ್ಯಸಭೆಯ ವಿರೋಧಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಿಯೋಗವು ದಿನಾಂಕ 18/12/2024 ರಂದು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅನುಷ್ಠಾನಕ್ಕೆ ಯೋಗ್ಯ ಸಲಹೆಗಳೆಲ್ಲದರ ಕುರಿತಂತೆ ಕ್ರಮವಹಿಸಲು ಸಂಬಂಧಪಟ್ಟ ಸಚಿವರಿಗೆ ಕೋರಲಾಗವುದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ನವದೆಹಲಿಯಲ್ಲಿ ಇರುವ ಆಯ್ದ ರಸ್ತೆ-ನಿಲ್ದಾಣಗಳಿಗೆ ಕನ್ನಡದ ಮೇರು ವ್ಯಕ್ತಿಗಳ ಹೆಸರನ್ನು ಇಡಬೇಕೆಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ.

ಕೇಂದ್ರ ಸಚಿವ ಧಮೇರ್ಂದ್ರ ಪ್ರಧಾನ್ ರವರೊಂದಿಗೆ ಸಂಸತ್ ಭವನದಲ್ಲಿ ಸಭೆಯನ್ನು ನಡೆಸಲಾಗಿದ್ದು, ಕೆಳಕಂಡ ವಿಷಯಗಳ ಕುರಿತಂತೆ ಕ್ರಮವಹಿಸುವುದಾಗಿ ತಿಳಿಸಿದ್ದಾರೆ ಎಂದರು.

ಮೈಸೂರಿನಲ್ಲಿರುವ ಕೇಂದ್ರ ಭಾರತೀಯ ಭಾμÁ ಸಂಸ್ಥೆಯ (ಸಿಐಐಎಲ್) ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಪ್ರತ್ಯೇಕಿಸಲಾಗುವುದು. ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರಕ್ಕೆ ಕೇಂದ್ರ ಸರ್ಕಾರದಿಂದ ನೀಡಬೇಕಿರುವ ಎಲ್ಲಾ ಆರ್ಥಿಕ ಸಹಕಾರವನ್ನು ಒದಗಿಸಲಾಗುವುದು.

ಕೇಂದ್ರ ಭಾರತೀಯ ಭಾμÁ ಸಂಸ್ಥೆಯ ಆಡಳಿತ ವ್ಯಾಪ್ತಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸಮರ್ಪಕ ಕಾರ್ಯಚಟುವಟಿಕೆಗಳಿಗೆ ಕಾಯಕಲ್ಪವು ಅಗತ್ಯವಿದ್ದು, ಈ ಕೇಂದ್ರದ ಆಡಳಿತ ವ್ಯವಸ್ಥೆಯನ್ನು ಮೇಲ್ದರ್ಜೆಗೆರಿಸಿ ಅನುಕೂಲ ಮಾಡಲಾಗುವುದು.

ಮೈಸೂರಿನ ಕೇಂದ್ರ ಭಾರತೀಯ ಭಾಷಾ ಸಂಸ್ಥೆಯು ತನ್ನ ಸ್ಥಾಪನೆಯನ್ನು ಅರ್ಥಪೂರ್ಣವಾಗಿಸಲು ಇನ್ನಷ್ಟು ತಂತ್ರಜ್ಞಾನ ಸ್ನೇಹಿಯಾಗಬೇಕಾದ ಅನಿವಾರ್ಯತೆ ಇದೆ ಎಂದು ಪ್ರಧಾನ್ ಅಭಿಪ್ರಾಯಿಸಿದ್ದು, ಈಗಾಗಲೇ ಕೇಂದ್ರ ಸರ್ಕಾರವು ಬೆಂಗಳೂರಿನಲ್ಲಿ ಈ ಸಂಸ್ಥೆಯ ತಂತ್ರಜ್ಞಾನ ಕಚೇರಿಯನ್ನು ತೆರೆಯಲು ಸೂಚಿಸಲಾಗಿದೆ ಎಂಬ ಮಾಹಿತಿಯನ್ನು ಧಮೆರ್ಂದ್ರ ಪ್ರಧಾನ್ ನೀಡಿದ್ದಾರೆ ಎಂದು ತಿಳಿಸಿದರು.

ಶಾಸ್ತ್ರೀಯ ಕನ್ನಡ ಸ್ಥಾನಮಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಸಲಹೆಗಳು ಅವಶ್ಯಕವಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಕುರಿತಂತೆ ಸಲಹೆಗಳನ್ನು ನೀಡಿದಲ್ಲಿ ಅವುಗಳ ಅನುಷ್ಠಾನದ ಕುರಿತಂತೆ ಕ್ರಮವಹಿಸಲಾಗುವುದು ಎಂದು ಸಚಿವರು ತಿಳಿಸಿದ್ದು, ಈ ಬಗ್ಗೆ ತಜ್ಞರಿಂದ ವರದಿ ಸಿದ್ಧಪಡಿಸಿ ಸಲ್ಲಿಸಲಾಗುವುದು.

ಕನ್ನಡ ಭಾμÁ ಕಲಿಕಾ ಅಧಿನಿಯಮದ ಅನುಸಾರ ಕನ್ನಡವನ್ನು ಕಡ್ಡಾಯವಾಗಿ ಕಲಿಸಲು ರಾಜ್ಯದ ಎಲ್ಲಾ ಕೇಂದ್ರ ಪಠ್ಯಕ್ರಮದ ಶಾಲೆಗಳಿಗೆ ನಿರ್ದೇಶನ ನೀಡಲು ನಿಯೋಗವು ಸಚಿವರನ್ನು ಕೋರಿದ್ದು, ಮುಂದಿನ ಒಂದು ವಾರದೊಳಗೆ ಅಗತ್ಯ ನಿರ್ದೇಶನ ನೀಡುತ್ತೇನೆ ಎಂದು ಪ್ರಧಾನ್ ಭರವಸೆ ನೀಡಿದ್ದಾರೆ.

 

ರಾಜ್ಯ ಸರ್ಕಾರದ ಕನ್ನಡ ಭಾಷಾ ಕಲಿಕಾ ಅಧಿನಿಯಮ ತಾಯ್ನುಡಿಯನ್ನು ಮಕ್ಕಳಿಗೆ ಕಲಿಸುವಲ್ಲಿ ಉತ್ತಮ ನೀತಿಯಾಗಿದೆ. ಕೇಂದ್ರ ಸರ್ಕಾರದ ಶಿಕ್ಷಣ ನೀತಿಗೆ ಪೂರಕವಾಗಿದೆ ಎಂದು ಸಹ ಪ್ರಧಾನ್ ಹೇಳಿದ್ದಾರೆ.

ದಿನಾಂಕ 18/12/2024 ರಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರೊಂದಿಗೆ ಹಲವು ವಿಷಯಗಳ ಕುರಿತಂತೆ ಚರ್ಚಿಸಲಾಗಿದೆ. ಬ್ಯಾಂಕ್ ನೇಮಕಾತಿ ನ್ಯೂನ್ಯತೆಗಳ ಕಾರಣ ಸ್ಥಳೀಯರಿಗೆ ಅವಕಾಶ ದೊರಕುತ್ತಿಲ್ಲವೆಂಬ ಅಂಶವನ್ನು ಮನವರಿಕೆ ಮಾಡಲಾಗಿದೆ. ಮಾನ್ಯ ಸಚಿವರು ಈ ಕುರಿತಂತೆ ಶ್ರೀಮತಿ ನಿರ್ಮಾಲ ಸೀತರಾಮನ್ ಅವರೊಂದಿಗೆ ಚರ್ಚಿಸಲಾಗುವುದು ಎಂಬ ಸೂಚನೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.

ಜವಾಹರ್ಲಾಲ್ ವಿಶ್ವವಿದ್ಯಾಲಯದಲ್ಲಿರುವ ಕನ್ನಡ ಪೀಠಕ್ಕೆ ಪ್ರಾಧ್ಯಾಪಕರ ನೇಮಕಾತಿ ಆಗಿಲ್ಲದೇ ಇರುವ ಅಂಶದ ಕುರಿತಂತೆ ನಿಯೋಗದ ಮನವಿಯನ್ನು ಆಲಿಸಿದ ಸಚಿವರು ಕೇಂದ್ರ ಸಚಿವರಿಗೆ ತಾವು ಸಹ ಪತ್ರ ಬರೆದು ಕೂಡಲೇ ಕ್ರಮವಹಿಸಲು ಮನವಿ ಮಾಡುವುದಾಗಿ ತಿಳಿಸಿದ್ದಾರೆ. ಅದೇ ರೀತಿ ಕನ್ನಡ ಭಾಷಾ ಕಲಿಕಾ ಅಧಿನಿಯಮ 2015ರ ಅನುಷ್ಠಾನಕ್ಕಾಗಿ ಕೇಂದ್ರ ಪಠ್ಯಕ್ರಮದ ಶಾಲೆಗಳಿಗೆ ಸೂಚನೆ ನೀಡುವ ಕುರಿತಂತೆಯೂ ಕೇಂದ್ರ ಶಿಕ್ಷಣ ಸಚಿವರಿಗೆ ಕೋರುವುದಾಗಿ ಪ್ರಲ್ಹಾದ ಜೋಶಿರವರು ಮಾಹಿತಿ ನೀಡಿದ್ದಾರೆ.

ಕಲಬುರಗಿಯ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿರುವ ಶಾಸ್ತ್ರೀಯ ಕನ್ನಡ ಕೇಂದ್ರಕ್ಕೆ ಯುಜಿಸಿ ಅನುದಾನ ನಿಲ್ಲಿಸಿದ್ದರಿಂದ ಅದು ಮುಂಚುವ ಭೀತಿಯಲ್ಲಿದ್ದು, ಈ ಕೇಂದ್ರಕ್ಕೆ ಅನುದಾನ ನೀಡಲು ಕೇಂದ್ರ ಸರ್ಕಾರವು ಮನಸ್ಸು ಮಾಡಬೇಕೆಂಬ ಮನವಿಯನ್ನು ಆಲಿಸಿದ ಸಚಿವರು ಸಂಬಂಧಪಟ್ಟ ಸಚಿವಾಲಯದೊಂದಿಗೆ ತಾವು ಮಾತನಾಡಿ ಅಗತ್ಯಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ.

ನಿಯೋಗವು ಜೆಎನ್‍ಯು ಸಂಸ್ಥೆಗೆ ದಿನಾಂಕ 18/12/2024 ರಂದು ಭೇಟಿ ನೀಡಿದೆ. ಅಲ್ಲಿನ ಡೀನ್ ಹಾಗೂ ರೆಕ್ಟರ್ ಅವರೊಂದಿಗೆ ಸುದೀರ್ಘ ಸಭೆ ನಡೆಸಿ ಜೆಎನ್‍ಯು ಕನ್ನಡ ಪೀಠಕ್ಕೆ ಪ್ರಾಧ್ಯಾಪಕರನ್ನು ನೇಮಿಸಲು ಅಗುತ್ತಿರುವ ವಿಳಂಭಕ್ಕೆ ಕಾರಣಗಳನ್ನು ಸಂಗ್ರಹಿಸಿದೆ. ಹಾಗೂ ಚರ್ಚೆಯ ಬಳಿಕ ರೆಕ್ಟರ್ ಮತ್ತು ಡೀನ್ ರವರುಗಳು ನೇಮಕಾತಿಗೆ ಇರುವ ಅಡೆತಡೆಗಳನ್ನು ನಿವಾರಿಸುವಲ್ಲಿ ಕೆಳಕಂಡ ಕ್ರಮಗಳನ್ನು ಅನುಸರಿಸುವುದು ಸೂಕ್ತ ಹಾಗೂ ಜೆಎನ್‍ಯು ಕನ್ನಡ ಪೀಠ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವುದನ್ನು ಗಮನಿಸಲು ಉತ್ಸುಕವಾಗಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಮತ್ತು ಜೆಎನ್‍ಯು ನಡುವೆ ಆಗಿರುವ ಒಪ್ಪಂದ ಇಂದಿನ ಅವಶ್ಯಕತೆಗೆ ಅನುಗುಣವಾಗಿ ಪರಿಷ್ಕರಣೆ ಆಗಬೇಕು. ಅಂದರೆ ಇಲ್ಲಿ ನೇಮಕವಾಗುವ ಕನ್ನಡ ಪ್ರಾಧ್ಯಾಪಕರ ಅವಧಿ ಪ್ರಸ್ತುತ ಮೂರು ವರ್ಷ ಇದ್ದು, ಈ ಅವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸಬೇಕು. ಏಳು ವರ್ಷಗಳವರೆಗೂ ಕಾರ್ಯನಿರ್ವಹಿಸಲು ಹೆಚ್ಚುವರಿ ಅವಕಾಶವನ್ನು ಕಲ್ಪಿಸಬೇಕು. ಇದರಿಂದ ಪಿ.ಹೆಚ್.ಡಿ ಪದವಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದು ಎಂದು ಹೇಳಿದರು.

2015 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಐದು ಕೋಟಿ ರೂಗಳ ಇಡುಗಂಟಿನ ಅನುದಾನದೊಂದಿಗೆ ಆರಂಭವಾದ ಜೆಎನ್‍ಯು ಕನ್ನಡ ಪೀಠ ಪ್ರಸ್ತುತ ಅನುದಾನದ ಕೊರತೆಯಿಂದ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸುದೀರ್ಘ ಅವಧಿಯಿಂದ ಪ್ರಾಧ್ಯಾಪಕರ ಹುದ್ದೆ ಖಾಲಿ ಇದ್ದು, ಈ ಹಂತದಲ್ಲಿ ಪ್ರಾಧ್ಯಾಪಕರನ್ನು ನೇಮಿಸಿದರು ಅವರ ವೇತನ ವೆಚ್ಚಗಳಿಗೆ ವಿಶ್ವವಿದ್ಯಾಲಯವು ಸಾಕಷ್ಟು ಕಷ್ಟಪಡಬೇಕಾಗುತ್ತದೆ.

ರಾಜ್ಯ ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯಂತೆ ಪ್ರಾಧ್ಯಾಪಕರನ್ನೇ ನೇಮಿಸಿಕೊಳ್ಳಬೇಕಾಗಿರುವ ಕಾರಣ ಹೆಚ್ಚುವರಿ ಅನುದಾನದ ತೀವ್ರ ಅವಶ್ಯಕತೆ ಇರುತ್ತದೆ. ಈ ಕುರಿತಂತೆ ಕ್ರಮಕ್ಕೆ ಮುಂದಾಗುವ ಅಲೋಚನೆ ಹೊಂದಲಾಗಿದೆ ಎಂದರು.

ಈಗಾಗಲೇ ಪ್ರಾಧ್ಯಾಪಕರ ನೇಮಕಾತಿಗೆ ಸಮಿತಿ ರಚಿಸಲಾಗಿದ್ದು, ಪ್ರಾಧ್ಯಾಪಕರ ಆಯ್ಕೆಯ ಪ್ರಕ್ರಿಯೆಯನ್ನು ಯಾವುದೇ ಅಡೆತಡೆಗಳಲ್ಲಿದೆ ಜೆಎನ್‍ಯು ಮುಂದುವರೆಸಬೇಕೆಂಬ ಸೂಚನೆ ನೀಡಲಾಗಿದೆ.

ಒಡಂಬಡಿಕೆಯಲ್ಲಿ ಪ್ರಾಧ್ಯಾಪಕರ ಸ್ಥಾನ ತುಂಬಲು ಸಾಧ್ಯವಾಗದ ಪಕ್ಷದಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕ ಕೈಗೊಳ್ಳಬಹುದೆಂಬ ತಿದ್ದುಪಡಿ ಕುರಿತಂತೆ ಕೂಡಲೇ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಕ್ರಮಕ್ಕೆ ಪ್ರಾಧಿಕಾರವು ಮುಂದಾಗಲಿದೆ. ಈ ರೀತಿ ಆದಲ್ಲಿ ಪ್ರಸ್ತುತ ಐದು ಕೋಟಿಗಳ ಇಡುಗಂಟಿನಿಂದ ಸ್ವೀಕೃತವಾಗುತ್ತಿರುವ ಮೊತ್ತದಲ್ಲಿ ಪೀಠವನ್ನು ಮುಂದುವರೆಸಬಹುದೆಂಬ ಅಭಿಪ್ರಾಯವನ್ನು ಜೆಎನ್‍ಯು ಸಂಸ್ಥೆಯ ಡೀನ್ ಮತ್ತು ರೆಕ್ಟರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಪ್ರಾಧ್ಯಾಪಕರ ಅವಧಿ ಗರಿಷ್ಠ ಮೂರು ವರ್ಷಗಳವರೆಗಿದ್ದು, ಇದನ್ನು ಐದು ವರ್ಷಗಳಿಗೆ ಹೆಚ್ಚಿಸಿದಲ್ಲಿ ಮಾತ್ರ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗುತ್ತದೆಂಬ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಈ ಕುರಿತಂತೆ ರಾಜ್ಯ ಸರ್ಕಾರದ ಗಮನಕ್ಕೆ ತಂದು ಒಡಂಬಡಿಕೆಯಲ್ಲಿ ಪರಿಷ್ಕರಣೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಅನುದಾನ ಕೊರತೆಯ ಕಾರಣ ಕನ್ನಡ ಪೀಠ ನಿಷ್ಕ್ರಿಯವಾಗುವುದು ಸರಿಯಲ್ಲವೆಂಬ ಅಭಿಪ್ರಾಯವನ್ನು ಜೆಎನ್‍ಯು ಆಡಳಿತಕ್ಕೆ ಮನವರಿಕೆ ಮಾಡಲಾಗಿದ್ದು, ರಾಜ್ಯ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಸಕ್ತ ಪ್ರಾಧ್ಯಾಪಕರುಗಳನ್ನು ನಿಯೋಜನೆ ಮೇರೆಗೆ ನೇಮಿಸಲು ಸಹ ಅವಕಾಶವನ್ನು ಕಲ್ಪಿಸಬೇಕೆಂದು ಕೋರಲಾಗಿದೆ. ಈ ಕುರಿತಂತೆಯೂ ಒಡಂಬಡಿಕೆಯಲ್ಲಿ ಪರಿಷ್ಕರಣೆ ಅಗತ್ಯವಿದ್ದು, ಸರ್ಕಾರವನ್ನು ಪ್ರಾಧಿಕಾರ ಕೋರಲಿದೆ.

ಜೆಎನ್‍ಯು ಕನ್ನಡ ಪೀಠ ಕಿರಿದಾದ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದು ಕನ್ನಡಿಗರಿಗೆ ಮುಜುಗರ ತರುವ ಸಂಗತಿಯಾಗಿದೆ. ಈ ಪೀಠಕ್ಕೆ ಸಾಕಷ್ಟು ಸ್ಥಳಾವಕಾಶವಿರುವ ಕೊಠಡಿ ಹಾಗೂ ಕಚೇರಿಯನ್ನು ಒದಗಿಸಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಲಾಗಿದೆ.

ದಿನಾಂಕ 19/12/2024 ರಂದು ಕೇಂದ್ರ ಸಂಸ್ಕøತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ರವನ್ನು ಭೇಟಿ ಮಾಡಿ ದೇಶದಲ್ಲಿಯೇ ಅತೀ ಹೆಚ್ಚು ಸ್ಮಾರಕಗಳು ಕರ್ನಾಟಕದಲ್ಲಿವೆ. ಸಾಂಸ್ಕøತಿಕ ಸಚಿವಾಲಯದ ವತಿಯಿಂದ ಕರ್ನಾಟಕ ರಾಜ್ಯದಲ್ಲಿನ ಸ್ಮಾರಕಗಳ ಸಂರಕ್ಷಣೆಗೆ ವಿಶೇಷ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದ್ದು, ಎ.ಎಸ್.ಐ ಅಡಿಯಲ್ಲಿ ಬರುವ ರಾಜ್ಯದಲ್ಲಿನ ಸ್ಮಾರಕಗಳ ಕುರಿತಂತೆ ವಿಶೇಷ ಗಮನ ಹರಿಸಲಾಗುವುದೆಂದು ಸಚಿವರು ಸ್ಪಷ್ಟ ಭರವಸೆಯನ್ನು ನೀಡಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ನಡೆಯುತ್ತಿರುವ ಉತ್ಸವ ಮತ್ತು ಕಾರ್ಯಕ್ರಮಗಳಿಗೆ ನಿಯಮಿತವಾದ ಅನುದಾನದ ನೆರವನ್ನು ನೀಡಬೇಕೆಂದು ಸಚಿವರನ್ನು ಆಗ್ರಹಿಸಲಾಗಿದ್ದು, ಈ ಕುರಿತಂತೆಯೂ ಪರಿಶೀಲನೆಯನ್ನು ನಡೆಸಿ ಕೇಂದ್ರ ಸರ್ಕಾರದಿಂದ ಬರಬೇಕಿರುವ ಅನುದಾನವನ್ನು ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಕೇಂದ್ರ ಸರ್ಕಾರವು ಸಾಂಸ್ಕøತಿಕ ಸಮಿತಿಗಳನ್ನು ರಚಿಸುವ ಸಂದರ್ಭದಲ್ಲಿ ಕರ್ನಾಟಕದಲ್ಲಿನ ಪ್ರತಿಭಾನ್ವಿತ ಕಲಾವಿದರು, ಸಂಗೀತಗಾರರುಗಳಿಗೆ ಅದ್ಯತೆಯ ಅವಕಾಶ ನೀಡಬೇಕೆಂದು ಕೋರಲಾಗಿದೆ. ಇದಕ್ಕೂ ಸಹ ಸಚಿವರು ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

ದಿನಾಂಕ 19/12/2024 ರಂದು ಕರ್ನಾಟಕ ಭವನದ ಆಡಳಿತದಲ್ಲಿ ಕನ್ನಡ ಅನುಷ್ಠಾನದ ಕುರಿತಂತೆ ಪರಿಶೀಲನಾ ಸಭೆಯನ್ನು ನಡೆಸಲಾಗಿದೆ. ರಾಜಧಾನಿ ಮಟ್ಟದಲ್ಲಿ ಕನ್ನಡದ ಸಾಂವಿಧಾನಿಕ ಪ್ರತೀಕವಾಗಿರುವ ಕರ್ನಾಟಕ ಭವನವು ಕನ್ನಡ ಭಾಷಾ ಸಂಸ್ಕøತಿಯ ಪ್ರಸರಣಕ್ಕೆ ಇನ್ನಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕೆಂದು ಮನವರಿಕೆ ಮಾಡಲಾಗಿದೆ. ಸಂಸ್ಥೆಯ ಹೊರಗುತ್ತಿಗೆ ನೇಮಕಾತಿಯಲ್ಲಿ ಕನ್ನಡೇತರರು ಗಣನೀಯ ಸಂಖ್ಯೆಯಲ್ಲಿದ್ದು, ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯವನ್ನು ಒದಗಿಸಬೇಕೆಂಬ ಸೂಚನೆ ನೀಡಲಾಗಿದೆ.

ಕರ್ನಾಟಕ ಭವನದ ಆವರಣದಲ್ಲಿ ಕನ್ನಡ ಭಾಷಾ ಸಂಸ್ಕøತಿಗಳನ್ನು ಪ್ರತಿಬಿಂಬಿಸುವ ಹಿರಿಯ ಸಾಹಿತಿಗಳ, ಕವಿಗಳ ವಿರಚಿತ ಸಾಲುಗಳನ್ನು ಪ್ರದರ್ಶಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ನಿಯೋಗದಲ್ಲಿ ನನ್ನ ಜೊತೆಯಲ್ಲಿ ಮಾಜಿ ಸಭಾಪತಿಗಳಾದ ವಿ.ಆರ್. ಸುದರ್ಶನ್, ಮಾಜಿ ಸಂಸದ ಎಲ್. ಹನುಮಂತಯ್ಯ, ಶಿಕ್ಷಣತಜ್ಞ ಹಿ.ಚಿ. ಬೋರಲಿಂಗಯ್ಯ, ಸಾಹಿತಿಗಳಾದ ಅಗ್ರಹಾರ ಕೃಷ್ಣಮೂರ್ತಿ, ವಿದ್ಯಾವರ್ಧಕ ಸಂಘ ಧಾರವಾಡದ ಶಂಕರ ಹಲಗತ್ತಿ, ಪ್ರಾಧಿಕಾರದ ಸದಸ್ಯರಾದ ವಿ.ಪಿ. ನಿರಂಜನಾರಾಧ್ಯ, ಎ.ಬಿ.ರಾಮಚಂದ್ರಪ್ಪ, ದಾಕ್ಷಾಯಿಣಿ ಹುಡೇದ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಮತ್ತು ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಟಿ.ಎಸ್. ಫಣಿಕುಮಾರ್ ಇದ್ದರು ಎಂದು ಅವರು ತಿಳಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by