ಕನ್ನಡ ನಾಡು | Kannada Naadu

ಸಹಕಾರ ರತ್ನ ಕೆ. ನಾರಾಯಣ ಬಲ್ಲಾಳ್ ರವರಿಗೆ ನಾಗರಿಕ ಸನ್ಮಾನ

19 Dec, 2024

ಸಹಕಾರ ರತ್ನ ಕೆ. ನಾರಾಯಣ ಬಲ್ಲಾಳ್ ಅಭಿನಂದನ ಸಮಿತಿ ವತಿಯಿಂದ ಸಹಕಾರ ರತ್ನ
ಪುರಸ್ಕ್ರತರಾದ  ಕೆ. ನಾರಾಯಣ ಬಲ್ಲಾಳ್ ರವರಿಗೆ ಊರ ನಾಗರಿಕರ ಪರವಾಗಿ ಅಬಿನಂದನ
ಸಮಾರಂಭವು 21.12.2024, ಶನಿವಾರ ಸಂಜೆ 6.00 ಗಂಟೆಗೆ ಕೊಡವೂರು ಶಾಲಾ
ವಠಾರದಲ್ಲಿ ಅದ್ದೂರಿಯಾಗಿ ನಡೆಯಲಿದೆ.


ಸಮಾರಂಭದ ಉದ್ಘಾಟನೆಯನ್ನು ಕೋಟ ಶ್ರೀನಿವಾಸ ಪೂಜಾರಿ ನೆರವೇರಿಸಲಿದ್ದಾರೆ.
ಅಧ್ಯಕ್ಷತೆಯನ್ನು ಸಾಧು ಸಾಲ್ಯಾನ್  ವಹಿಸಲಿದ್ದಾರೆ.  ಅತಿಥಿಗಳಾಗಿ ಶಾಸಕ  ಯಶಪಾಲ
ಸುವರ್ಣ, ಹಿರಿಯ ಸಹಕಾರಿ ಜಯಕರ ಶೆಟ್ಟಿ ಇಂದ್ರಾಳಿ, ಕೆ .ರವಿರಾಜ ಹೆಗ್ಡೆ,  ಅಶೋಕ್
ಕುಮಾರ್ ಕೊಡವೂರು, ನಾರಾಯಣ ಬಲ್ಲಾಳ್, ಮೋಹನ ಉಪಾಧ್ಯ, ಮಾನಸಿ ಸುಧೀರ್,
ನಗರ ಸಭಾ ಸದಸ್ಯ ವಿಜಯ್ ಕೊಡವೂರು ಭಾಗವಹಿಸಲಿದ್ದಾರೆ. 
ಪೂರ್ಣಿಮಾ ಜನಾರ್ದನ್ ಅಭಿನಂದನ ಭಾಷಣ ಮಾಡಲಿದ್ದಾರೆ


ಪ್ರಾರಂಭದಲ್ಲಿ ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಿ
ಕೊಡವೂರು ಶಾಲಾ ವಠಾರಕ್ಕೆ ಮೆರಣಿಗೆಯ ಮೂಲಕ ಕರೆತರಲಾಗುವುದು.


ಅಭಿನಂದನಾ ಕಾರ್ಯಕ್ರಮದ ಬಳಿಕ ಸಂಜೆ ೭ ಗಂಟೆಗೆ ಕಾಪು ರಂಗತರoಗ ಕಲಾವಿದರಿಂದ
ಸಾಮಾಜಿಕ ತುಳು ನಾಟಕ- ಕುಟ್ಯಣ್ಣನ ಕುಟುಂಬ ನಡೆಯಲಿದೆ. ಎಂದು  ಅಭಿನಂದನ
ಸಮಿತಿ ಕಾರ್ಯದರ್ಶಿ ಜನಾರ್ದನ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by